ಚಿತ್ರಗಳು: ಕಿರುತೆರೆಯಲ್ಲಿ ಮಿಂಚು ಹರಿಸಿದ ಸ್ಟಾರ್ ನಟರಿವರು

By Suneetha

ಹಿಂದೆ ಒಂದು ಕಾಲವಿತ್ತು ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಟಾಪ್ ನಲ್ಲಿರುವ ನಟ ಅಥವಾ ನಟಿಯರು ಕಿರುತೆರೆ ಕ್ಷೇತ್ರದಲ್ಲಿ ಮಿಂಚಿದರೆ ಅವರ ಸ್ಟಾರ್ ವ್ಯಾಲ್ಯೂ ಕಡಿಮೆ ಆಗುತ್ತೆ. ಜೊತೆಗೆ ಅವರ ಇಮೇಜ್ ಗೆ ಕಳಂಕ ಬರುತ್ತೆ ಅನ್ನೋ ನಂಬಿಕೆ ಇತ್ತು.

ಅದಕ್ಕೆ ತಕ್ಕಂತೆ ವೀಕ್ಷಕರು, ಪ್ರೇಕ್ಷಕರು, ಅಭಿಮಾನಿಗಳು ಅಂತ ಯಾರಿದ್ದಾರೋ ಅವರು ಕೂಡ ಅದೇ ಭಾವನೆಯನ್ನು ತಮ್ಮ ತಮ್ಮ ಮನದಲ್ಲಿ ಫೆವಿಕ್ವಿಕ್ ಗಮ್ ಹಾಕಿ ಭದ್ರವಾಗಿ ಅಂಟಿಸಿಕೊಂಡಿದ್ದರು.[ಉದಯೋನ್ಮುಖ ತಾರೆಗಳ ಜತೆ 'ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳ್ಳಿ']

ಆದರೆ ಈಗ ಕಾಲ ಬದಲಾಗಿದೆ, ಈಗಿನ ಜಮಾನದಲ್ಲಿ ಜನರಿಗೆ ಅತ್ಯಂತ ಹತ್ತಿರವಾಗಲು ಹಾಗೂ ಮನೆ ಮಾತಾಗಲು ಪ್ರಮುಖ ಸಾಧನ ಕಿರುತೆರೆ ಕ್ಷೇತ್ರ ಎಂದು ಹಿರಿತೆರೆಯ ಕಲಾವಿದರಿಗೆ ಮನದಟ್ಟಾಗಿ ಹಲವಾರು ಸ್ಟಾರ್ ನಟರು ಕಿರುತೆರೆ ಕ್ಷೇತ್ರದತ್ತ ಮುಖ ಮಾಡಿದ್ದಾರೆ.

ಇದೀಗ ಹಿರಿತೆರೆ ಕ್ಷೇತ್ರದಿಂದ ಹೆಚ್ಚಾಗಿ ಕಿರುತೆರೆ ಕ್ಷೇತ್ರದಲ್ಲೇ ಅತ್ಯಂತ ಹೆಚ್ಚು ಪ್ರಖ್ಯಾತಿ ಗಳಿಸಿದ ನಟರು ನಮಗೆ ಕಾಣಸಿಗುತ್ತಾರೆ. ಅಷ್ಟಕ್ಕೂ ಯಾವ ಯಾವ ಸ್ಟಾರ್ ನಟರು ಕಿರುತೆರೆ ಕ್ಷೇತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮನೆ-ಮನ ಮೆಚ್ಚಿದ್ದಾರೆ ಎಂಬುದನ್ನು ನಾವು ಹೇಳ್ತೀವಿ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...

'ಪ್ರಣಯ ರಾಜ' ಶ್ರೀನಾಥ್

'ಪ್ರಣಯ ರಾಜ' ಶ್ರೀನಾಥ್

ಚಂದನವನ ಕ್ಷೇತ್ರದಲ್ಲಿ 'ಪ್ರಣಯ ರಾಜ' ಅಂತಾನೇ ಖ್ಯಾತಿ ಹೊಂದಿರುವ ಹಿರಿಯ ನಟ ಶ್ರೀನಾಥ್ ಅವರು ಕಿರುತೆರೆ ಕ್ಷೇತ್ರದತ್ತ ಮುಖ ಮಾಡಿ, ಇವರು ನಡೆಸಿಕೊಟ್ಟ 'ಆದರ್ಶ ದಂಪತಿಗಳು' ಎಂಬ ರಿಯಾಲಿಟಿ ಶೋ ಎಲ್ಲಾ ಕಡೆ ಸಂಚರಿಸಿ ಮನೆ ಮಾತಾಗಿದ್ದು ಈಗ ಇತಿಹಾಸದ ಪುಟ ಸೇರಿದೆ.[ಮೂರು ವರ್ಷದ ಹಿಂದೆ ನಟ ಶ್ರೀನಾಥ್ ರವರಿಗೆ ಏನಾಗಿತ್ತು ಗೊತ್ತಾ?]

 ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್

ಸದ್ಯಕ್ಕೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಕೈಯಲ್ಲಿ ಹಲವಾರು ಪ್ರಾಜೆಕ್ಟ್ ಗಳನ್ನು ಹಿಡಿದು ಓಡಾಡುತ್ತಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು 'ಕನ್ನಡದ ಕೋಟ್ಯಾಧಿಪತಿ' ಎಂಬ ರಿಯಾಲಿಟಿ ಶೋ ನಡೆಸಿಕೊಟ್ಟರು. ಇದರಿಂದ ಎಲ್ಲರ ಪ್ರೀತಿಗೆ ಪಾತ್ರರಾದ ಅಪ್ಪು ಅಲಿಯಾಸ್ ಪುನೀತ್ ಅವರು ಬರೀ ಹಿರಿತೆರೆ ಮಾತ್ರವಲ್ಲದೇ ಕಿರುತೆರೆ ಕ್ಷೇತ್ರದಲ್ಲೂ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.[ಕನ್ನಡದ ಕೋಟ್ಯಾಧಿಪತಿ ಸೀಸನ್ -2 ನೋಂದಣಿ ಆರಂಭ]

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್

ಕೆಲವು ದಿನಗಳ ಹಿಂದೆ ಹಿರಿತೆರೆ ಕ್ಷೇತ್ರದ ಜೊತೆಗೆ ಕಿರುತೆರೆ ಕ್ಷೇತ್ರದಲ್ಲಿಯೂ ಬಹಳ ಬ್ಯುಸಿಯಾಗಿದ್ದ ನಟ ಅಂದರೆ ಅದು ಎಲ್ಲರ ಮೆಚ್ಚಿನ ನಟ ಕಿಚ್ಚ ಸುದೀಪ್ ಅವರು. ಅವರು ಸತತ ಮೂರು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ 'ಬಿಗ್ ಬಾಸ್' ಎಂಬ ಜನಪ್ರಿಯ ರಿಯಾಲಿಟಿ ಶೋ ಎಲ್ಲರ ಮನೆ ಮಾತಾಗುವ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. 'ಬಿಗ್ ಬಾಸ್' ರಿಯಾಲಿಟಿ ಶೋ ಮೂಲಕ ಕಿಚ್ಚ ಸುದೀಪ್ ಅವರು ಕಿರುತೆರೆ ಕ್ಷೇತ್ರದಲ್ಲೂ ಸಖತ್ ಫೇಮಸ್ ನಟ.[ಬಿಗ್ ಬಾಸ್-3ಗೆ ಸುದೀಪ್ ಪಕ್ಕಾ, ಇನ್ನುಳಿದವರ ಲೆಕ್ಕ?]

ಕ್ರೇಜಿ ಸ್ಟಾರ್ ರವಿಚಂದ್ರನ್

ಕ್ರೇಜಿ ಸ್ಟಾರ್ ರವಿಚಂದ್ರನ್

ಒಂದು ಕಾಲದ ಲವರ್ ಬಾಯ್ ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕೂಡ ಕಿರುತೆರೆ ಕ್ಷೇತ್ರದಲ್ಲಿ ಪರಿಚಿತರಾಗಿದ್ದಾರೆ. ಆದರೆ ಇವರು ಕೊಂಚ ಡಿಫರೆಂಟು. ಈ ಮೇಲಿನ ನಟರು ಕಾರ್ಯಕ್ರಮ ನಡೆಸಿಕೊಟ್ಟರೆ, ಇವರು ಮಾತ್ರ ಕಾರ್ಯಕ್ರಮದ ಜಡ್ಜ್ ಆಗಿಯೋ ಅಥವಾ ಮುಖ್ಯ ಅತಿಥಿಯಾಗಿಯೋ ಆಗಮಿಸುತ್ತಾರೆ. ಇತ್ತೀಚೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದ 'ಡ್ಯಾನ್ಸಿಂಗ್ ಸ್ಟಾರ್' ಮೂಲಕ ರವಿಮಾಮ ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.[ಕಿರುತೆರೆಗೆ ಅಡಿಯಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್]

ರಮೇಶ್ ಅರವಿಂದ್

ರಮೇಶ್ ಅರವಿಂದ್

ನಟನೆಯ ಜೊತೆಗೆ ನಿರ್ದೇಶನಕ್ಕೂ ಸೈ ಎನ್ನುವ ಅಪರೂಪದ ನಟ ರಮೇಶ್ ಅರವಿಂದ್ ಅವರು ಕೂಡ ಕಿರುತೆರೆ ಕ್ಷೇತ್ರದಲ್ಲಿ ಎಲ್ಲರ ಮೆಚ್ಚುಗೆ ಗಳಿಸುತ್ತಿದ್ದಾರೆ. ನಟ ರಮೇಶ್ ಅವರು ನಡೆಸಿಕೊಡುತ್ತಿರುವ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಸಖತ್ ಪಾಪ್ಯುಲರ್ ಆಗಿದೆ. ಎಲ್ಲರ ಹಳೇ ನೆನಪುಗಳನ್ನು ಮತ್ತೆ ಮೆಲುಕು ಹಾಕುವಂತೆ ಮಾಡುವ ರಮೇಶ್ ಅವರ ವೀಕೆಂಡ್ ಪ್ರೋಗ್ರಾಂ ಎಲ್ಲರ ಮೆಚ್ಚುಗೆ ಗಳಿಸಿದೆ.[ವೀಕೆಂಡ್ ಅಂತ ಮತ್ತೆ ಬಂದ್ರು, ರಮೇಶ್ ಅರವಿಂದ್]

ಗೋಲ್ಡನ್ ಸ್ಟಾರ್ ಗಣೇಶ್

ಗೋಲ್ಡನ್ ಸ್ಟಾರ್ ಗಣೇಶ್

ಮೊದ ಮೊದಲು ಕಿರುತೆರೆ ಕ್ಷೇತ್ರದಲ್ಲಿ 'ಕಾಮಿಡಿ ಟೈಂ' ನಲ್ಲಿ ಎಲ್ಲರ ಮೆಚ್ಚುಗೆ ಗಳಿಸಿ ತದನಂತರ ದೊಡ್ಡ ಸ್ಕ್ರೀನ್ ನಲ್ಲಿ ನಟನಾಗಿ ಕಾಣಿಸಿಕೊಂಡು ಒಮ್ಮೆಗೆ 'ಗೋಲ್ಡನ್ ಸ್ಟಾರ್' ಎಂಬ ಪಟ್ಟ ಗಿಟ್ಟಿಸಿಕೊಂಡ ಗಣೇಶ್ ಅವರು ಮತ್ತೆ ಕಿರುತೆರೆಗೆ 'ಸೂಪರ್ ಮಿನಿಟ್' ಎಂಬ ಗೇಮ್ ಶೋ ಮೂಲಕ ವಾಪಸಾಗಿದ್ದಾರೆ. ಸದ್ಯಕ್ಕೆ ಗಣೇಶ್ ಅವರು ಹಲವಾರು ಪ್ರಾಜೆಕ್ಟ್ ಗಳನ್ನು ನಿಭಾಯಿಸುವುದರ ಜೊತೆಗೆ ಕಿರುತೆರೆ ಕ್ಷೇತ್ರವನ್ನು ಬ್ಯಾಲೆನ್ಸ್ ಮಾಡುತ್ತಿದ್ದಾರೆ.[ಗಣೇಶ್ ಜೊತೆ ನೀವೂ 'ಸೂಪರ್ ಮಿನಿಟ್' ಆಟ ಆಡಬಹುದು!]

ಸೃಜನ್ ಲೋಕೇಶ್

ಸೃಜನ್ ಲೋಕೇಶ್

ಹಿರಿತೆರೆ ಕ್ಷೇತ್ರದಲ್ಲಿ ಅಷ್ಟಾಗಿ ಯಶಸ್ಸು ಗಳಿಸಿದ ನಟ ಸೃಜನ್ ಲೋಕೇಶ್ ಅವರು ಕಿರುತೆರೆ ಕ್ಷೇತ್ರದಲ್ಲಿ ಮಾತ್ರ ಸೂಪರ್ ಸ್ಟಾರ್. ಅವರು ಸದ್ಯಕ್ಕೆ ನಡೆಸಿಕೊಡುತ್ತಿರುವ 'ಮಜಾ ಟಾಕೀಸ್' ಕಾರ್ಯಕ್ರಮ ಎಲ್ಲರ ಮನೆ ಮಾತಾಗುವುದರ ಜೊತೆಗೆ ಎಲ್ಲರ ಮನೆಯ ನೆಚ್ಚಿನ ಸೃಜಾ ಆಗಿದ್ದಾರೆ ಸೃಜನ್ ಲೋಕೇಶ್ ಅವರು. ಇನ್ನು ಈ ಕಾಮಿಡಿ ಶೋ ಮಾತ್ರವಲ್ಲದೇ, ಇದರ ಜೊತೆಗೆ 'ಚೋಟಾ ಚಾಂಪಿಯನ್' ಎಂಬ ಗೇಮ್ ಶೋ ಒಂದನ್ನು ಕೂಡ ಸೃಜನ್ ಅವರು ನಡೆಸಿಕೊಟ್ಟಿದ್ದರು.[ಚಿತ್ರಗಳು: 'ಮಜಾ ಟಾಕೀಸ್'ನಲ್ಲಿ ಮಸ್ತ್ ಮಜಾ ಮಾಡಿದ ಶಿವಣ್ಣ]

ನಟ ಸಂತೋಷ್

ನಟ ಸಂತೋಷ್

ನಟಿ ಐಂದ್ರಿತಾ ಅವರ ಜೊತೆ 'ನೂರು ಜನ್ಮಕು' ಎಂದು ಡ್ಯುಯೆಟ್ ಹಾಡಿದ್ದ ನಟ ಸಂತೋಷ್ ಅವರಿಗೂ ಕೂಡ ಹಿರಿತೆರೆ ಅಷ್ಟಾಗಿ ಕೈ ಹಿಡಿಯದಿದ್ದರೂ ಕೂಡ ಕಿರುತೆರೆ ಸ್ವಲ್ಪ ಮಟ್ಟಿಗೆ ಕೈ ಹಿಡಿಯಿತು ಅಂತ ಹೇಳಬಹುದು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು' ರಿಯಾಲಿಟಿ ಶೋ ಕಾರ್ಯಕ್ರಮವನ್ನು ನಡೆಸಿಕೊಡುವ ಮೂಲಕ ಕಿರುತೆರೆಯಲ್ಲಿ ಸ್ವಲ್ಪ ಮಟ್ಟಿಗೆ ಪರಿಚಿತರಾದರು.

More from Filmibeat

English summary
Many Sandalwood stars have tested waters in Television to show their anchoring prowess and they have got overwhelming response from television audiences for showcasing their unique skills in various reality shows.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X