ಕೊನೆಗೂ ಬಾಡಿಗೆ ಮನೆ ವಿವಾದಕ್ಕೆ ತೆರೆ ಎಳೆದ ನಟ ಯಶ್
Recommended Video
ಸ್ಯಾಂಡಲ್ ವುಡ್ ನ ರಾಕಿಂಗ್ ಸ್ಟಾರ್ ಯಶ್ ಅನೇಕ ವರ್ಷಗಳಿಂದ ಬಾಡಿಗೆ ಮನೆ ವಿವಾದದಲ್ಲಿ ಸಿಲುಕಿಕೊಂಡಿದ್ರು. ಯಶ್ ಬಾಡಿಗೆ ಕಟ್ಟುತ್ತಿಲ್ಲ ಎನ್ನುವ ಸುದ್ದಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿತ್ತು. ಆದ್ರೀಗ ಈ ವಿವಾದಕ್ಕೆ ತೆರೆ ಎಳೆದಿದ್ದಾರೆ ರಾಕಿ ಭಾಯ್.
ರಾಕಿಂಗ್ ಯಶ್ ಕುಟುಂಬ ಮೊದಲು ಕತ್ರಗುಪ್ಪೆ ಬಳಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಆ ಮನೆಯನ್ನು ಇಂದು(ಜೂನ್ 7) ಖಾಲಿ ಮಾಡಿದ್ದಾರಂತೆ. ಮನೆಯ ಕೀ ಅನ್ನು ಮಾಲಿಕರಿಗೆ ಒಪ್ಪಿಸಿದ್ದಾರಂತೆ. ಅಲ್ಲದೆ ಎರಡು ತಿಂಗಳ ಬಾಡಿಗೆ 80 ಸಾವಿರ ಡಿಡಿಯನ್ನು ಯಶ್ ಪರ ವಕೀಲರ ಮೂಲಕ ಹಸ್ತಾಂತರಿಸಿದ್ದಾರಂತೆ.
ಈ ಮೂಲಕ ಅನೇಕ ವರ್ಷಗಳಿಂದಿದ್ದ ವಿವಾದಕ್ಕೆ ಮಂಗಳ ಹಾಡಿದ್ದಾರೆ. ಎರಡು ತಿಂಗಳಲ್ಲಿ ಮನೆ ಖಾಲಿ ಮಾಡುವಂತೆ ಯಶ್ ಕುಟುಂಬಕ್ಕೆ ಹೈ ಕೋರ್ಟ್ ಆದೇಶ ಮಾಡಿತ್ತು. ಆದ್ರೆ ಯಶ್ ತಾಯಿ ಪುಷ್ಪ ಹಾಸನದಲ್ಲಿ ಮನೆ ನಿರ್ಮಾಣ ಮಾಡಲಾಗುತ್ತಿದೆ. ಅಲ್ಲಿಗೆ ಶಿಫ್ಟ್ ಆಗುವ ವರೆಗೂ ಕಾಲಾವಕಾಶ ಕೊಡುವಂತೆ ಕೇಳಿಕೊಂಡಿದ್ದರು. ಕೋರ್ಟ್ ಎರಡು ತಿಂಗಳು ಕಾಲಾವಾಕಾಶ ನೀಡಿತ್ತು.

ಕೋರ್ಟ್ ನೀಡಿದ್ದ ಗಡವು ಮುಕ್ತಾಯವಾಗುತ್ತಂತೆ. ಮನೆಯ ಮಾಲಿಕ ಮುನಿ ಪ್ರಸಾದ್ ಮತ್ತೆ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ರಂತೆ. ಆದ್ರೆ ಅಷ್ಟರಲ್ಲೆ ಯಶ್ ಮನೆಯನ್ನು ಒಪ್ಪಿಸುವ ಮೂಲಕ ವಿವಾದಕ್ಕೆ ಅಂತ್ಯಹಾಡಿದ್ದಾರೆ.
ವಿವಾದದ ಹಿನ್ನಲೆ
2010 ರಲ್ಲಿ ಯಶ್ ಕುಟುಂಬ ಕತ್ರಿಗುಪ್ಪೆಯ ಮುನಿಪ್ರಸಾದ್ ಮನೆಯಲ್ಲಿ ಬಾಡಿಗೆ ಇದ್ದರು. ಆದ್ರೆ ಯಶ್ ಲಕ್ಕಿ ಮನೆ ಎನ್ನುವ ಕಾರಣಕ್ಕೆ ಮನೆಯನ್ನು ಬಿಟ್ಟುಕೊಟ್ಟಿರಲಿಲ್ಲ ಎಂದುಹೇಳಲಾಗುತ್ತಿದೆ. ಅಲ್ಲದೆ ಬಾಡಿಯನ್ನು ನೀಡುತ್ತಿರಲಿಲ್ಲ ಎನ್ನುವುದು ಮನೆ ಮಾಲಿಕರ ಆರೋಪವಾಗಿತ್ತು. 2015ರಲ್ಲಿ ಕೋರ್ಟ್ ಮೆಟ್ಟಿಲೇರುವ ಮೂಲಕ ಕಾನೂನಿನ ಹೋರಾಟ ಪ್ರಾರಂಭವಾಗಿತ್ತು. ಇದುವರೆಗೂ ಮನೆಗಾಗಿ ಹೋರಾಟ ಮಾಡುತ್ತಲೆ ಬಂದಿದ್ದ, ಮಾಲಿಕ ಮುನಿಪ್ರಸಾದ್ ಗೆ ಕೊನೆಗೂ ಅವರ ಮನೆ ಸಿಕ್ಕಿದೆ.


Click it and Unblock the Notifications











