twitter
    For Quick Alerts
    ALLOW NOTIFICATIONS  
    For Daily Alerts

    ನ್ಯೂ ಇಯರ್ ಅಂತ ಎಣ್ಣೆ ಏಟಲ್ಲಿ ಗಾಡಿ ಓಡಿಸುವವರಿಗೆ ಯಶ್ ಕೊಟ್ಟ ಸಂದೇಶ ಇದು.!

    |

    2019 ಮುಗಿಯುವ ಹಂತಕ್ಕೆ ಬಂದೇ ಬಿಟ್ಟಿದೆ. 2020 ಬರಮಾಡಿಕೊಳ್ಳಲು ಇನ್ನೆರಡೇ ದಿನ ಬಾಕಿ ಉಳಿದಿದೆ. ಎಷ್ಟೋ ಮಂದಿ ನ್ಯೂ ಇಯರ್ ನ ಪಾರ್ಟಿ ಮಾಡುವ ಮೂಲಕ ಬರಮಾಡಿಕೊಳ್ಳುತ್ತಾರೆ. ಪಾರ್ಟಿ ಮಾಡೋದೇನೋ ಓಕೆ. ಆದ್ರೆ, ಪಾರ್ಟಿಯಲ್ಲಿ ಮದ್ಯಪಾನ ಮಾಡಿ ಬಳಿಕ ಮೈಮರೆತು ಗಾಡಿ ಓಡಿಸಿದರೆ.? ಅಪಾಯ ಕಟ್ಟಿಟ್ಟಬುತ್ತಿ.!

    ಹೊಸ ವರ್ಷದಂದು ಎಣ್ಣೆ ಏಟಿಂದ ಹೆಚ್ಚು ಅಪಘಾತ ಪ್ರಕರಣಗಳು ಘಟಿಸುವುದರಿಂದ ಬೆಂಗಳೂರು ಪೊಲೀಸರು 'ಬೀ ಸೇಫ್' ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಕೂಡ ಕೈಜೋಡಿಸಿದ್ದಾರೆ. ಹೊಸ ವರ್ಷದಂದು ಮದ್ಯಪಾನ ಮಾಡಿ ಗಾಡಿ ಓಡಿಸಬೇಡಿ, ರಸ್ತೆ ಸುರಕ್ಷತೆ ಬಗ್ಗೆ ಗಮನ ಕೊಡಿ ಎಂದು ಯಶ್ ವಿಡಿಯೋ ಮೂಲಕ ಸಂದೇಶ ಸಾರಿದ್ದಾರೆ.

    ರಸ್ತೆ ಅಪಘಾತದ ಬಗ್ಗೆ ಅಭಿಮಾನಿಗಳಿಗೆ ದರ್ಶನ್ ಮನವಿರಸ್ತೆ ಅಪಘಾತದ ಬಗ್ಗೆ ಅಭಿಮಾನಿಗಳಿಗೆ ದರ್ಶನ್ ಮನವಿ

    ''ಹೊಸ ವರ್ಷ ಪ್ರತಿ ವರ್ಷ ಬರುತ್ತದೆ. ಅದರ ಜೊತೆಗೆ ಹೊಸ ಆಸೆಗಳು, ಹೊಸ ಕನಸುಗಳು.. ಹೀಗೆ ಪ್ರತಿಯೊಬ್ಬರು ತಮ್ಮ ತಮ್ಮ ಲೈಫ್ ನ ರೀಸೆಟ್ ಮಾಡಿ ರೀಸ್ಟಾರ್ಟ್ ಮಾಡುವ ಜೋಶ್ ನಲ್ಲಿರ್ತಾರೆ. ಇದು ಹೊಸತನ ಬರಮಾಡಿಕೊಳ್ಳುವ ಸಮಯ ನಿಜ. ಹಾಗಂತ ಎಚ್ಚರ ತಪ್ಪಿ ಕುಡಿದು ಗಾಡಿ ಓಡಿಸಿದರೆ, ಪಡೆದುಕೊಳ್ಳುವುದಕ್ಕಿಂತ ಕಳೆದುಕೊಳ್ಳುವುದು ಹೆಚ್ಚು.

    Kannada Actor Yashs awareness message for New Year party goers

    ವೇಗವಾಗಿ ಬೈಕ್ ಓಡಿಸುತ್ತಿದ್ದವರನ್ನು ನಿಲ್ಲಿಸಿ ಸಲಹೆ ನೀಡಿದ ಕಿಚ್ಚ ಸುದೀಪ್ವೇಗವಾಗಿ ಬೈಕ್ ಓಡಿಸುತ್ತಿದ್ದವರನ್ನು ನಿಲ್ಲಿಸಿ ಸಲಹೆ ನೀಡಿದ ಕಿಚ್ಚ ಸುದೀಪ್

    ಒಂದು ದಿನ ಪಾರ್ಟಿ ಮಾಡಿ ಫ್ರೆಂಡ್ಸ್ ಜೊತೆ ಖುಷಿಯಾಗಿರುವ ಜೋಶಲ್ಲಿ ಮೈಮರೆತು ನೀವು ಗಾಡಿ ಓಡಿಸಿದರೆ ಅನಾಹುತ ಆಗುತ್ತೆ. ಅಪಾಯ ಕಾದಿರುತ್ತೆ. ನಿಮಗೆ ಏನಾದರೂ ಹೆಚ್ಚು ಕಮ್ಮಿ ಆದರೆ ನಿಮ್ಮನ್ನ ನಂಬಿರುವ, ನಿಮ್ಮನ್ನ ಪ್ರೀತಿಸುತ್ತಿರುವ ಜೀವಗಳು ಲೈಫ್ ಲಾಂಗ್ ನೋವು ಅನುಭವಿಸಬೇಕಾಗುತ್ತದೆ.

    ಇದಕ್ಕೆ ಪರಿಹಾರ ತುಂಬಾನೇ ಸಿಂಪಲ್. ಪಬ್ಲಿಕ್ ಟ್ರ್ಯಾನ್ಸ್ ಪೋರ್ಟ್ ಯೂಸ್ ಮಾಡಿ. ಒಟ್ನಲ್ಲಿ ಸ್ಮಾರ್ಟ್ ಆಗಿ. ಬನ್ನಿ, ರಸ್ತೆ ಸುರಕ್ಷತೆಗಾಗಿ ಬೆಂಗಳೂರು ಸಂಚಾರ ಪೊಲೀಸರ ಜೊತೆಗೆ ಕೈ ಜೋಡಿಸೋಣ. ಹ್ಯಾಪಿ ನ್ಯೂ ಇಯರ್. ಬೀ ಸೇಫ್'' ಎಂದು ವಿಡಿಯೋ ಮೂಲಕ ನಟ ಯಶ್ ಸಂದೇಶ ನೀಡಿದ್ದಾರೆ. ಹಾಗಾದ್ರೆ, ರಸ್ತೆ ಸುರಕ್ಷತೆ ಬಗ್ಗೆ ನೀವು ಗಮನ ಹರಿಸ್ತೀರಾ ಅಲ್ವಾ.?

    Read more about: yash ಯಶ್
    English summary
    Kannada Actor Yash's awareness message for New Year party goers.
    Sunday, December 29, 2019, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X