ಸುದೀಪ್, ಉಪ್ಪಿ, ಮೇಘನಾ ದೃಷ್ಟಿಯಲ್ಲಿ ವಾಜಪೇಯಿ ಅಂದ್ರೆ ಯಾರು.?

By Bharath Kumar

Recommended Video

Atal Bihari Vajpayee : ವಾಜಪೇಯಿ ಅಗಲಿಕೆಗೆ ಸಂತಾಪ ಸೂಚಿಸಿದ ಸ್ಯಾಂಡಲ್‌ವುಡ್..! | Filmibeat Kannada

ಭಾರತ ದೇಶ ಕಂಡ ಅತ್ಯುನ್ನತ ಪ್ರಧಾನಮಂತ್ರಿ, ರಾಷ್ಟ್ರ ರಾಜಕಾರಣ ಕಂಡ ಅದ್ಭುತ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿ ಅವರು ನಿನ್ನೆ (ಆಗಸ್ಟ್ 16) ದೆಹಲಿಯಲ್ಲಿ ವಿಧಿವಶರಾದರು.

ವಾಜಪೇಯಿ ಅವರನ್ನ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕಂಡಿದ್ದಾರೆ. ವಾಜಪೇಯಿ ಅವರ ಆಡಳಿತ ಹಾಗೂ ಅವರ ವ್ಯಕ್ತಿತ್ವದ ಬಗ್ಗೆ ಹಲವು ಹಲವರು ರೀತಿಯಲ್ಲಿ ವಿಶ್ಲೇಷಿಸಿದ್ದಾರೆ.

ಅತ್ಯಪರೂಪದ ರಾಜಕಾರಣಿ ಅಟಲ್ ಜೀ ಅವರ ಅಪರೂಪದ ಚಿತ್ರಗಳು

ಇದರಲ್ಲಿ ಸಿನಿಮಾ ಕಲಾವಿದರು ಹೊರತಾಗಿಲ್ಲ. ವಾಜಪೇಯಿ ಅವರ ನಿಧನದ ಸುದ್ದಿ ಬಹಿರಂಗವಾಗುತ್ತಿದ್ದಂತೆ ಅನೇಕ ನಟ-ನಟಿಯರು ಟ್ವಿಟ್ಟರ್ ಮೂಲಕ ಸಂತಾಪ ಸೂಚಿಸಿದ್ದಾರೆ. ಈಗ ಕನ್ನಡದ ಕೆಲವು ಸ್ಟಾರ್ ನಟರು, ಸುದೀಪ್, ಉಪೇಂದ್ರ, ಜಗ್ಗೇಶ್, ನಟಿ ಮೇಘನಾ ರಾಜ್ ಸೇರಿದಂತೆ ಹಲವು ಕಲಾವಿದರು ವಾಜಪೇಯಿ ಅವರನ್ನ ಕಂಡ ಬಗೆಯನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ನೋಡೋಣ ಬನ್ನಿ....ಮುಂದೆ ಓದಿ.....

ಪ್ರಧಾನಮಂತ್ರಿ ಅಂತ ಕೇಳಿದ್ದೆ ಇವರಿಂದ

ಕನ್ನಡ ನಟಿ ಮೇಘನಾ ರಾಜ್ ಅವರು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಂತಾಪ ಸೂಚಿಸಿದ್ದಾರೆ. ಈ ವೇಳೆ ಅವರನ್ನ ವಿಶೇಷವಾಗಿ ನೆನಪಿಸಿಕೊಂಡಿರುವ ಅವರು '' ಶಾಲೆಯಲ್ಲಿ ಓದುವಾಗ ಈ ಹೆಸರು ಕೇಳಿದ್ದು, ಪ್ರಧಾನಮಂತ್ರಿ ಎಂಬ ಪದ ಮೊದಲ ಸರಿ ಕೇಳಿದ್ದು ಇವರ ಹೆಸರಿನಿಂದ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' ಎಂದು ಟ್ವೀಟ್ ಮಾಡಿದ್ದಾರೆ.

ಅಸಾಮಾನ್ಯ ಪ್ರಜಾಕಾರಣಿ

ರಾಜಕಾರಣಕ್ಕೆ ಗೌರವ ತಂದು ಕೊಟ್ಟ ನಾಯಕ ಅಟಲ್ ಬಿಹಾರಿ ವಾಜಪೇಯಿ ಎಂದು ಅನೇಕ ರಾಜಕೀಯ ತಜ್ಞರು ಹೆಮ್ಮೆಯಿಂದ ಹೇಳುತ್ತಾರೆ. ಇಂತಹ ರಾಜಕಾರಣಿಯ ನಟ ಹಾಗೂ ಉಪೇಂದ್ರ ಸಂತಾಪ ಸೂಚಿಸಿದ್ದಾರೆ. ''ರಾಜಕಾರಣದಲ್ಲಿದ್ದ ಅಸಾಮಾನ್ಯ ಪ್ರಜಾಕಾರಣಿ... ಮತ್ತೊಮ್ಮೆ ಹುಟ್ಟಿ ಬನ್ನಿ'' ಎಂದಿದ್ದಾರೆ.

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ

ಕಿಚ್ಚ ಸುದೀಪ್ ಸಂತಾಪ

ಅಟಲ್ ಜೀ ಅವರಂತಹ ನಾಯಕರಿಂದ ರಾಜಕಾರಣವು ಗೌರವ ಕಾಪಾಡಿಕೊಂಡಿದೆ ಎಂದು ನಟ ಕಿಚ್ಚ ಸುದೀಪ್ ಅವರ ಟ್ವಿಟ್ಟರ್ ಮೂಲಕ ಅಗಲಿದ ಮಾಜಿ ಪ್ರಧಾನಿಗೆ ಸಂತಾಪ ಸೂಚಿಸಿದ್ದಾರೆ.

ದೇಶದ ಆರ್ಥಿಕ ಪರಿಸ್ಥಿತಿ ಸುಧಾರಿಸಿದ ಅಜಾತಶತ್ರು ಅಟಲ್

ದೇಶ ಕಂಡ ಅತ್ಯುತ್ತಮ ಪ್ರಧಾನಿ

"ಅಟಲ್ ಬಿಹಾರಿ ವಾಜಪೇಯಿ" ದೇಶ ಕಂಡ ಅತ್ಯುತ್ತಮ ಪ್ರಧಾನಿಗಳಲ್ಲೊಬ್ಬರು..

ರಸ್ತೆ ಅಗಲೀಕರಣ ಮತ್ತು

ಪೋಖ್ರಾನ್ ಪರಮಾಣು ಪರೀಕ್ಷೆ ಇವರ ಪ್ರಮುಖವಾದ ಮುನ್ನೆಡೆಗಳು..

ಅವರ ಆತ್ಮಕ್ಕೆ ಶಾಂತಿ ಸಿಗಲಿ..'' ಎಂದು ನಿರ್ದೇಶಕ ಸುನಿ ಟ್ವೀಟ್ ಮಾಡಿದ್ದಾರೆ.

ಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳು

ವಾಜಪೇಯಿ ಅವರನ್ನ ನೆನೆದ ಜಗ್ಗೇಶ್

ನಟ ಹಾಗೂ ರಾಜಕಾರಣಿ ಜಗ್ಗೇಶ್ ಅವರು ತಮ್ಮ ಪಕ್ಷದ ಅಗ್ರಗಣ್ಯ ನಾಯಕನ ಅಗಲಿಕೆಗೆ ಟ್ವಿಟ್ಟರ್ ನಲ್ಲಿ ಕಂಬನಿ ಮಿಡಿದಿದ್ದಾರೆ.

More from Filmibeat

English summary
In a sad turn of events, former Prime Minister of India, Sri atal bihari vajpayee breathed his last in Delhi yesterday (august 16th). Kannada film actors mourns the sad demise of former PM atal bihari vajpayee.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X