»   » 'ರವಿ ಸರ್ ಗೆ ಇಷ್ಟವಾಗಿದ್ದನ್ನು ವಿಭಿನ್ನವಾಗಿ ಹೇಳಿದ್ದಾರೆ' ಯಶ್

'ರವಿ ಸರ್ ಗೆ ಇಷ್ಟವಾಗಿದ್ದನ್ನು ವಿಭಿನ್ನವಾಗಿ ಹೇಳಿದ್ದಾರೆ' ಯಶ್

Posted By:
Subscribe to Filmibeat Kannada

'ಕಲಾವಿದ' ರವಿಚಂದ್ರನ್ ಅವರ ಕನಸಿನ ಪ್ರಯೋಗ 'ಅಪೂರ್ವ' ಸಿನಿಮಾದ ಬಗ್ಗೆ ಏನೂ ಕಸುಬು ಇಲ್ಲದವರು ಏನೇನೋ ಮಾತನಾಡಿದರೂ, ಕೂಡ ಕನ್ನಡ ಚಿತ್ರರಂಗದ ಸ್ಟಾರ್ ಗಳು ಚಿತ್ರವನ್ನು ಗುಣಗಾನ ಮಾಡುತ್ತಿದ್ದಾರೆ.

ಈ ಮೊದಲು ನಿರ್ದೇಶಕ ಯೋಗರಾಜ್ ಭಟ್, ಕಿಚ್ಚ ಸುದೀಪ್ ಮತ್ತು ನಟ ರಾಜೇಂದ್ರ ಕಾರಂತ್ ಅವರು ಚಿತ್ರದ ಬಗ್ಗೆ ಬೇಕಾ ಬಿಟ್ಟಿಯಾಗಿ ಅಪಪ್ರಚಾರ ಮಾಡಿದವರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದರು.[ರವಿಮಾಮನನ್ನು ಕಿಚಾಯಿಸುತ್ತಿರುವವರ ವಿರುದ್ಧ ಕಿಚ್ಚನ ಕಿಚ್ಚು]


Kannada Actor Yash speaks about kannada movie 'Apoorva'

ಇದೀಗ ರಾಕಿಂಗ್ ಸ್ಟಾರ್ ಯಶ್ ಅವರು ರವಿಮಾಮ ಅವರ ಕನಸಿನ ಕೂಸು 'ಅಪೂರ್ವ' ಚಿತ್ರದ ಬಗ್ಗೆ ಚಿನ್ನದಂತಹ ಮಾತುಗಳನ್ನಾಡಿದ್ದಾರೆ. ಜೊತೆಗೆ 'ಅಪೂರ್ವ' ಸಿನಿಮಾದ ಬಗ್ಗೆ ಮಾತನಾಡಿರುವ ಯೋಗರಾಜ್ ಭಟ್ ಅವರಿಗೆ ತಮ್ಮ ಬೆಂಬಲ ಕೂಡ ಸೂಚಿಸಿದ್ದಾರೆ.[ರವಿಚಂದ್ರನ್ ಬಗ್ಗೆ ಕೊಂಕು ನುಡಿದವರಿಗೆ ಗುಂಡ್ ಪಿನ್ ಚುಚ್ಚಿದ ಯೋಗರಾಜ್ ಭಟ್]


Kannada Actor Yash speaks about kannada movie 'Apoorva'

"ಅಪೂರ್ವ' ಸಿನಿಮಾ ನೋಡಿ ರವಿಚಂದ್ರನ್ ಸರ್ ಬಗ್ಗೆ ಕೆಲವರು ಹಗುರವಾಗಿ ಮಾತನಾಡಿರುವ ಬಗ್ಗೆ ಯೋಗರಾಜ್ ಸರ್ ಪತ್ರ ಬರೆದಿದ್ದು ಓದಿದೆ. ಕಲಾವಿದರು ಕೆಲಸ ಮಾಡುವಾಗ ಸಕ್ಸಸ್, ಫೈಲ್ಯೂರ್ ಬಗ್ಗೆ ಯೋಚನೆ ಮಾಡಲ್ಲ. ರವಿಚಂದ್ರನ್ ಸರ್ ಇದರಲ್ಲಿ ಎಲ್ಲರಿಗಿಂತ ಮುಂದೆ. ಎಷ್ಟೋ ವರ್ಷ ಒಂದೇ ಸಿನಿಮಾ ಬಗ್ಗೆ ತಪಸ್ಸು ಮಾಡುತ್ತಾರೆ".


"ಒಂದು ಸಿನಿಮಾ ತೆರೆ ಕಂಡಾಗ ನಾನಾ ಕಾರಣಗಳ ಮೇಲೆ ಜನರು ಅದರ ಹಣೆಬರಹ ನಿರ್ಧರಿಸುತ್ತಾರೆ. ಆದರೆ ಸಿನಿಮಾ ಹಿಂದಿರುವ ವ್ಯಕ್ತಿ ಹಾಗೂ ಅವನಲ್ಲಿರೊ ಕಲೆಗೆ ಕೊಡಬೇಕಾದ ಗೌರವ ಎಂದಿಗೂ ಕಡಿಮೆಯಾಗಬಾರದು. 'ಅಪೂರ್ವ' ಕೂಡ ಒಂದು ಪ್ರಯೋಗ, ಅವರಿಗೆ ಇಷ್ಟವಾಗಿರೋ ಸಂಗತಿ ಒಂದನ್ನು ಜನರಿಗೆ ವಿಭಿನ್ನ ಶೈಲಿಯಲ್ಲಿ ಹೇಳಲು ಪ್ರಯತ್ನಿಸಿದ್ದಾರೆ. ಅದನ್ನು ಗೌರವಿಸೋಣ, 'ಪ್ರೇಮಲೋಕ'ದಂತಹ ಸಿನಿಮಾ ಕೊಟ್ಟವರನ್ನು ಪ್ರೀತ್ಸೋಣ'


Kannada Actor Yash speaks about kannada movie 'Apoorva'

ಹೀಗಂತ 'ಮಾಸ್ಟರ್ ಪೀಸ್' ನಟ ರಾಕಿಂಗ್ ಸ್ಟಾರ್ ಯಶ್ ಅವರು ತಮ್ಮ ಫೇಸ್ ಬುಕ್ಕಿನಲ್ಲಿ ಮನಸಾರೆ ಬರೆದುಕೊಂಡಿದ್ದಾರೆ.English summary
Kannada Actor Yash spoke about Kannada Actor Ravichandran's One Man Show Kannada Movie 'Apoorva'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada