For Quick Alerts
  ALLOW NOTIFICATIONS  
  For Daily Alerts

  ರಾಕಿಂಗ್ ಸ್ಟಾರ್ 'ಮಾಸ್ಟರ್ ಪೀಸ್' ಆಗಿದ್ದು ಇದೇ ದಿನ

  |
  ಮಾಸ್ಟರ್ ಪೀಸ್ ರಿಲೀಸ್ ಆಗಿದ್ದು ದಿಸೆಂಬರ್ ತಿಂಗಳಲ್ಲಿ | FILMIBEAT KANNADA

  ಡಿಸೆಂಬರ್ ತಿಂಗಳು ಕನ್ನಡ ಚಿತ್ರರಂಗದ ಪಾಲಿಗೆ ಲಕ್ಕಿ ತಿಂಗಳು. ಡಿಸೆಂಬರ್ ನಲ್ಲಿ ರಿಲೀಸ್ ಆದ ಸಾಕಷ್ಟು ಚಿತ್ರಗಳು ಉತ್ತಮ ಪ್ರದರ್ಶನ ಕಂಡಿರುವುದಲ್ಲದೆ, ದಾಖಲೆ ನಿರ್ಮಿಸಿವೆ. ರಾಕಿಂಗ್ ಸ್ಟಾರ್ ಯಶ್ ಪಾಲಿಗೂ ಡಿಸೆಂಬರ್ ಲಕ್ಕಿ ಎನ್ನುವುದು ಅನೇಕ ಬಾರಿ ಸಭೀತಾಗಿದೆ. ಯಶ್ ಅಭಿನಯದ ಮಾಸ್ಟರ್ ಸಿನಿಮಾ ಕೂಡ ಡಿಸೆಂಬರ್ ನಲ್ಲಿ ತೆರೆಗೆ ಬಂದಿದೆ.

  ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡ ಮಾಸ್ಟರ್ ಪೀಸ್ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 4 ವರ್ಷಗಳು ಕಳೆದಿವೆ. ಡಿಸೆಂಬರ್ 25, 2015ರಲ್ಲಿ ಸಿನಿಮಾ ತೆರೆಗೆ ಬಂದಿತ್ತು. ಮಂಜು ಮಾಂಡವ್ಯ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ರಾಕಿ ಭಾಯ್ ಜೊತೆ ನಾಯಕಿಯಗಿ ಶಾನ್ವಿ ಶ್ರೀವಾಸ್ತವ ಕಾಣಿಸಿಕೊಂಡಿದ್ದರು.

  ಹೊಂಬಾಳೆ ಫಿಲ್ಮ್ಸ್ ಗೆ 6 ವರ್ಷ: ಪಾರ್ಟಿಯಲ್ಲಿ ಪುನೀತ್, ಯಶ್ ಭಾಗಿಹೊಂಬಾಳೆ ಫಿಲ್ಮ್ಸ್ ಗೆ 6 ವರ್ಷ: ಪಾರ್ಟಿಯಲ್ಲಿ ಪುನೀತ್, ಯಶ್ ಭಾಗಿ

  ವಿ ಹರಿಕೃಷ್ಣ ಸಂಗೀತ ಚಿತ್ರಕ್ಕಿತ್ತು. ಕತೆ, ರಾಕಿಂಗ್ ಸ್ಟಾರ್ ಅಭಿನಯ, ಆಕ್ಷನ್, ಮುಖ್ಯವಾಗಿ ಚಿತ್ರದ ಹಾಡುಗಳು ಚಿತ್ರಾಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ವಿಶೇಷ ಅಂದರೆ ಚಿತ್ರ ದಾಖಲೆಯ ಕಲೆಕ್ಷನ್ ಮಾಡಿತ್ತು ಎಂದು ಹೇಳಲಾಗುತ್ತಿದೆ. ಮೂಲಗಳ ಪ್ರಕಾರ ಮಾಸ್ಟರ್ ಪೀಸ್ ಬರೋಬ್ಬರಿ 45 ಕೋಟಿ ಬಾಚಿಕೊಂಡಿದೆಯಂತೆ.

  ಮಾಸ್ಟರ್ ಪೀಸ್ ನಂತರ ಯಶ್ ಸಂತು ಸ್ಟ್ರೈಟ್ ಫಾರ್ವಡ್ ಸಿನಿಮಾದಲ್ಲಿ ಮಿಂಚಿದರು. ಆ ನಂತರ ಕೆಜಿಎಫ್ ಮೂಲಕ ಇಡೀ ದೇಶವೆ ಬೆರಗಾಗುವಂತೆ ಅಬ್ಬರಿಸಿದರು ಯಶ್. ಸದ್ಯ ಯಶ್ ಕೆಜಿಎಫ್-2 ಪಾರ್ಟ್-2ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕೆಜಿಎಫ್-2 ಚಿತ್ರದ ಚಿತ್ರೀಕರಣ ಬರದಿಂದ ನಡೆಯುತ್ತಿದೆ. ಮುಂದಿನ ವರ್ಷ ಬೇಸಿಗೆ ರಜೆಯಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ.

  Read more about: yash ಯಶ್
  English summary
  Kannada actor Yash starrer Masterpiece completed 4 years. Masterpiece released on 2015 December 24th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X