twitter
    For Quick Alerts
    ALLOW NOTIFICATIONS  
    For Daily Alerts

    'ದೇವ್ರಾಣೆ ಸುಳ್ಳು... ತಾಯಿ ಮೇಲೆ ಆಣೆ ಮಾಡ್ತೀನಿ' ಎಂದು ನಟ ಯಶ್ ಹೇಳಿದ್ಯಾಕೆ?

    By Harshitha
    |

    ಯಾದಗಿರಿಯಲ್ಲಿ ತಮ್ಮ ಕಾರಿನ ಗ್ಲಾಸ್ ನ ಅಭಿಮಾನಿಗಳು ಪೀಸ್ ಪೀಸ್ ಮಾಡಿದ ಕುರಿತು ಮಾಧ್ಯಮಗಳಲ್ಲಿ ಬರುತ್ತಿರುವ ವರದಿ ಶುದ್ಧ ಸುಳ್ಳು ಎಂದು ನಟ ಯಶ್ ಹೇಳಿದ್ದಾರೆ.

    ''ಅಭಿಮಾನಿಗಳು ನನ್ನ ಕಾರಿನ ಗಾಜು ಪುಡಿ ಪುಡಿ ಮಾಡಿಲ್ಲ. ವರದಿ ಆಗುವುದೆಲ್ಲ ನಿಜವಲ್ಲ.. ದೇವ್ರಾಣೆ... ನನ್ನ ತಾಯಿ ಮೇಲೆ ಆಣೆ ಮಾಡ್ತೀನಿ.. ಅದೆಲ್ಲ ಸುಳ್ಳು'' ಅಂತ ಪತ್ರಿಕಾಗೋಷ್ಟಿಯಲ್ಲಿ ನಟ ಯಶ್ ಸ್ಪಷ್ಟಪಡಿಸಿದ್ದಾರೆ.

    ನನ್ನ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ...

    ನನ್ನ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ...

    ''ಕಲ್ಲು ಹೊಡೆದಿದೆ ಎನ್ನುವುದು ದೇವ್ರಾಣೆ ಸುಳ್ಳು. ನನ್ನ ತಾಯಿ ಮೇಲೆ ಆಣೆ ಮಾಡಿ ಹೇಳ್ತೀನಿ... ಗಾಡಿಗೆ ಕಲ್ಲು ಹೊಡೆದಿಲ್ಲ. 'ಅಣ್ಣ ಒಂದು ಫೋಟೋ' ಅಂತ ಎಲ್ಲರೂ ಬಂದು ಬಂದು ಗ್ಲಾಸ್ ಕುಟ್ಟುತ್ತಾ ಇದ್ದರು. ಕುಟ್ಟುತ್ತಾ ಕುಟ್ಟುತ್ತಾ ಗ್ಲಾಸ್ ಬಿದ್ದಿದ್ದು. ನಾನು ಕಾರಿನ ಒಳಗೆ ಕೂತಿದ್ದೆ'' - ನಟ ಯಶ್ [ಯಾದಗಿರಿಯಲ್ಲಿ ನಿನ್ನೆ ಆಗಿದ್ದೇನು.? ನಟ ಯಶ್ ಬಾಯಿಂದ ಬಂದ ತಪ್ಪು-ಒಪ್ಪು]

    ನನ್ನ ನೋಡಲು ಕಲ್ಲು ಹೊಡೆಯುತ್ತಾರಾ.?

    ನನ್ನ ನೋಡಲು ಕಲ್ಲು ಹೊಡೆಯುತ್ತಾರಾ.?

    ''ಕಲ್ಲು ಯಾಕೆ ಹೊಡೆಯಬೇಕು. ನನ್ನ ನೋಡೋಕೆ ಕಲ್ಲು ಹೊಡೆಯುತ್ತಾರಾ.? ಸುರಪುರದಲ್ಲಿ ರೈತರ ಸಂವಾದ ಇರಲಿಲ್ಲ. ಅಭಿಮಾನಿಗಳು ನನ್ನನ್ನ ಕರೆದಿದ್ದರು. ಹತ್ತು ಸಾವಿರ ಜನ ಸೇರಿದ್ದರು. ಲೇಟ್ ಆಗಿದ್ದಕ್ಕೆ ನಾನು ಕ್ಷಮೆ ಕೇಳಿದೆ. ಜನರಿಗೂ ಅರ್ಥ ಆಗಿದೆ'' - ನಟ ಯಶ್ [ಯಾದಗಿರಿ ಅಭಿಮಾನಿಗಳ ಕೋಪಕ್ಕೆ ತುತ್ತಾದ ಯಶ್: ಕಾರಿನ ಗಾಜು ಪುಡಿ ಪುಡಿ]

    ಪೊಲೀಸರಿಗೆ ಯಶ್ ಮನವಿ

    ಪೊಲೀಸರಿಗೆ ಯಶ್ ಮನವಿ

    ''ಜನರನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ನಾನೇ ಹೋಗಿ ''ಬೇಡ, ಹೊಡೆಯಬೇಡಿ'' ಎಂದೆ'' - ನಟ ಯಶ್

    ಕಲ್ಲು ಹೊಡೆಯುವ ಕೆಲಸ ನಾನೇನು ಮಾಡಿದ್ದೇನೆ.?

    ಕಲ್ಲು ಹೊಡೆಯುವ ಕೆಲಸ ನಾನೇನು ಮಾಡಿದ್ದೇನೆ.?

    ''ನಾನು ಅಲ್ಲಿಂದ ಹೊರಡುವಾಗಲೂ, ಜನ ನನಗೆ ಹಾರ ಹಾಕ್ಬಿಟ್ಟು ಕಳುಹಿಸಿದ್ದಾರೆ. ಹೀಗಿರುವಾಗ, ನನ್ನ ಕಾರಿಗೆ ಕಲ್ಲು ಯಾಕೆ ಹೊಡೆಯುತ್ತಾರೆ.? ಕಲ್ಲು ಹೊಡೆಯುವಂತಹ ಕೆಲಸ ನಾನೇನು ಮಾಡಿದ್ದೇನೆ.?'' ಎನ್ನುತ್ತಾರೆ ನಟ ಯಶ್.

    ಅಂದು ನಡೆದಿದ್ದು ಏನು.?

    ಅಂದು ನಡೆದಿದ್ದು ಏನು.?

    ಫೆಬ್ರವರಿ 27 ರಂದು ಮಧ್ಯಾಹ್ನ 2 ಗಂಟೆಗೆ ನಟ ಯಶ್ ಸುರಪುರಕ್ಕೆ ಆಗಮಿಸಬೇಕಿತ್ತು. ಆದ್ರೆ, ನಟ ಯಶ್ ಬಂದಿದ್ದು ರಾತ್ರಿ 9 ಗಂಟೆಗೆ. ಸುಡುವ ಬಿಸಿಲಿನಲ್ಲಿ ಅಷ್ಟು ಹೊತ್ತು ಕಾದ ಜನ ಯಶ್ ಕಾರನ್ನ ಜಖಂಗೊಳಿಸಿದರು ಎಂದು ವರದಿ ಆಗಿತ್ತು.

    English summary
    Kannada Actor Yash has reacted to the media over Yadagiri incident.
    Wednesday, March 1, 2017, 14:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X