»   » ಲೂಸ್ ಮಾದ ಯೋಗಿ 'ರಿಯಲ್' ಲವ್ ಸ್ಟೋರಿ ಬಹಿರಂಗ.!

ಲೂಸ್ ಮಾದ ಯೋಗಿ 'ರಿಯಲ್' ಲವ್ ಸ್ಟೋರಿ ಬಹಿರಂಗ.!

Posted By:
Subscribe to Filmibeat Kannada

''ನಿದಿರೆ ಬರದಿರೆ ಏನಂತಿ...ಲವ್ವೋ...ಲವ್ವೋ...ಲವ್ವೋ..'' ಎಂಬಂತಾಗಿದೆ ನಟ 'ಲೂಸ್ ಮಾದ' ಯೋಗೀಶ್ ರವರ ಸದ್ಯದ ಪರಿಸ್ಥಿತಿ.

ಹೌದು, ಕಳೆದ ಕೆಲ ದಿನಗಳಿಂದ ನಟ ಯೋಗೀಶ್ ಗೆ ನಿದ್ದೆ ಬರುತ್ತಲೇ ಇಲ್ಲ. ಕಾರಣ, 'ಲವ್ ಫೀವರ್'. ಇದು ಯಾವುದೋ 'ರೀಲ್' ಸುದ್ದಿ ಇರಬೇಕು ಅಂತ ಮೂಗು ಮುರಿಯಬೇಡಿ. ಇದು ಹಂಡ್ರೆಡ್ ಪರ್ಸೆಂಟ್ 'ರಿಯಲ್' ಸುದ್ದಿ. [ಲೂಸ್ ಮಾದ ಯೋಗಿಯ ಸಿನಿಪಯಣ ನಿಂತ ನೀರಾಗಿದ್ದೇಕೆ?]

ಪ್ರೇಮದ ಅಮಲಿನಲ್ಲಿ ತೇಲುತ್ತಿರುವ ನಟ ಲೂಸ್ ಮಾದ ಯೋಗಿ 'ಗರ್ಲ್ ಫ್ರೆಂಡ್' ಬಗ್ಗೆ ತಿಳಿದುಕೊಳ್ಳುವ ಕುತೂಹಲ ನಿಮಗೆ ಇದ್ದರೆ, ಸಂಪೂರ್ಣ ವಿವರ ಇಲ್ಲಿದೆ ಓದಿರಿ....

ಯೋಗೀಶ್ 'ಹೃದಯದ ಅರಸಿ' ಈಕೆಯೇ...

ನಟ ಯೋಗೀಶ್ ಲವ್ವಲ್ಲಿ ಬಿದ್ದಿದ್ದಾರೆ. ಅವರ ಹೃದಯಕ್ಕೆ ಲಗ್ಗೆ ಇಟ್ಟಿರುವ ಹುಡುಗಿ ಈಕೆಯೇ...'ಸಾಹಿತ್ಯ'.

ಸಾಹಿತ್ಯ ಕುರಿತು....

ಚಿತ್ರರಂಗದಿಂದ ಸಾಹಿತ್ಯ ತುಂಬಾ ದೂರ. ಐಟಿ ಉದ್ಯಮದಲ್ಲಿ ಸಾಹಿತ್ಯ ಕೆಲಸ ನಿರ್ವಹಿಸುತ್ತಿದ್ದಾರೆ.

'ಲೂಸ್ ಮಾದ'ನ ಪ್ರೇಮ್ ಕಹಾನಿ.!

ಕಳೆದ 13 ವರ್ಷಗಳಿಂದ ಸ್ನೇಹಿತರಾಗಿರುವ ಸಾಹಿತ್ಯ-ಯೋಗಿ, ಎರಡು ವರ್ಷಗಳಿಂದ ಪ್ರೀತಿ-ಪ್ರೇಮ ಅಂತ ಸೀರಿಯಸ್ ಆಗಿದ್ದಾರೆ.

ಮನೆಯವರಿಗೆ ವಿಷಯ ಗೊತ್ತು.!

ಸಾಹಿತ್ಯ-ಯೋಗಿ ಲವ್ವರ್ಸ್ ಎಂಬ ವಿಷಯ ಉಭಯ ಕುಟುಂಬಗಳಿಗೂ ಗೊತ್ತು. ಇಬ್ಬರ ಮದುವೆಗೆ ಈಗಾಗಲೇ ಫ್ಯಾಮಿಲಿ ಕಡೆಯಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ.

ಮುಂದಿನ ತಿಂಗಳು ಯೋಗಿ ಸಹೋದರ ಮದುವೆ

ಮುಂದಿನ ತಿಂಗಳು ಯೋಗಿ ಸಹೋದರ ಮಹೇಶ್ ಮದುವೆ ನಡೆಯಲಿದೆ. ಬಳಿಕ ಯೋಗಿ-ಸಾಹಿತ್ಯ ವಿವಾಹಕ್ಕೆ ಸಿದ್ಧತೆ ಶುರುವಾಗಲಿದೆ.

English summary
Kannada Actor Yogesh is in love with Sahitya. The both have known each other for over 13 years.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada