'ಅವರು' ನನ್ನ ತಾಯಿಯ ಇನ್ನೊಬ್ಬ ಮಗನಿದ್ದಂತೆ: ಯಶ್ ಯಾರಿಗ್ಹೇಳಿದ್ದು
'ಗಜಕೇಸರಿ ಚಿತ್ರದಲ್ಲಿ ನನ್ನ 'Physique' ಅಭಿಮಾನಿಗಳು ಹಾಗೂ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದಿತ್ತು. ನನ್ನ ದೇಹವನ್ನು ಆ ರೀತಿ ಹುರಿಗೊಳಿಸಿದ ಕೀರ್ತಿ ಕಿಟ್ಟಿ (ಪಾನಿಪೂರಿ ಕಿಟ್ಟಿ) ಅವರಿಗೆ ಸೇರುತ್ತದೆ'.
ಹೀಗಂತ ಕನ್ನಡ ಚಿತ್ರರಂಗದಲ್ಲಿ ರಾಕಿಂಗ್ ಸ್ಟಾರ್ ಅಂತ ಖ್ಯಾತಿ ಗಳಿಸಿರುವ ಯಶ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಪಾನಿಪೂರಿ ಕಿಟ್ಟಿ ಹಾಗೂ ಅವರ ಸಾಧನೆಯ ಬಗ್ಗೆ ಸಂತಸದಿಂದ ಹಂಚಿಕೊಂಡಿದ್ದಾರೆ.[ಫೇಸ್ ಬುಕ್ ನಲ್ಲಿ ಚರ್ಚೆ ಆಗುತ್ತಿರುವ 'ಪಾನಿ ಪೂರಿ' ಕಿಟ್ಟಿ ಯಾರು?]
ತೆಳ್ಳಗಿದ್ದ ಯಶ್ ಅವರ ಬಾಡಿ 'ಗಜಕೇಸರಿ' ಚಿತ್ರದಲ್ಲಿ ಕಟ್ಟುಮಸ್ತಾಗಿ, ಬಾಡಿ ಫಿಟ್ ಆಗಿ ಒಂಥರಾ ಲುಕ್ ಬೇರೆ ಆಗಿತ್ತು. ಇದನ್ನು ಅಭಿಮಾನಿಗಳು ಕೂಡ ಬಹಳ ಮೆಚ್ಚಿಕೊಂಡಿದ್ದರು.[ಅಂದು ದುಷ್ಮನ್, ಇಂದು ಫ್ರೆಂಡ್; ದುನಿಯಾ ವಿಜಿ ಹೇಳ್ತಿರೋದು ಯಾರ ಬಗ್ಗೆ?]
ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ 'ಮಸಲ್ ಪ್ಲಾನೆಟ್' ಎಂಬ ಜಿಮ್ ಸೆಂಟರ್ ಇದೇ ತಿಂಗಳ 24 ರಂದು ಉದ್ಘಾಟನೆ ಆಗಲಿದೆ. ಗೆಳೆಯ ಕಿಟ್ಟಿಯ ಈ ಹೊಸ ಪ್ರಯತ್ನಕ್ಕೆ ಶುಭಹಾರೈಸಿರುವ ರಾಕಿಂಗ್ ಸ್ಟಾರ್ ಯಶ್ ಅವರು ಏನೇನೂ ಹೇಳಿಕೊಂಡಿದ್ದಾರೆ ಎಂಬುದನ್ನು ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

ಯಶ್ ಅವರ ಅಣ್ತಮ್ಮ ಅಂತೆ ಕಿಟ್ಟಿ
'ಇಂದು ನನ್ನ ಹಾಗೂ ಕಿಟ್ಟಿಯವರ ಬಾಂಧವ್ಯ ಒಬ್ಬ 'ಸಲಹೆಗಾರ-ಟ್ರೈನಿ' ಗಿಂತ ಮೀರಿ ಬೆಳೆದಿದೆ. ಅವರು ನನ್ನ ತಾಯಿಗೆ ಮತ್ತೊಬ್ಬ ಮಗನಂತಾಗಿದ್ದು, ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ' - ಯಶ್ [ಯಶ್, ದುನಿಯಾ ವಿಜಯ್, ಪ್ರೇಮ್...ಎಲ್ಲರಿಗೂ 'ಇವರೇ' ಬೇಕು!]

ಯಶ್ ಶುಭ ಹಾರೈಕೆ
'ಪಾನಿಪೂರಿ ಕಿಟ್ಟಿ ಅವರ ಈ ಪ್ರಯತ್ನಕ್ಕೆ, ಪ್ರಚಂಡ ಯಶಸ್ಸು ದೊರಕಿ ಕಿಟ್ಟಿಯವರು ಇನ್ನೂ ಎತ್ತರಕ್ಕೆ ಬೆಳೆಯಲು ಮತ್ತು ಇನ್ನಷ್ಟು ಹುರಿಯಾಳುಗಳು ಅವರಿಂದ ರೂಪುಗೊಳ್ಳಲಿ ಎಂದು ಮನತುಂಬಿ ಹಾರೈಸುತ್ತೇನೆ' -ಯಶ್

ನಾಳೆ (24 ಫೆಬ್ರವರಿ)
ಇಂದು ಪಾನಿಪೂರಿ ಕಿಟ್ಟಿ ಅವರು ದೊಡ್ಡ ಮಟ್ಟದಲ್ಲಿ ತಮ್ಮದೇ ಆದ 'ಮಸಲ್ ಪ್ಲಾನೆಟ್' ಜಿಮ್ ಅನ್ನು ಬೆಳೆಸಿ, ಇದರ ಐದನೇ ಬ್ರ್ಯಾಂಚ್ ವಿದ್ಯಾರಣ್ಯಪುರದಲ್ಲಿ ನಾಳೆ (24 ಫೆಬ್ರವರಿ) ಶುಭಾರಂಭಗೊಳ್ಳಲಿದೆ. ನಾನು ಬರುತ್ತಿದ್ದೇನೆ, ಜೊತೆಗೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರೂ ಆಗಮಿಸುತ್ತಿದ್ದಾರೆ ಎಂದು ಯಶ್ ಫೇಸ್ ಬುಕ್ಕಿನಲ್ಲಿ ಸುದೀರ್ಘ ಸ್ಟೇಟಸ್ ಹಾಕಿಕೊಂಡಿದ್ದಾರೆ.

ಜಿಮ್ ನಲ್ಲಿರುವ ಸೌಲಭ್ಯಗಳು
ಲೆಸ್ ಮಿಲ್ಸ್, ಟಿ.ಆರ್.ಎಕ್ಸ್, ಯೋಗ, ಫಂಕ್ಷನಲ್ ಟ್ರೈನಿಂಗ್, ಮುಂತಾದ ಸೌಲಭ್ಯಗಳು ಪಾನಿಪೂರಿ ಕಿಟ್ಟಿ ಅವರ 'ಮಸಲ್ ಪ್ಲಾನೆಟ್' ನಲ್ಲಿ ದೊರಕಲಿವೆ. ನಾಳೆಯಿಂದಲೇ ಆರಂಭವಾಗಲಿದ್ದು, ನಿಮಗಾಗಿ ಸ್ಪೆಷಲ್ ಡಿಸ್ಕೌಂಟ್ ಸೌಲಭ್ಯ ಕೂಡ ಇದೆ.

ಯಶ್ ಅವರ ಸುದೀರ್ಘ ಸ್ಟೇಟಸ್
ರಾಕಿಂಗ್ ರಾಮಾಚಾರಿ ಯಶ್ ಅವರು ಅಣ್ತಮ್ಮ ಪಾನಿಪೂರಿ ಕಿಟ್ಟಿ ಅವರ ಬಗ್ಗೆ ಹಾಕಿಕೊಂಡಿರುವ ಉದ್ದವಾದ ಫೇಸ್ ಬುಕ್ ಸ್ಟೇಟಸ್ ಇದು.


Click it and Unblock the Notifications











