ರಾಕಿಭಾಯ್ ಗೆ 'ರಾಖಿ' ಕಟ್ಟಿ ಸಂಭ್ರಮಿಸಿದ ಸಹೋದರಿ
ಇಂದು ದೇಶದ ಜನತೆಗೆ ಡಬಲ್ ಸಂಭ್ರಮದಲ್ಲಿದ್ದಾರೆ. ಒಂದೆಡೆ 73ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಮತ್ತೊಂದೆಡೆ ಸಹೋದರ-ಸಹೋದರಿಯ ಹಬ್ಬ ರಕ್ಷ ಬಂಧನವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ.
ಇಂದು ಸಹೋದರಿಯರು, ಸಹೋದರರಿಗೆ ರಾಖಿ ಕಟ್ಟುವ ಮೂಲಕ ರಕ್ಷ ಬಂಧನವನ್ನು ಸೆಲೆಬ್ರೇಟ್ ಮಾಡುತ್ತಿದ್ದಾರೆ. ಸ್ಯಾಂಡಲ್ ವುಡ್ ನ ಬೆಸ್ಟ್ ಅಣ್ಣ ತಂಗಿಯರಲ್ಲಿ ರಾಕಿಂಗ್ ಸ್ಟಾರ್ ಮತ್ತು ಅವರ ಸಹೋದರಿ ನಂದಿನಿ ಕೂಡ ಒಬ್ಬರು.
ಪ್ರತೀ ವರ್ಷ ರಕ್ಷ ಬಂಧನ ಹಬ್ಬವನ್ನು ನಂದಿನಿ ಅದ್ಧೂರಿಯಾಗಿ ಆಚರಿಸುತ್ತಾರೆ. ಈ ವರ್ಷ ಕೂಡ ಪ್ರೀತಿಯ ಸಹೋದರ ಯಶ್ ಗೆ ರಾಕಿ ರಾಖಿ ಕಟ್ಟಿ ಸಂಭ್ರಮಿಸಿದ್ದಾರೆ. ಈ ಸಂದರ್ಭದಲ್ಲಿ ಯಶ್ ಸಹೋದರಿಯ ಜೊತೆ ಒಂದು ಪೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಫೊಟೋ ಅಪ್ ಲೋಡ್ ಮಾಡಿದ್ದಾರೆ.

ಜೊತೆಗೆ ಒಂದು ಸುಂದರವಾದ ಕ್ಯಾಪ್ಷನ್ ಕೂಡ ಹಾಕಿದ್ದಾರೆ. "ಈ ರಾಕಿ ಇರುವಾಗ ನೀನು ಚಿಂತಿಸಬೇಕಾಗಿಲ್ಲ. ನೀ ಕಟ್ಟಿರುವ ರಾಖಿ ನನ್ನೊಂದಿಗೆ ಇರುವಾಗ ನಾನು ಚಿಂತಿಸುವುದಿಲ್ಲ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಎಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯವನ್ನು ತಿಳಿಸಿದ್ದಾರೆ.


Click it and Unblock the Notifications











