For Quick Alerts
  ALLOW NOTIFICATIONS  
  For Daily Alerts

  ಅಭಿಮಾನಿಗಳು ತಯಾರಿಸಿದ 'ಕೆಜಿಎಫ್-2' ಚಿತ್ರದ ಸಂಜಯ್ ದತ್ ಪೋಸ್ಟರ್ ವೈರಲ್

  |
  KGF 2 : A new fan made poster is going viral

  ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಾರಿ ನಿರೀಕ್ಷೆಯ ಕೆಜಿಎಫ್ ಚಾಪ್ಟರ್-2 ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಬೆಂಗಳೂರು, ಮೈಸೂರು, ಕೋಲಾರ, ಹೈದರಾಬಾದ್ ಗಳಲ್ಲಿ ಕೆಜಿಎಫ್-2 ಚಿತ್ರೀಕರಣ ಮಾಡಲಾಗುತ್ತಿದೆ. ಮಳೆಯ ಕಾರಣದಿಂದ ಚಿತ್ರೀಕರಣ ಕೊಂಚ ನಿಧಾನವಾಗಿದೆ.

  ಚಾಪ್ಟರ್-2 ಮೇಲಿನ ನಿರೀಕ್ಷೆ ದುಪ್ಪಟ್ಟಾಗಲು ಕಾರಣ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್. ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್ ಈಗಾಗಲೆ ಚಿತ್ರತಂಡ ಸೇರಿಕೊಂಡಿದ್ದಾರೆ. ಸಂಜಯ್ ದತ್ ಎಂಟ್ರಿ ಕೆಜಿಎಫ್-2 ಚಿತ್ರವನ್ನು ಮತ್ತೊಂದು ಲೆವೆಲ್ ಗೆ ಕರೆದೊಯ್ದಿದೆ. ಈಗಾಗಲೆ ಚಿತ್ರತಂಡ ಸಂಜಯ್ ದತ್ ಎಂಟ್ರಿಯಾದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

  ಎಚ್ಚರಿಕೆ.....ಪ್ರಶಾಂತ್ ನೀಲ್ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ!ಎಚ್ಚರಿಕೆ.....ಪ್ರಶಾಂತ್ ನೀಲ್ ಹೆಸರಿನಲ್ಲಿ ದಾರಿ ತಪ್ಪಿಸುವ ಕೆಲಸ!

  ಅದು ಬಿಟ್ಟರೆ ಚಿತ್ರದಿಂದ ಯಾವುದೆ ಮಾಹಿತಿ ಹೊರಬಿದ್ದಿಲ್ಲ. ಯಾವುದೆ ಪೋಸ್ಟರ್ ಕೂಡ ರಿವೀಲ್ ಆಗಿಲ್ಲ. ಕೆಜಿಎಫ್-2ಗಾಗಿ ಕಾತುರದಿಂದ ಕಾಯುತ್ತಿರುವ ಅಭಿಮಾನಿಗಳೇ ಈಗ ಚಿತ್ರದ ಪೋಸ್ಟರ್ ಅನ್ನು ತಯಾರಿಸಿ ರಿಲೀಸ್ ಮಾಡಿದ್ದಾರೆ. ಈ ಪೋಸ್ಟರ್ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಈ ಪೋಸ್ಟರ್ ನೋಡಿದರೆ ಚಿತ್ರತಂಡವೆ ಅಧಿಕೃತವಾಗಿ ರಿಲೀಸ್ ಮಾಡಿದ ಪೋಸ್ಟರ್ ಎನಿಸುತ್ತೆ. ಈ ಪೋಸ್ಟರ್ ನಲ್ಲಿ ಸಂಜಯ್ ದತ್ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ರಕ್ತ ಸಿಕ್ತವಾಗಿರುವ ಸಂಜಯ್ ದತ್ ಮಾಸ್ ಲುಕ್ ನೋಡಿದರೆ ಕೆಜಿಎಫ್-2 ಸಿನಿಮಾದ ಲುಕ್ ಇದ್ದ ಹಾಗೆಯೆ ಇದೆ. ಕೆಜಿಎಫ್-2 ಚಿತ್ರದ ಕ್ರೇಸ್ ಹೇಗಿದೆ ಎನ್ನುವುದಕ್ಕೆ ಇದು ಚಿಕ್ಕ ಉದಾಹರಣೆ ಅಷ್ಟೆ. ಈಗಾಗಲೆ ಸಾಕಷ್ಟು ಫ್ಯಾನ್ ಮೇಡ್ ಪೋಸ್ಟರ್ ಗಳು ಹರಿದಾಡುತ್ತಿರುತ್ತವೆ.

  ಕೆಜಿಎಫ್-2 ಚಿತ್ರದ ಚಿತ್ರೀಕರಣ ಇನ್ನು ಸಾಕಷ್ಟು ಬಾಕಿ ಇದೆ. ಡಿಸೆಂಬರ್ ಕೊನೆಯಲ್ಲಿ ಚಿತ್ರೀಕರಣ ಮುಗಿಯಲಿದೆ ಎಂದು ಹೇಳಲಾಗುತ್ತಿದೆ. ಒಂದು ವೇಳೆ ಡಿಸೆಂಬರ್ ಅಥವಾ ಜನವರಿಯಲ್ಲಿ ಚಿತ್ರೀಕರಣ ಮುಗಿದರೆ ಬೇಸಿಗೆ ರಜೆ ಸಮಯದಲ್ಲಿ ಅಂದರೆ ಏಪ್ರಿಲ್ ನಲ್ಲಿ ರಿಲೀಸ್ ಮಾಡುವ ಪ್ಲಾನ್ ಮಾಡಿದೆ ಚಿತ್ರತಂಡ. ಚಾಪ್ಟರ್-1 ಗಿಂತ ಚಾಪ್ಟರ್-2 ಭಯಾನಕವಾಗಿರಲಿದೆಯಂತೆ. ಹಾಗಾಗಿ ಚಿತ್ರಪ್ರಿಯರಲ್ಲಿ ಕುತೂಹಲ ದುಪ್ಪಟ್ಟಾಗಿದೆ.

  English summary
  Kannada actor Yash starrer KGF-2 fan made poster viral in social media. Fans are preparing Sanjay Dutt poster from KGF-2 film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X