Yash Rs 3 Crore Watch: ಯಶ್ ಕಟ್ಟಿದ್ದ ವಾಚಿನ ಬೆಲೆ ಲಕ್ಷಗಳಲ್ಲ, ಕೋಟಿಗಳು!
ಕನ್ನಡ ಚಿತ್ರರಂಗದಲ್ಲಿ ಸದ್ಯ ಯಶಸ್ಸಿನ ಉತ್ತುಂಗದಲ್ಲಿ ಇರುವ ಸ್ಟಾರ್ ನಟರಲ್ಲಿ ಯಶ್ ಕೂಡ ಒಬ್ಬರು. ಕೆಜಿಎಫ್ ಚಿತ್ರದ ಮೂಲಕ ಯಶ್ ವರ್ಚ್ಚಸ್ಸು ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸ್ಯಾಂಡಲ್ ವುಡ್ ನಿಂದ ಹಿಡಿದು, ಬಾಲಿವುಡ್ ತನಕ ಯಶ್ ಪ್ರಭಾವ ಬೀರಿದ್ದಾರೆ.
ಯಶ್ ಸಿನಿಮಾಗಳಲ್ಲಿ ಹತ್ತು ಹಲವು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಾನ ರೂಪದಲ್ಲಿ ಯಶ್ ತೆರೆಯ ಮೇಲೆ ಮಿಂಚಿದ್ದಾರೆ. ಯಶ್ ತೆರೆ ಮೇಲಿನ ಲುಕ್ ಗೆ ಸಾಕಷ್ಟು ಫ್ಯಾನ್ಸ್ ಇದ್ದಾರೆ. ಅವರ ಸ್ಟೈಲನ್ನು ಹಲವರು ಫಾಲೋ ಮಾಡುತ್ತಾರೆ.
ಇನ್ನು ಯಶ್ ತೆರೆಹಿಂದಿನ ಲೈಫ್ ಸ್ಟೈಲ್ ಕೂಡ ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಇರುತ್ತೆ. ಅವರ ಕಾಸ್ಟ್ಯೂಂ ಮತ್ತು ಮ್ಯಾನರಿಸಮ್ ಸರಿಯಾಗಿ ಹೊಂದಿಕೊಳ್ಳುತ್ತವೆ. ಯಶ್ ಯಾವುದಾದರು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು ಸಾಕು, ತಮ್ಮ ಲುಕ್ ಮೂಲಕ ಗಮನ ಸೆಳೆಯುತ್ತಾರೆ. ಈಗ ಯಶ್ ತಮ್ಮ ದುಬಾರಿ ಕೈ ಗಡಿಯಾರದ ಮೂಲಕ ಸುದ್ದಿ ಆಗಿದ್ದಾರೆ.
Recommended Video


ದುಬಾರಿ ಬೆಲೆಯ ವಾಚ್ ಧರಿಸಿದ ಯಶ್!
ನಟ ಯಶ್ ಇತ್ತೀಚೆಗೆ ಕಾಣಿಸಿಕೊಂಡಿದ್ದು, ಕೆಜಿಎಫ್ 2 ಟ್ರೈಲರ್ ಲಾಂಚ್ ಕಾರ್ಯಕ್ರಮದಲ್ಲಿ. ಯಶ್ ಬ್ಯಾಕ್ ಅಂಡ್ ಬ್ಲಾಕ್ ಕಾಸ್ಟ್ಯೂಂ ನಲ್ಲಿ ಸಿಕ್ಕಾ ಪಟ್ಟೆ ಫಂಕಾಗಿ ಕಾಣಿಸುತ್ತಿದ್ದರು. ಆದರೆ ಇಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದು, ಅವರ ಕೈಯಲ್ಲಿ ಇದ್ದ ವಾಚ್. ದುಬಾರಿ ಬೆಲೆಯ ವಾಚ್ ಕಟ್ಟಿದ ಯಶ್ ಎಲ್ಲರ ಗಮನವನ್ನು ವಾಚ್ ನತ್ತ ಸೆಳೆದಿದ್ದರು. ಇದಕ್ಕೆ ಕಾರಣ ಇದು ದುಬಾರಿ ವಾಚ್ ಎನ್ನುವುದು. ದುಬಾರಿ ಎಂದರೆ ಅಷ್ಟಿಷ್ಟಲ್ಲ. ಕೋಟಿ ಬೆಲೆಯ ವಾಚ್.

3.50 ಕೋಟಿ ಬೆಲೆಯ ವಾಚ್ ಕಟ್ಟಿದ್ದ ಯಶ್!
ಹೌದು ನಟ ಯಶ್ ಧರಿಸಿದ್ದ ವಾಚ್ 'ಪಟೆಕ್ ಫಿಲಿಪ್' ಕಂಪನಿಯದ್ದು. ಈ ವಾಚಿನ ಬೆಲೆ ಸರಿ ಸುಮಾರು 3.50 ಕೋಟಿ. ಇದಕ್ಕಿಂತಲೂ ಹೆಚ್ಚಿನ ಬೆಲೆಯ ವಿಭಿನ್ನ ವಿನ್ಯಾಸದ ವಾಚ್‌ಗಳು ಇವೆ. ಯಶ್ ಧರಿಸಿದ್ದು ಜಗತ್ತಿನ ಅತ್ಯಂತ ದುಬಾರಿ ವಾಚ್ ಬ್ರಾಂಡ್‌ಗಳಲ್ಲಿ ಒಂದು. ಈ ವಾಚನ್ನು ದುಬಾರಿ ರೋಸ್ ಗೋಲ್ಡ್‌ನಿಂದ ತಯಾರಿಸಲಾಗಿದೆ. ಜೊತೆಗೆ ಅತ್ಯಂತ ಉತ್ಕೃಷ್ಟವಾದ ಲೋಹಗಳನ್ನು ಈ ವಾಚ್‌ಗೆ ಬಳಸಲಾಗಿದೆ. ಎರಡು ಶತಮಾನದ ಇತಿಹಾಸ ಈ ವಾಚ್‌ಗಿದೆ.

ಸಿಂಪಲ್ ಆಗಿದ್ರು ಯಶ್ ಹೆಚ್ಚು ಸ್ಟೈಲಿಶ್!
ನಟ ಯಶ್ ಆಗಾಗ ಸಿಂಪಲ್ ಲುಕ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಆದರೆ ಅವರು ಸಿಂಪಲ್ ಆಗಿದ್ದರು ಹೆಚ್ಚು ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಶರ್ಟ್, ಕುರ್ತಾ, ಟೀಶರ್ಟ್, ಸೂಟ್, ಪೈಜಾಮ, ಪಂಚೆ, ಪುಲ್ ಓವರ್, ಓವರ್ ಕೋಟ್ ಹೀಗೆ ನಾನಾ ಉಡುಪುಗಳಲ್ಲು ಯಶ್ ಕಾಣಿಸಿಕೊಂಡಿದ್ದಾರೆ. ಅದರೆ ಎಲ್ಲಾ ಉಡುಪುಗಳಲ್ಲು ಯಶ್ ಸಿಕ್ಕಾಪಟ್ಟೆ ಸ್ಟೈಲಿಶ್ ಎನಿಸುತ್ತಾರೆ. ತೆರೆ ಹಿಂದೆಯೂ ಯಶ್ ತಮ್ಮ ಲುಕ್ ಬಗ್ಗೆ ಹೆಚ್ಚಿನ ಗಮನ ಕೊಡುತ್ತಾರೆ.

ಯಶ್, ರಾಧಿಕಾ ಕಪಲ್ ಗೋಲ್!
ಇನ್ನು ಯಶ್ ಮಾತ್ರ ಅಲ್ಲ. ನಟಿ ರಾಧಿಕಾ ಕೂಡ ಸಿಕ್ಕಾಪಟ್ಟೆ ಸ್ಟೈಲಿಶ್. ರಾಧಿಕಾ ಯಶ್ ಸದಾ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ. ಇಬ್ಬರು ಜೊತೆಯಾಗಿ ಯಾವಾಗ ಕಾಣಿಸಿಕೊಂಡರು ತುಂಬಾನೇ ಸ್ಟೈಲಿಶ್ ಆಗಿ ಕಾಣಿಸಿಕೊಳ್ಳುತ್ತಾರೆ. ಇವರು ಹಲವು ಫೋಟೋಗಳು ಇನ್‌ಸ್ಟಾಗ್ರಾಮ್‌ನಲ್ಲಿ ಹೆಚ್ಚು ವೈರಲ್ ಆಗುತ್ತದೆ. ಈ ಸ್ಟಾರ್ ಜೋಡಿಗೆ ಸಾಕಷ್ಟು ಅಭಿಮಾನಿಗಳು ಇದ್ದಾರೆ.


Click it and Unblock the Notifications











