ಕನ್ನಡ ನಟರ ಅಸಲಿ 'ಮನಿ'ಸ್ಥಿತಿ ಬಿಚ್ಚಿಟ್ಟ ರಾಕ್ ಲೈನ್

By Harshitha

''ಕನ್ನಡ ಚಿತ್ರರಂಗಕ್ಕೆ ಮಾರ್ಕೆಟ್ ಕಡಿಮೆ, ಕನ್ನಡ ಚಿತ್ರಗಳನ್ನ ಪ್ರೇಕ್ಷಕರು ನೋಡುತ್ತಿಲ್ಲ. ಕನ್ನಡ ಸಿನಿಮಾಗಳು ನೆಲ ಕಚ್ಚುತ್ತಿವೆ'' ಹೀಗಂತ ದೂರುವವರ ಸಂಖ್ಯೆ ಗಾಂಧಿನಗರದಲ್ಲಿ ತುಸು ಜಾಸ್ತಿನೇ ಇದೆ.

ಒಂದು ಚಿತ್ರ ಗೆಲ್ಲಬೇಕು ಅಂದ್ರೆ ಉತ್ತಮ ಚಿತ್ರಕಥೆ ಇರಬೇಕು. ಹೀರೋ ಯಾರೇ ಆಗಿರಲಿ, ಕಥೆ ಚೆನ್ನಾಗಿದ್ರೆ 'ಹಿಟ್' ಗ್ಯಾರೆಂಟಿ. ಅದಕ್ಕೆ ತೀರಾ ಇತ್ತೀಚಿಗಿನ ಉದಾಹರಣೆ ಅಂದ್ರೆ 'ರಂಗಿತರಂಗ'.[ರಾಕ್ ಲೈನ್ ನಿರ್ಮಾಣದಲ್ಲಿ ರೋಹಿತ್ ಶೆಟ್ಟಿ ಹಿಂದಿ ಚಿತ್ರ]

ವಾಸ್ತವ ಹೀಗೆ ಅಂತ ಗೊತ್ತಿದ್ದರೂ, ನಮ್ಮ ಕನ್ನಡ ಹೀರೋಗಳಿಗೆ 'ಚಿತ್ರರಂಗ'ದ ಬೆಳವಣಿಗೆಗಿಂತ 'ತಮ್ಮ ಬೆಳವಣಿಗೆ'ಯೇ ಮುಖ್ಯ. ಚಿತ್ರಕಥೆ ಹೇಗೇ ಇರಲಿ, ದುಡ್ಡು ಯಾರು ಜಾಸ್ತಿ ಕೊಡ್ತಾರೋ ಅವರಿಗೆ ಕಾಲ್ ಶೀಟ್ ಕೊಡ್ತಾರೆ ನಮ್ಮ ಕನ್ನಡದ ಸ್ಟಾರ್ಸ್.![ಕನ್ನಡ ಚಿತ್ರರಂಗದ ಸೀಕ್ರೆಟ್ ಬಿಚ್ಚಿಟ್ಟ ರಾಕ್ ಲೈನ್.!]

ಹೀಗಂತ ನಾವ್ ಹೇಳ್ತಿಲ್ಲ. ಬದ್ಲಾಗಿ ಖ್ಯಾತ ನಿರ್ಮಾಪಕ ಕಮ್ ನಟ ರಾಕ್ ಲೈನ್ ವೆಂಕಟೇಶ್ ಬೇಸರದಿಂದ ಆಡಿರುವ ಮಾತು. 'ವಿಜಯ ಕರ್ನಾಟಕ' ದಿನಪತ್ರಿಕೆಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಕನ್ನಡ ನಟರ 'ಮನಿ ಮೆಂಟಾಲಿಟಿ' ಬಗ್ಗೆ ರಾಕ್ ಲೈನ್ ಮನಬಿಚ್ಚಿ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಕನ್ನಡ ನಟರಿಗೆ ಹಣ ಮಾಡಬೇಕು ಅನ್ನೋ ಆಸೆ!

ಕನ್ನಡ ನಟರಿಗೆ ಹಣ ಮಾಡಬೇಕು ಅನ್ನೋ ಆಸೆ!

''ರಜನಿಕಾಂತ್, ಸಲ್ಮಾನ್ ಖಾನ್, ವಿಕ್ರಂ ಮುಂತಾದ ಕಲಾವಿದರ ಜತೆ ಕೆಲಸ ಮಾಡಿದ್ದೇನೆ. ನಮ್ಮವರಿಗೆ ಒಳ್ಳೆ ಸಿನಿಮಾ ಮಾಡಬೇಕು ಎಂಬ ಆಸೆಗಿಂತ ನಮ್ಮ ಮಾರ್ಕೆಟ್ ಇರುವಾಗ ಹಣ ಮಾಡಬೇಕು, ಸೆಟ್ಲ್ ಆಗಬೇಕು ಎಂಬ ಆಸೆಯೇ ಜಾಸ್ತಿ.''-ರಾಕ್ ಲೈನ್ ವೆಂಕಟೇಶ್

 ಕನ್ನಡ ಚಿತ್ರರಂಗದಲ್ಲಿ ವೃತ್ತಿಪರತೆ ಕಡಿಮೆ

ಕನ್ನಡ ಚಿತ್ರರಂಗದಲ್ಲಿ ವೃತ್ತಿಪರತೆ ಕಡಿಮೆ

''ಕೇವಲ ಮಾತಲ್ಲಿ ಒಳ್ಳೆ ಕಥೆ ಬೇಕು ಅಂತಾರೆಯೇ ಹೊರತು, ಕೃತಿಯಲ್ಲಿ ಅದು ಇರಲ್ಲ. ಯಾರು ಹೆಚ್ಚು ಹಣ ಕೊಡುತ್ತಾರೆ ಎಂಬ ಕಡೆಯೇ ಅವರ ಗಮನ ಇರುತ್ತದೆ. ಕನ್ನಡ ಚಿತ್ರರಂಗದಲ್ಲಿ ವೃತ್ತಿಪರತೆ ಕಡಿಮೆ. ಅದನ್ನು ಸರಿ ಪಡಿಸಬೇಕು ಎಂಬ ನನ್ನ ಪ್ರಯತ್ನ ವಿಫಲವಾಯಿತು. ಅದನ್ನು ಹೇಗೆ ಸರಿಪಡಿಸಬೇಕೋ ಇನ್ನೂ ಗೊತ್ತಾಗುತ್ತಿಲ್ಲ.''-ರಾಕ್ ಲೈನ್ ವೆಂಕಟೇಶ್

'ನಾವು ಬೆಳೆಯೋಣ' ಅನ್ನೋ ಭಾವನೆ ಹೆಚ್ಚು

'ನಾವು ಬೆಳೆಯೋಣ' ಅನ್ನೋ ಭಾವನೆ ಹೆಚ್ಚು

''ಚಿತ್ರರಂಗವನ್ನು ಬೆಳೆಸೋಣ ಎನ್ನುವುದಕ್ಕಿಂತ ನಾವು ಬೆಳೆಯೋಣ ಎಂಬ ಭಾವನೆ ಹೆಚ್ಚಾಗಿದೆ. ಇದನ್ನು ನಾವು ಸರಿಪಡಿಸಿಕೊಳ್ಳದೇ ಇದ್ದರೆ ಖಂಡಿತಾ ಬೇರೆಯವರ ಮಟ್ಟಕ್ಕೆ ಬೆಳೆಯುವುದಕ್ಕೆ ಆಗುವುದಿಲ್ಲ.''-ರಾಕ್ ಲೈನ್ ವೆಂಕಟೇಶ್

ಚಿತ್ರಕಥೆಯೇ ಹೀರೋ.!

ಚಿತ್ರಕಥೆಯೇ ಹೀರೋ.!

''ಕನ್ನಡ ಚಿತ್ರಗಳ ಬಜೆಟ್ ಕಡಿಮೆ, ಪರಭಾಷಾ ಚಿತ್ರಗಳ ಬಜೆಟ್ ಜಾಸ್ತಿ ಎನ್ನುವುದು ಮೇಲ್ನೋಟಕ್ಕೆ ಸತ್ಯ. ಆದರೆ, ನನ್ನ ಅನುಭದ ಮೂಲಕ ಗೊತ್ತಾಗಿದ್ದು ಚಿತ್ರಕಥೆಯೇ ನನಗೆ ಹೀರೋ. ಅದಕ್ಕಿಂತ ಹೆಚ್ಚಾಗಿ ಪ್ಲಾನಿಂಗ್ ಮುಖ್ಯ. ಸಾವಿರಾರು ಕೋಟಿಯಲ್ಲೂ ಚಿತ್ರ ಮಾಡಬಹುದು. ಅದಕ್ಕೆ ಸಮರ್ಥ ನಿರ್ದೇಶಕ ಇರಬೇಕು. ನಮ್ಮಲ್ಲಿ (ಕನ್ನಡದಲ್ಲಿ) ಬೇರೆ ಭಾಷೆಗಳಿಗೆ ಹೋಲಿಸಿದರೆ ಪ್ಲಾನಿಂಗ್ ಕಡಿಮೆ.''-ರಾಕ್ ಲೈನ್ ವೆಂಕಟೇಶ್

ಯಾರಿಗೆ ಟಾರ್ಗೆಟ್?

ಯಾರಿಗೆ ಟಾರ್ಗೆಟ್?

ಕನ್ನಡ ಚಿತ್ರನಟರ ವೃತ್ತಿಪರತೆ, ಹೀರೋಗಳ ಮನಿ ಮೆಂಟಾಲಿಟಿ ಬಗ್ಗೆ ಇಷ್ಟೆಲ್ಲಾ ಮಾತನಾಡಿರುವ ರಾಕ್ ಲೈನ್ ವೆಂಕಟೇಶ್ ನೇರವಾಗಿ ಯಾರನ್ನೂ ಟಾರ್ಗೆಟ್ ಮಾಡಿಲ್ಲ. ಡಬ್ಬಿಂಗ್ ವಿವಾದ ಬಗ್ಗೆ ಕೂಡ ಕಾಮೆಂಟ್ ಮಾಡಿರುವ ಅವರು, ''ಡಬ್ಬಿಂಗ್ ನಿಂದ ಕನ್ನಡ ಚಿತ್ರರಂಗಕ್ಕೆ ಯಾವುದೇ ಲಾಭ ಇಲ್ಲ ಅಂದಿದ್ದಾರೆ''. 'ವಿಜಯ ಕರ್ನಾಟಕ' ದಿನಪತ್ರಿಕೆಗೆ ರಾಕ್ ಲೈನ್ ನೀಡಿರುವ ಸಂದರ್ಶನದ ಲಿಂಕ್ ಇಲ್ಲಿದೆ.

More from Filmibeat

English summary
Multilingual Producer cum Actor Rockline Venkatesh has made a statement on Kannada Actors' money mentality and Professionalism in Kannada Film Industry in an interview to a leading Kannada daily. Read the article to know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X