»   » ಫ್ಯಾಮಿಲಿ ಸಿನಿಮಾಗಳ ಮೇಲೆ ಒಲವು ತೋರಿಸಿದ ಕನ್ನಡದ ಸ್ಟಾರ್ ನಟರು

ಫ್ಯಾಮಿಲಿ ಸಿನಿಮಾಗಳ ಮೇಲೆ ಒಲವು ತೋರಿಸಿದ ಕನ್ನಡದ ಸ್ಟಾರ್ ನಟರು

Posted By:
Subscribe to Filmibeat Kannada

ಒಂದು ಸಿನಿಮಾ ನೋಡುವುದಕ್ಕೆ ಚಿತ್ರಮಂದಿರಕ್ಕೆ ಹೋದರೆ ಆ ಚಿತ್ರ ಕುಟುಂಬ ಸಮೇತ ನೋಡುವ ಹಾಗೆ ಇರಬೇಕು ಎಂಬುದು ಎಲ್ಲರ ಆಸೆಯೂ ಆಗಿರುತ್ತದೆ. ಅದೇ ರೀತಿ ಈಗ ಕನ್ನಡದಲ್ಲಿ ಕೌಟುಂಬಿಕ ಸಿನಿಮಾಗಳ ಕಥೆಯ ಚಿತ್ರಗಳು ಹೆಚ್ಚಾಗುತ್ತಿದೆ.

ಮುಖ್ಯವಾಗಿ ಕನ್ನಡದ ಸ್ಟಾರ್ ನಟರು ಈಗ ಫ್ಯಾಮಿಲಿ ಓರಿಯೆಂಟಲ್ ಸಿನಿಮಾ ಕಡೆ ಮುಖ ಮಾಡಿದ್ದಾರೆ. ಪುನೀತ್ ರಾಜ್ ಕುಮಾರ್, ದರ್ಶನ್, ಉಪೇಂದ್ರ ಹೀಗೆ ಸ್ಯಾಂಡಲ್ ವುಡ್ ನ ಟಾಪ್ ನಟರು ಮಾಸ್ ಸಿನಿಮಾ ಬಿಟ್ಟು ಈಗ ಕ್ಲಾಸ್ ಕಡೆ ಮುಖ ಮಾಡಿದ್ದಾರೆ. ಈ ರೀತಿಯ ಸಿನಿಮಾಗಳ ಮೂಲಕ ಈ ನಟರು ಕನ್ನಡದ ಮನೆ ಮಕ್ಕಳಾಗಿದ್ದಾರೆ. ಮುಂದೆ ಓದಿ...

'ರಾಜಕುಮಾರ'

ಪವರ್ ಸ್ಟಾರ್ ಇಮೇಜ್ ನಿಂದ ಪುನೀತ್ ರಾಜ್ ಕುಮಾರ್ ಈಗ ರಾಜರತ್ನನಾಗಿದ್ದಾರೆ. 'ರಾಜಕುಮಾರ' ಸಿನಿಮಾ ಮಾಡಿದ್ದ ಪುನೀತ್ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆಯನ್ನು ಎಬ್ಬಿಸಿದ್ದರು. ಫ್ಯಾಮಿಲಿ ಓರಿಯೆಂಟಲ್ ಆಗಿದ್ದ ಈ ಚಿತ್ರವನ್ನು ಸಣ್ಣ ಮಕ್ಕಳಿನಿಂದ ಹಿಡಿದು ವಯಸ್ಕರು ಸಹ ಇಷ್ಟ ಪಟ್ಟಿದ್ದರು.

'ತಾರಕ್'

ಹೆಚ್ಚಾಗಿ ಮಾಸ್ ಸಿನಿಮಾಗಳನ್ನು ಮಾಡುತ್ತಿದ್ದ ನಟ ದರ್ಶನ್ ಕೂಡ ಈಗ ಕ್ಲಾಸ್ ಸಿನಿಮಾ ಮಾಡಿದ್ದಾರೆ. 'ತಾರಕ್' ಸಿನಿಮಾದ ಮೂಲಕ ಒಂದು ಹೊಸ ರೀತಿಯ ಫ್ಯಾಮಿಲಿ ಸಿನಿಮಾವನ್ನು ಮಾಡುವ ಪ್ರಯತ್ನವನ್ನು ದರ್ಶನ್ ಮಾಡಿದ್ದಾರೆ.

'ಉಪೇಂದ್ರ ಮತ್ತೆ ಬಾ'

ರಿಯಲ್ ಸ್ಟಾರ್ ಉಪೇಂದ್ರ ಕೂಡ ಸದ್ಯ ಫ್ಯಾಮಿಲಿ ಸಿನಿಮಾಗಳಿಗೆ ಮನ ಸೋತಿದ್ದಾರೆ. ಅವರ ಅಭಿನಯದಲ್ಲಿ ಬರುತ್ತಿರುವ 'ಉಪೇಂದ್ರ ಮತ್ತೆ ಬಾ' ಸಿನಿಮಾ ಕೂಡ ಒಂದು ಕುಟುಂಬದ ಕಥೆಯನ್ನು ಹೊಂದಿದೆ.

English summary
List of kannada actors family oriented movies

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada