twitter
    For Quick Alerts
    ALLOW NOTIFICATIONS  
    For Daily Alerts

    ರಾಯಚೂರಿನ ವಿದ್ಯಾರ್ಥಿನಿ ಸಾವು : ನ್ಯಾಯಕ್ಕಾಗಿ ನಟ, ನಟಿಯರ ಕೂಗು

    |

    ರಾಯಚೂರು ಜಿಲ್ಲೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿಯೊಬ್ಬರು ಅನುಮಾನಾಸ್ಪದವಾಗಿ ಸಾವಿಗೀಡಾಗಿದ್ದಾರೆ. ಚುನಾವಣೆ ಇದ್ದ ಕಾರಣ ನಿನ್ನೆ ರಾತ್ರಿಯ ನಂತರ ಈ ಘಟನೆ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ.

    23 ವರ್ಷ ವಯಸ್ಸಿನ ಯುವತಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ರಾಯಚೂರಿನ ಮಾಣಿಕ್ ಪ್ರಭು ದೇವಾಲಯದ ಗುಡ್ಡದ ಮರವೊಂದರಲ್ಲಿ ಏಪ್ರಿಲ್ 16 ರಂದು ಪತ್ತೆಯಾಗಿತ್ತು. ಆ ಯುವತಿಯ ದೇಹದಲ್ಲಿ ಸಂಪೂರ್ಣ ಸುಟ್ಟ ಗಾಯಗಳೂ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ, ಆಕೆಯನ್ನು ಹಿಂಸಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

    ರಾಯಚೂರಿನಲ್ಲಿ ವಿದ್ಯಾರ್ಥಿನಿಯ ನಿಗೂಢ ಸಾವು, ಕಟ್ಟೆಯೊಡೆದ ಆಕ್ರೋಶ

    ಇಂತಹ ಹೇಯ ಘಟನೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಯುವತಿಗೆ ನ್ಯಾಯ ನೀಡಿ ಎಂಬ ಜನರ ಧ್ವನಿಗೆ ಚಿತ್ರರಂಗದ ಕೆಲವರು ಸಹ ಸೇರಿದ್ದಾರೆ. ಮುಂದೆ ಓದಿ...

    ಘಟನೆ ಬಗ್ಗೆ ಕೇಳಿಯೇ ಕೋಪ ಬಂತು

    ಘಟನೆ ಬಗ್ಗೆ ಕೇಳಿಯೇ ಕೋಪ ಬಂತು

    ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ನಟಿ ರಕ್ಷಿತಾ ಪ್ರೇಮ್ ''ಈ ಬಾರಿಯಾದರೂ ನ್ಯಾಯ ಸಿಗಲಿ. ಈ ಘಟನೆ ನಡೆದಿದೆ ಎನ್ನುವುದನ್ನು ಕೇಳಿಯೇ ನನಗೆ ಕೋಪ, ಬೇಸರ, ನೋವು ಉಂಟಾಗಿದೆ. ನಿಮಗೂ ಕೂಡ ಈ ಘಟನೆ ಇದೇ ರೀತಿ ಆಗಿರುತ್ತದೆ.'' ಎಂದು ನ್ಯಾಯಕ್ಕಾಗಿ ಧ್ವನಿ ಎತ್ತಿದ್ದಾರೆ.

    ರಾಯಚೂರಿನ ಜನರೊಂದಿಗೆ ನಾನಿದ್ದೇನೆ

    ರಾಯಚೂರಿನ ಜನರೊಂದಿಗೆ ನಾನಿದ್ದೇನೆ

    ''ಈ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಇಂಥ ಘೋರ ಕೃತ್ಯ ಎಸಗಿದವರಿಗೆ ಈಗಲೇ ಶಿಕ್ಷೆಯಾಗಬೇಕು. ರಾಯಚೂರಿನ ಜನರೊಂದಿಗೆ ನಾನಿದ್ದೇನೆ'' ಎಂದು ಘಟನೆಯ ಬಗ್ಗೆ ಟ್ವೀಟ್ ಮಾಡಿರುವ ನಟಿ ಹರ್ಷಿಕಾ ಪೂಣಚ್ಚ ಹೋರಾಟದಲ್ಲಿ ಭಾಗಿಯಾಗಲಿದ್ದೇನೆ ಎಂದು ಧೈರ್ಯ ನೀಡಿದ್ದಾರೆ.

    ನನ್ನ ಹೃದಯ ಒಡೆದಿದೆ

    ನನ್ನ ಹೃದಯ ಒಡೆದಿದೆ

    ''ಮಾನವೀಯತೆ ಎಲ್ಲಿದೆ? ಮೂಲದ ಪ್ರಕಾರ ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿ ಅತ್ಯಾಚಾರಕ್ಕೊಳಗಾದ ಮತ್ತು ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ. ಇದು ನಿಜವಾಗಿಯೂ ನನ್ನ ಹೃದಯವನ್ನು ಒಡೆಯುವಂತೆ ಮಾಡಿದೆ. ಇದು ನಿಲ್ಲಲು ಈ ರೀತಿಯ ಎಷ್ಟು ಘಟನೆ ನಡೆಯಬೇಕು. ನ್ಯಾಯ ಸಿಗುತ್ತದೆ ಎಂಬ ಭರವಸೆ ಇರಲಿ ಮತ್ತು ಇದು ಇಲ್ಲಿಗೆ ಕೊನೆಯಾಗಲಿ.'' ಎಂದು ರಶ್ಮಿಕಾ ಮಂದಣ್ಣ ಟ್ವೀಟ್ ಮಾಡಿದ್ದಾರೆ.

    ನಟ ಸತೀಶ್ ನೀನಾಸಂ

    ನಟ ಸತೀಶ್ ನೀನಾಸಂ

    ನಟ ಸತೀಶ್ ನೀನಾಸಂ ಸಹ ಈ ಅಭಿಯಾನದಲ್ಲಿ ಭಾವಿಯಾಗಿದ್ದಾರೆ. ''ಮನುಷ್ಯ ಕುಲವೇ ತಲೆ ತಗ್ಗಿಸುವಂಥ ಕೆಲಸ ಮಾಡಿದ ನೀಚರಿಗೆ ಸರಿಯಾದ ಶಿಕ್ಷೆ ಆಗಲಿ... ಅವರಿಗೆ ನ್ಯಾಯ ಸಿಗಲಿ'' ಎಂದು ಟ್ವೀಟ್ ಮಾಡಿ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    English summary
    Kannada actors tweets about raichur engineering student dies incident. An Engineering student from Raichur died mysteriously on April 16. People are protesting against the incident and claimed that, It is a rape and murder case.
    Friday, April 19, 2019, 14:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X