'ಕೆಜಿಎಫ್ ಚಾಪ್ಟರ್-2' ರಿಲೀಸ್ ಡೇಟ್ ಬಹಿರಂಗ

Recommended Video

KGF Movie : 'ಕೆಜಿಎಫ್ ಚಾಪ್ಟರ್-2' ರಿಲೀಸ್ ಡೇಟ್ ಬಹಿರಂಗ | FILMIBEAT KANNADA

ಸ್ಯಾಂಡಲ್ ವುಡ್ ಮಾತ್ರವಲ್ಲದೆ ಭಾರತೀಯ ಚಿತ್ರರಂಗವೆ ಕಾತುರದಿಂದ ಕಾಯುತ್ತಿರುವ 'ಕೆಜಿಎಫ್-2' ಚಿತ್ರದ ರಿಲೀಸ್ ಡೇಟ್ ಬದಲಾಗಿದೆ. ಮೊದಲ ಚಾಪ್ಟರ್ ಮೂಲಕ ಅಭಿಮಾನಿಗಳ ನಿದ್ದೆ ಗೆಡಿಸಿರುವ ರಾಕಿಭಾಯ್ ರಿ ಎಂಟ್ರಿಗೆ ಚಿತ್ರಾಭಿಮಾನಿಗಳು ಕಾಯುತ್ತಿದ್ದಾರೆ. ಅಭಿಮಾನಿಗಳಿಗೀಗ ಸಿಹಿ ಸುದ್ದಿಯೊಂದು ಸಿಕ್ಕಿದೆ.

ಹೌದು, 'ಕೆಜಿಎಫ್ ಚಾಪ್ಟರ್-2' ನಿಗದಿಯಾದ ಸಮಯಕ್ಕಿಂತ ಎಂಟು ತಿಂಗಳು ಮೊದಲೆ ತೆರೆಗೆ ಬರುತ್ತಿದೆಯಂತೆ. ಅಂದ್ರೆ ಚಿತ್ರತಂಡದ ಪ್ಲಾನ್ ಪ್ರಕಾರ 'ಕೆಜಿಎಫ್-2 'ಮುಂದಿನ ವರ್ಷ ಡಿಸೆಂಬರ್ ನಲ್ಲಿ ತೆರೆಗೆ ಬರಬೇಕಿತ್ತು. ಆದ್ರೀಗ ಮೂಲಗಳ ಪ್ರಕಾರ 'ಕೆಜಿಎಫ್-2' ಮುಂದಿನ ವರ್ಷ ಸಮ್ಮರ್ ನಲ್ಲಿ ಅಂದ್ರೆ ಏಪ್ರಿಲ್ ತಿಂಗಳಲ್ಲಿ ತೆರೆಗೆ ಬರುತ್ತಿದೆಯಂತೆ.

'ಕೆಜಿಎಫ್ ಚಾಪ್ಟರ್-1' ಕಳೆದ ವರ್ಷ ಅಂದ್ರೆ 2018 ಡಿಸೆಂಬರ್ 21ಕ್ಕೆ ರಿಲೀಸ್ ಆಗಿತ್ತು. ಚಾಪ್ಟರ್-2 ಕೂಡ 2020 ಡಿಸೆಂಬರ್ ಗೆ ರಿಲೀಸ್ ಮಾಡಲಾಗುತ್ತೆ ಅಂತ ಅಭಿಮಾನಿಗಳು ಅಂದುಕೊಂಡಿದ್ದರು. ಆದ್ರೀಗ ನಿಗದಿಕ್ಕಿಂತ ಎಂಟು ತಿಂಗಳು ಮೊದಲೆ ತೆರೆಗೆ ಬರುತ್ತಿದೆ ಎನ್ನುವ ಸುದ್ದಿ ಕೇಳಿ ಅಭಿಮಾನಿಗಳ ಸಂತಸ ಇಮ್ಮಡಿಗೊಂಡಿದೆ.

Kannada Actor Yash Starrer KGF-2 May Set To Release On April

ಅಂದ್ಹಾಗೆ ದಿಢೀರನೆ ರಿಲೀಸ್ ಪ್ಲಾನ್ ಬದಲಾಗಲು ಕಾರಣ, ಚಿತ್ರತಂಡ ಅಂದುಕೊಂಡಿದ್ದಕ್ಕಿಂತ ಮೊದಲೆ ಚಿತ್ರೀಕರಣ ಮುಕ್ತಾಯವಾಗುತ್ತಂತೆ. ಅಂದ್ರೆ ಈ ವರ್ಷದ ಕೊನೆಯೊಳಗೆ ಚಿತ್ರೀಕರಣ ಮುಕ್ತಾಯವಾಗುವ ಸಾಧ್ಯತೆ ಇದೆ. ಬೇಗ ಮುಕ್ತಾಯ ಆದ್ರೆ ಪೊಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೆಚ್ಚಿನ ಸಮಯ ಸಿಗುತ್ತೆ. ಹಾಗಾಗಿ ಏಪ್ರಿಲ್ ನಲ್ಲೆ ತೆರೆಗೆ ಬರುವ ಸಾಧ್ಯತೆ ಇದೆ.

ಅಂದ್ಹಾಗೆ ಈಗಗಾಲೆ ಚಿತ್ರೀಕರಣ ಪ್ರಾರಂಭವಾಗಿದ್ದು ಮೈಸೂರಿನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಅಧೀರ ಪಾತ್ರಧಾರಿ ಬಾಲಿವುಡ್ ನಟ ಖಳನಯಾಕ್ ಸಂಜಯ್ ದತ್ ಕೂಡ ಭಾಗಿಯಾಗಿದ್ದಾರೆ. ಭರ್ಜರಿಯಾಗಿ ಚಿತ್ರೀಕರಣ ನಡೆಯುತ್ತಿರುವುದು ನೋಡಿದ್ರೆ ಚಿತ್ರೀಕರಣ ಈ ವರ್ಷದ ಕೊನೆಯಲ್ಲಿ ಮುಗಿಸುವ ಸಾಧ್ಯತೆ ಇದೆ.ಕೆಜಿಎಫ್ ಪಾರ್ಟ್-2 ಮೊದಲ ಭಾಗಕ್ಕಿಂತ ರೋಚಕವಾಗಿರಲಿದೆಯಂತೆ. ಹಾಗಾಗಿ ಕೆಜಿಎಫ್-2 ಯಾವಾಗ ತೆರೆಗೆ ಬರುತ್ತೆ ಅಂತ ಕಾಯುತ್ತಿದ್ದಾರೆ ಚಿತ್ರಾಭಿಮಾನಿಗಳು.

More from Filmibeat

English summary
Kannada actor Yash starrer KGF-2 release date fix. Most expected KGF-2 may set to release on April.
Read more about: yash kgf 2 ಯಶ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X