ಡಬ್ಬಿಂಗ್ ಗೆ ಪರೋಕ್ಷವಾಗಿ ಜೈ ಎಂದ ರಾಕಿಂಗ್ ಸ್ಟಾರ್.!
ಕನ್ನಡ ಸಿನಿಮಾವೊಂದು ತೆಲುಗು, ತಮಿಳು, ಹಿಂದಿ, ಮಲಯಾಳಂ ಭಾಷೆಯಲ್ಲಿ ಡಬ್ ಆಗಿ ಏಕಕಾಲದಲ್ಲಿ ಬಿಡುಗಡೆಯಾಗುತ್ತಿದೆ. ಈ ಚಿತ್ರವನ್ನ ವಿಶಾಲ್, ಫರಾನ್ ಅಖ್ತರ್, ರಾಮ್ ಚರಣ್ ತೇಜ್ ಅಂತಹ ಸ್ಟಾರ್ ನಟರು ಸಪೋರ್ಟ್ ಮಾಡಿ ಪ್ರಚಾರ ಮಾಡ್ತಿದ್ದಾರೆ. ಇದು ಕನ್ನಡ ಚಿತ್ರರಂಗಕ್ಕೆ ಅತ್ಯಂತ ಖುಷಿಯ ವಿಚಾರ.
ಬಟ್, ಈ ಬೆಳವಣಿಗೆಯಿಂದ ಡಬ್ಬಿಂಗ್ ಹೋರಾಟಕ್ಕೆ ಜೀವ ಸಿಕ್ಕಂತಾಗಿದೆ. ಕನ್ನಡ ಚಿತ್ರವನ್ನ ಅವರು ಹೇಗೆ ಪ್ರಮೋಟ್ ಮಾಡ್ತಿದ್ದಾರೋ, ಅದೇ ರೀತಿ ಅವರ ಸಿನಿಮಾಗಳು ಕನ್ನಡದಲ್ಲಿ ಡಬ್ ಆಗಿ ಬಂದ್ರೆ, ಅಥವಾ ನೀವೇ ವಾಯ್ಸ್ ಕೊಟ್ರೆ ಆ ಚಿತ್ರಗಳನ್ನ ಇಲ್ಲಿ ನೀವು ಪ್ರಮೋಟ್ ಮಾಡ್ತೀರಾ.? ಎಂಬ ಪ್ರಶ್ನೆ ಯಶ್ ಗೆ ಎದುರಾಯಿತು.
ಈ ಬಗ್ಗೆ ಮಾತನಾಡಿದ ರಾಕಿಂಗ್ ಸ್ಟಾರ್ ಯಶ್ ಪರೋಕ್ಷವಾಗಿ ಡಬ್ಬಿಂಗ್ ಗೆ ಬೆಂಬಲ ನೀಡಿದರು. ''ಇದು ಎಲ್ಲರು ಒಟ್ಟಾಗಿ ಕೂತು ನಿರ್ಧಾರ ಆಗಬೇಕು. ನಾನು ವೈಯಕ್ತಿಕವಾಗಿ ಹೇಳುವುದಾದರೇ, ಕಾಲ ಕಾಲಕ್ಕೆ ಸನ್ನಿವೇಶಗಳು ಬದಲಾಗುತ್ತೆ. ಸದ್ಯಕ್ಕೆ ಪ್ರಾದೇಶಿಕ ಗಡಿ ಇಲ್ಲ. ಗ್ಲೋಬಲ್ ಅನ್ನೋತರ ಆಗ್ತಿದೆ. ಭಾರತೀಯ ಚಿತ್ರಗಳು ಚೀನಾದಲ್ಲಿ ಬಿಡುಗಡೆಯಾಗ್ತಿದೆ ಅಂದಾಗ, ಪ್ರಪಂಚದ ಜೊತೆ ನಾವು ಓಡಬೇಕು ಅನಿಸುತ್ತೆ'' ಎಂದರು.

'ಈ ರೀತಿಯಾದ ಬೆಳವಣಿಗೆ ಆದರೂ ನನಗೂ ಅಭ್ಯಂತರ ಇಲ್ಲ. ಕನ್ನಡ ಪರ-ವಿರೋಧದ ನಡುವೆ ಭಾಷೆಯ ಬೆಳವಣಿಗೆಗೆ ಸಹಾಯವಾಗುತ್ತೆ ಅಂದ್ರೆ ಖಂಡಿತಾ ಮಾಡಲಿ ಒಳ್ಳೆಯದೇ. ಅದೇ ಸಮಯದಲ್ಲಿ ಇಲ್ಲಿರುವಂತಹ ಕೆಲವರಿಗೆ ಪರಿಣಾಮ ಬೀರುತ್ತೆ ಅಂದ್ರೆ, ಅವರ ಹೊಟ್ಟೆಪಾಡನ್ನ ಕೂಡ ನೋಡಬೇಕು. ಭಾಷೆಗೆ ಯಾವುದೇ ರೀತಿ ಧಕ್ಕೆ ಆಗದೇ ನೋಡ್ಕೊಂಡ್ರೆ ನಮ್ಮ ಬೆಂಬಲ ಇರುತ್ತೆ'' ಎಂದು ಸ್ಪಷ್ಟನೆ ನೀಡಿದರು.
ಅಲ್ಲಿಗೆ ಯಶ್ ಅವರ ಈ ಮಾತು ಕೇಳಿದ್ರೆ, ಡಬ್ಬಿಂಗ್ ಗೆ ರಾಕಿಂಗ್ ಸ್ಟಾರ್ ಬೆಂಬಲ ಇದೆ ಎಂಬುದು ಸಾಬೀತಾಗಿದೆ. ಸದ್ಯ, ಯಶ್ ಅವರ ಈ ಹೇಳಿಕೆ ಈಗ ಡಬ್ಬಿಂಗ್ ವಲಯದಲ್ಲಿ ಭಾರಿ ಚರ್ಚೆಯಾಗ್ತಿದೆ.


Click it and Unblock the Notifications











