For Quick Alerts
  ALLOW NOTIFICATIONS  
  For Daily Alerts

  ಅಣ್ತಮ್ಮಾ...ಕನ್ನಡಿಗರು ಅಂದ್ರೆ ಎದೆ ಉಬ್ಬಿಸಿ ನಿಲ್ಬೇಕು ಎಂದ ಯಶ್

  |

  ನಾಡಿನ ಜನತೆ ಇಂದು ಕನ್ನಡ ರಾಜ್ಯೋತ್ಸವದ ಸಂಭ್ರಮ. ಎಲ್ಲೆಲ್ಲೂ ಕನ್ನಡದ ಬಾವುಟಗಳು ಹಾರಾಡುತ್ತಿದೆ. ಕನ್ನಡಿಗರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ ರಾಕಿಂಗ್ ಸ್ಟಾರ್ ಯಶ್. ಅಣ್ತಮ್ಮಾಂದಿರಿಗೆ ತಮ್ಮದೆ ಶೈಲಿಯಲ್ಲಿ ಶುಭಾಶಯ ಕೋರಿದ್ದಾರೆ.

  ಕೆ.ಜಿ.ಎಫ್ ಚಿತ್ರದ ಮೂಲಕ ಎದೆ ಉಸಿರಂಗೆ ಇರೋ ಕನ್ನಡ ಭಾಷೆ ಕಂಪುನ್ನು ದೇಶ ಪೂರ ಹರಡಿಸಿ. ಗಡಿಗಳನ್ನು ಮೀರಿ ಗರಿಗೆದರಿ, ಸಾಗರದಾಚೆಗೂ ಚಾಚಿ ನಿಲ್ಲಿಸಿದ ಯಶ್, ಕನ್ನಡಿಗರು ಅಂದ್ರೆ ಎದೆ ಉಬ್ಬಿಸಿ ನಿಲ್ಬೇಕು ಎಂದು ಹೇಳಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕನ್ನಡ ರಾಜೋತ್ಸವಕ್ಕೆ ವಿಭಿನ್ನವಾಗಿಯೆ ಶುಭಾಶಯ ತಿಳಿಸಿದ್ದಾರೆ.

  ಜೂನಿಯರ್ ರಾಕಿ ಆಗಮನ: ತಮಿಳುನಾಡಿನಲ್ಲಿ ಯಶ್ ಅಭಿಮಾನಿಗಳ ಸಂಭ್ರಮಾಚರಣೆಜೂನಿಯರ್ ರಾಕಿ ಆಗಮನ: ತಮಿಳುನಾಡಿನಲ್ಲಿ ಯಶ್ ಅಭಿಮಾನಿಗಳ ಸಂಭ್ರಮಾಚರಣೆ

  "ಅಣ್ತಮ್ಮಾ...ಎದೆ ಉಸಿರಂಗೆ ಇರೋ ಕನ್ನಡ ಭಾಷೆ ಕಂಪು ದೇಶ ಪೂರ ಹರಡ್ಬೇಕು....ಗಡಿಗಳನ್ನ ಮೀರಿ ಗರಿಗೆದರ್ಬೇಕು... ಸಾಗರದಾಚೆಗೂ ಚಾಚಿ ನಿಲ್ಬೇಕು....ಕನ್ನಡ ಅಂದ್ರೆ ಮೈ ರೋಮ ಎದ್ದೇಳ್ಬೇಕು...ಕನ್ನಡಿಗರು ಅಂದ್ರೆ ಎದೆ ಉಬ್ಬಿಸಿ ನಿಲ್ಬೇಕು....ಕನ್ನಡ ಉಳಿಸಿ ಬೆಳಸಿ ಅಂತ ಬೇಡ್ಕೋಳೋ ಕಾಲ ಹೋಯ್ತು....ಈಗೇನಿದ್ರು ಕನ್ನಡ ಕಲಿತು, ಕಲಿಸಿ, ಬಳಸಿ... ಸರ್ವರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಸಿರಿಗನ್ನಡಂ ಗೆಲ್ಗೆ....ಸಿರಿಗನ್ನಡಂ ಬಾಳ್ಗೆ..."ಎಂದು ಬರೆದುಕೊಂಡಿದ್ದಾರೆ.

  ಯಶ್ ಈ ಮಾತುಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೆಜಿಎಫ್ ಸಿನಿಮಾ ಮೂಲಕ ಕನ್ನಡ ಮತ್ತು ಕನ್ನಡ ಚಿತ್ರರಂಗದ ಕೀರ್ತಿಯನ್ನು ಸಪ್ತ ಸಾಗರದಾಚೆಗೂ ಚಾಚಿ ನಿಲ್ಲಿಸಿದ ಯಶ್ ಗೆ ಅಭಿಮಾನಿಗಳು ಹ್ಯಾಟ್ಸಾಫ್ ಹೇಳುತ್ತಿದ್ದಾರೆ. ಎರಡನೆ ಮಗುವಿನ ತಂದೆಯಾದ ಖುಷಿಯಲ್ಲಿರುವ ಯಶ್ ಈಗ ಕೆಜಿಎಫ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್ ಮೊದಲ ಭಾಗದ ಮೂಲಕ ಇಡೀ ದೇಶವೆ ಕನ್ನಡನಾಡಿನತ್ತ ತಿರುಗಿ ನೋಡುವಂತೆ ಮಾಡಿದ ತಂಡ ಈಗ ಪಾರ್ಟ್-2 ಮೂಲಕ ಯಾವೆಲ್ಲ ದಾಖಲೆ ಮಾಡಲಿದೆ ಎನ್ನುವುದು ಕನ್ನಡ ಚಿತ್ರಾಭಿಮಾನಿಗಳ ಕುತೂಹಲ.

  Read more about: yash ಯಶ್
  English summary
  Kannada actor Yash wishes to Kannada Rajyotsava.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X