ವಿದೇಶದಲ್ಲಿ 'ಮಾಸ್ಟರ್ ಪೀಸ್' ಹವಾ ಬಲು ಜೋರು ಗುರು

By Suneetha

ಇಡೀ ಕರ್ನಾಟಕದಾದ್ಯಂತ ಭರ್ಜರಿಯಾಗಿ ತೆರೆ ಕಂಡು ಬಿಡುಗಡೆಯಾದ ಒಂದೇ ದಿನಕ್ಕೆ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸಿದ ಯಶ್ ಅವರ 'ಮಾಸ್ಟರ್ ಪೀಸ್' ಇದೀಗ ವಿದೇಶದಲ್ಲೂ ತನ್ನ ಹವಾ ಮುಂದುವರಿಸಿದೆ.

ಹೌದು ಕಳೆದ ವಾರ ಇಡೀ ಆಸ್ಟ್ರೇಲಿಯಾದ್ಯಾಂತ ಗ್ರ್ಯಾಂಡ್ ಆಗಿ ತೆರೆ ಕಂಡಿರುವ ಯಶ್ ಮತ್ತು ನಟಿ ಶಾನ್ವಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ 'ಮಾಸ್ಟರ್ ಪೀಸ್' ಅಲ್ಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ.[ಎರಡು ವಾರಗಳಲ್ಲಿ 'ಮಾಸ್ಟರ್ ಪೀಸ್' ಬಾಚಿದ್ದು ಎಷ್ಟು?]

ಕರ್ನಾಟಕದಲ್ಲಿ ಎರಡು ವಾರದಲ್ಲಿ ಸುಮಾರು 20 ಕೋಟಿ ರೂಪಾಯಿ ಬಾಚಿರುವ ಯಶ್ ಅವರ 'ಮಾಸ್ಟರ್ ಪೀಸ್' ಕಳೆದ ವಾರ ವೀಕೆಂಡ್ ನಲ್ಲಿ ವಿದೇಶಿಗನ್ನಡಿಗರಿಗೂ ಭರ್ಜರಿ ಮನೋರಂಜನೆ ನೀಡಿದೆ.

ಇನ್ನು ಈ ವಾರ ಆಸ್ಟ್ರೇಲಿಯಾದ ಸುಮಾರು 10 ಸಿಟಿ ಸೇರಿದಂತೆ ನ್ಯೂಜಿಲ್ಯಾಂಡ್ ನಲ್ಲಿ ಮಂಜು ಮಾಂಡವ್ಯ ಆಕ್ಷನ್-ಕಟ್ ಹೇಳಿರುವ 'ಮಾಸ್ಟರ್ ಪೀಸ್' ತೆರೆ ಕಾಣಲಿದೆ. 'ಮೆಲ್ಬೋರ್ನ್', 'ಸಿಡ್ನಿ' ಸೇರಿದಂತೆ ವಿದೇಶದ ಹಲವು ಕಡೆ ಈ ಸಿನಿಮಾ ಪ್ರದರ್ಶನ ಆಗಲಿದೆ.['ಅಣ್ತಮ್ಮ'ನ ಫಸ್ಟ್ ಡೇ ಕಲೆಕ್ಷನ್ ಎಷ್ಟು ಗೊತ್ತಾ?]

⁠⁠⁠#Masterpiece is releasing in about 10 cities of Australia and New Zealand starting this weekend. For more details visit http://www.7hillsentertainment.com/- Team Yash

Posted by Yash on Monday, January 11, 2016

ಬರೀ ಈ ತಿಂಗಳು ಮಾತ್ರವಲ್ಲದೆ ಮುಂದಿನ ತಿಂಗಳು ಫೆಬ್ರವರಿಯಲ್ಲೂ ಯಶ್ ಅವರ 'ಮಾಸ್ಟರ್ ಪೀಸ್' ಚಿತ್ರದ ಪ್ರದರ್ಶನಕ್ಕಾಗಿ ವಿದೇಶದ ಹಲವಾರು ಥಿಯೇಟರ್ ಗಳು ಈಗಾಗಲೇ ಬುಕ್ ಆಗಿವೆ.[ಪೀಸ್ ಪೀಸ್ ಮಾಡಿದ 'ಮಾಸ್ಟರ್ ಪೀಸ್' ಗೆ ವಿಮರ್ಶಕರು ಜೈ ಅಂದ್ರಾ?]

ಒಟ್ನಲ್ಲಿ ದೂರದ ವಿದೇಶದಲ್ಲೂ ಕನ್ನಡ ಚಿತ್ರಗಳಿಗೆ ಇಷ್ಟರಮಟ್ಟಿಗೆ ಪ್ರೋತ್ಸಾಹ ದೊರೆಯುತ್ತಿದ್ದು, ಇದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಷಯ ಮಾತ್ರವಲ್ಲದೇ ಇದು ಸ್ಯಾಂಡಲ್ ವುಡ್ ನ ಪ್ರಗತಿಗೆ ಒಳ್ಳೆಯ ಬೆಳವಣಿಗೆ ಕೂಡ ಹೌದು ಅನ್ನೋದು ನಮ್ಮ ಅನಿಸಿಕೆ. ನೀವೇನಂತೀರಾ?.

More from Filmibeat

English summary
Kannada Actor Yash starrer 'Masterpiece' releasing in about 10 cities of Australia and New Zealand starting this weekend. For more details visit: http://www.7hillsentertainment.com/ . The movie is directed by Manju Mandavya.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X