ವಿಷ್ಣುರ 'ನಾಗರಹಾವು' ಬಗ್ಗೆ ಯಶ್ ಆಡಿದ ಚಿನ್ನದ ಮಾತುಗಳು

By Suneetha

ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡುತ್ತಿರುವ ವಿಷ್ಣುದಾದಾ, ಲಕ್ಕಿ ಸ್ಟಾರ್ ರಮ್ಯಾ ಮತ್ತು ದಿಗಂತ್ ಅವರ 201ನೇ 'ನಾಗರಹಾವು' ಸಿನಿಮಾ ಒಂದಲ್ಲಾ ಒಂದು ವಿಚಾರಕ್ಕೆ ಗಾಂಧಿನಗರದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ.

ಈಗಾಗಲೇ ನಟ ವಿಷ್ಣುವರ್ಧನ್ ಅವರ 3D ಪೋಸ್ಟರ್ ಬಿಡುಗಡೆ ಆಗಿದ್ದು, ಅದರ ಮುಂದೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರೂ ಸೇರಿದಂತೆ ಸಾರ್ವಜನಿಕರು ಹಾಗೂ ವಿಷ್ಣುದಾದಾ ಅವರ ಅಭಿಮಾನಿಗಳು ಸೆಲ್ಫಿ ಕ್ಲಿಕ್ಕಿಸಿಕೊಂಡು ಚಿತ್ರಕ್ಕೆ ಪ್ರಚಾರ ನೀಡುತ್ತಿದ್ದಾರೆ.[ಅಭಿಮಾನಿಯಾಗಿ ವಿಷ್ಣುದಾದಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಸುದೀಪ್]

Kannada Actor Yash talks about Legend Vishnu Dada

ಇದೀಗ ಸ್ವಲ್ಪ ಸ್ಪೆಷಲ್ ಅಂತ ರಾಕಿಂಗ್ ಸ್ಟಾರ್ ಯಶ್ ಅವರು ವಿಷ್ಣು ಅವರ 3D ಸ್ಟಾಂಡ್ ಮುಂದೆ ನಿಂತು ತಮ್ಮ ಮನದಾಳದ ಮಾತುಗಳನ್ನು ಹಾಗೂ 'ನಾಗರಹಾವು' ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

'ಆಲ್ ದ ಬೆಸ್ಟ್ 'ನಾಗರಹಾವು' ಟೀಮ್. ಹೊಸ ಟೆಕ್ನಾಲಜಿ ಮುಖಾಂತರ ನಮ್ಮ ವಿಷ್ಣು ಸರ್ ಅವರನ್ನು ಜೀವಂತವಾಗಿ ನೀವು ಅವರ ಅಭಿಮಾನಿಗಳಿಗೆ ತೋರಿಸುವ ಪ್ರಯತ್ನ ಮಾಡಿದ್ದೀರಾ. ಇದಕ್ಕೆ ನಿಮಗೆ ಎಲ್ಲಾ ರೀತಿಯಿಂದಲೂ ಸಕ್ಸಸ್ ಸಿಗಲಿ ಆಲ್ ದ ಬೆಸ್ಟ್' ಎಂದು ಯಶ್ ಅವರು ಹಾರೈಸಿದ್ದಾರೆ.['ನಾಗರಹಾವು' ಚಿತ್ರದ ಪ್ರಚಾರಕ್ಕೆ ಇಷ್ಟೊಂದು ಹಣವೇ.?!]

Kannada Actor Yash talks about Legend Vishnu Dada

ಯಶ್ ಅವರ ಮಾತುಗಳನ್ನು ಖುದ್ದು ಅವರ ಬಾಯಲ್ಲೇ ಕೇಳಲು ಈ ವಿಡಿಯೋ ನೋಡಿ...

ಈ ಚಿತ್ರದಲ್ಲಿ ನಟಿ ರಮ್ಯಾ ಮತ್ತು ಡಾ.ವಿಷ್ಣು ಅವರು [ವಿಷ್ಣುದಾದಾ 201ನೇ ಚಿತ್ರದಲ್ಲಿ 120 ಅಡಿ ನಾಗಿಣಿಯಾದ ರಮ್ಯಾ] ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ನಾವು ನಿಮಗೆ ಈಗಾಗಲೇ ಇಲ್ಲೇ ತಿಳಿಸಿದ್ದೇವೆ. ಈ ಚಿತ್ರದ ಹೆಚ್ಚಿನ ಮಾಹಿತಿಗಾಗಿ ಫಿಲ್ಮಿಬೀಟ್ ಕನ್ನಡ ಓದುತ್ತಿರಿ...

More from Filmibeat

English summary
Kannada Actor Rocking Star Yash Talks about Legend Vishnu Dada and wishes Kannada Movie 'Nagarahavu' team.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X