»   » ಶಿವಣ್ಣನ 'ಟಗರು' ಚಿತ್ರಕ್ಕೆ ರಾಕಿಂಗ್ ಸ್ಟಾರ್ ಕಳುಹಿಸಿದ ವಿಡಿಯೋ ಸಂದೇಶ

ಶಿವಣ್ಣನ 'ಟಗರು' ಚಿತ್ರಕ್ಕೆ ರಾಕಿಂಗ್ ಸ್ಟಾರ್ ಕಳುಹಿಸಿದ ವಿಡಿಯೋ ಸಂದೇಶ

Posted By:
Subscribe to Filmibeat Kannada

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದಲ್ಲಿ ಮೂಡಿಬರುತ್ತಿರುವ 'ಟಗರು' ಚಿತ್ರದ ಹವಾ, ಅಬ್ಬರ, ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೊಸ ವರ್ಷದ ಮೊದಲ ತಿಂಗಳಿನಲ್ಲಿ ಹ್ಯಾಟ್ರಿಕ್ ಹೀರೋ ಅಭಿಮಾನಿಗಳಿಗೆ 'ಟಗರು' ಚಿತ್ರವನ್ನ ನೋಡುವ ಅವಕಾಶ ಸಿಗಲಿದೆ.

'ಟಗರು' ಚಿತ್ರದ ಟೀಸರ್ ಮತ್ತು ಹಾಡುಗಳು ರಿಲೀಸ್ ಆಗಿದ್ದು ಎಲ್ಲರಿಂದಲೂ ಮೆಚ್ಚುಗೆ ಗಳಿಸಿಕೊಂಡಿದೆ. ದುನಿಯಾ ಸೂರಿ ಮತ್ತು ಶಿವಣ್ಣ ಕಾಂಬಿನೇಷನ್ ಮೇಲೆ ನಿರೀಕ್ಷೆ ಹೆಚ್ಚಿದ್ದು, ರಾಕಿಂಗ್ ಸ್ಟಾರ್ ಯಶ್ ಗೂ ಕೂಡ ಆ ಕುತೂಹಲ ಇದೆ.

ಹೌದು, ರಾಕಿಂಗ್ ಸ್ಟಾರ್ ಯಶ್ 'ಟಗರು' ಚಿತ್ರದ ಬಗ್ಗೆ ಮಾತನಾಡಿದ್ದು, ಒಂದು ವಿಡಿಯೋ ಸಂದೇಶವನ್ನ ಕಳುಹಿಸಿದ್ದಾರೆ. 'ಟಗರು' ಚಿತ್ರದ ಬಗ್ಗೆ ಯಶ್ ಏನು ಮಾತನಾಡಿದ್ರು? ಶಿವಣ್ಣನ ಬಗ್ಗೆ ಏನಂದ್ರು ಎಂದು ತಿಳಿಯಲು ಮುಂದೆ ಓದಿ....

ಶಿವಣ್ಣನ ಪೊಲೀಸ್ ಲುಕ್ ಸೂಪರ್

''ನಮ್ಮ ಪ್ರೀತಿ ಅಣ್ಣ ಶಿವಣ್ಣ ಅಭಿನಯದ 'ಟಗರು' ಮೈಯಲ್ಲಾ ಪೊಗರು ಚಿತ್ರದ ಟೀಸರ್ ನಾನು ನೋಡಿದ್ದೀನಿ. ಸೂರಿ ಅವರ ನಿರ್ದೇಶನದ ಚಿತ್ರ. ಶಿವಣ್ಣ ಅವರನ್ನ ಎಷ್ಟು ಚೆನ್ನಾಗಿ ತೋರಿಸಿದ್ದಾರೆ. ಆ ಪೊಲೀಸ್ ಲುಕ್ ನಲ್ಲಿ ತುಂಬ ಹೊಸದಾಗಿ ಕಾಣ್ತಿದ್ದಾರೆ''- ಯಶ್, ನಟ

ರೈತರ ಜೊತೆ ಹೋರಾಟಕ್ಕೆ ಮುಂದಾದ ಶಿವರಾಜ್ ಕುಮಾರ್ ಹಾಗೂ ಯಶ್

'ಟಗರು' ದೊಡ್ಡ ಸೌಂಡ್ ಮಾಡುತ್ತೆ

''ಶಿವಣ್ಣ ಎಲ್ಲಿರ್ತಾರೋ ಅಲ್ಲೊಂದು ಎನರ್ಜಿ ಇರುತ್ತೆ. ಅಲ್ಲೊಂದು ಫೋರ್ಸ್ ಇರುತ್ತೆ. ಶಿವಣ್ಣ ಮತ್ತು ಸೂರಿ ಕಾಂಬಿನೇಷನ್ ನಲ್ಲಿ ಬರ್ತಿರೋ ಈ ಟಗರು ನನ್ನ ಪ್ರಕಾರ ತುಂಬ ಮಟ್ಟದಲ್ಲಿ ಸೌಂಡ್ ಮಾಡುತ್ತೆ. ಆ ಟೀಸರ್ ನಲ್ಲಿ ಸುಳಿವು ಸಿಕ್ಕಿದೆ''

ಸಂಗೀತದ ಪ್ರೇಕ್ಷಕರನ್ನ ಆಹ್ವಾನಿಸುತ್ತಿದೆ

''ಮ್ಯೂಸಿಕ್ ತುಂಬ ಇಂಟ್ರೆಸ್ಟಿಂಗ್ ಆಗಿದೆ. ಹಿನ್ನೆಲೆ ಸಂಗೀತ ನನಗೆ ಕೇಳಿದಾಗ ತುಂಬ ಫ್ರೆಶ್ ಆಗಿದೆ ಅನಿಸುತ್ತೆ. ಈ ಚಿತ್ರದ ಎಲ್ಲ ಕಮರ್ಷಿಯಲ್ ಅಂಶಗಳಿಗೆ ಆಹ್ವಾನ ಇದ್ದಂತೆ ಚಿತ್ರದ ಹಾಡುಗಳಿವೆ. ನಿರ್ಮಾಪಕ ಶ್ರೀಕಾಂತ್ ಮತ್ತು ನಾಗು ಅವರಿಗೆ ಒಳ್ಳೆಯದಾಗಲಿ'' - ಯಶ್, ನಟ

'ಟಗರು' ಕ್ರೇಜ್ ನೋಡಿ ಪೊಗರು ಹೆಚ್ಚಿಸಿಕೊಂಡ ಶಿವಣ್ಣ ಫ್ಯಾನ್ಸ್

ಪಿ.ಆರ್.ಕೆ ಆಡಿಯೋ ಸಂಸ್ಥೆ ಇತಿಹಾಸ ನಿರ್ಮಿಸಲಿ

''ಅಪ್ಪು ಅವರ ಆಡಿಯೋ ಕಂಪನಿಯಲ್ಲಿ ಟಗರು ಹಾಡುಗಳು ಬಂದಿದೆ. ಪುನೀತ್ ಅವರಿಗೂ ದೊಡ್ಡ ಹೆಸರು ತರಲಿ. ವಜ್ರೇಶ್ವರಿ ಸಂಸ್ಥೆಯನ್ನ ಕರ್ನಾಟಕದ ಇತಿಹಾಸದಲ್ಲಿ ಹೇಗೆ ಮರೆಯೋದಕ್ಕೆ ಸಾಧ್ಯವಿಲ್ಲವೋ ಅದೇ ರೀತಿ ಪಿಆರ್ ಕೆ ಸಂಸ್ಥೆ ಕೂಡ ಇತಿಹಾಸವಾಗಲಿ'' ಎಂದು ಶುಭಹಾರೈಸಿದ್ದಾರೆ.

ಯಶ್ ಮಾತನಾಡಿರುವ ವಿಡಿಯೋ ನೋಡಿ

English summary
kannada actor, rocking star yash spoke about hatric hero shiva rajkumar starrer tagaru movie. the movie deirected by duniya suri.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X