ದರ್ಶನ್ ಮನೆಯಲ್ಲಿ ಸ್ಟಾರ್ ನಟರ ಜಾತ್ರೆ: ಕಾರಣವೇನು?
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್, 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಮುಗಿಸಿ ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಮತ್ತೊಂದೆಡೆ ಲಂಬೋರ್ಗಿನಿ ಕಾರು ಹತ್ತಿ ದರ್ಶನ್ ಸವಾರಿ ಮಾಡ್ತಿದ್ದಾರೆ. ಇದರ ಮಧ್ಯೆ ದಾಸನ ಮನೆಗೆ ಕನ್ನಡದ ಸ್ಟಾರ್ ನಟರು ಭೇಟಿ ಕೊಟ್ಟಿದ್ದಾರೆ.
ದರ್ಶನ್ ಅವರ ಆಪ್ತ ಸ್ನೇಹಿತರು ಎನಿಸಿಕೊಂಡಿರುವ ಕಲಾವಿದರು, ನಿರ್ಮಾಪಕರು ದಚ್ಚು ಮನೆಗೆ ಭೇಟಿ ಕೊಟ್ಟು ಫೋಟೋ ಕ್ಲಿಕ್ಕಿಸಿಕೊಂಡು, ಸಂಭ್ರಮಿಸಿದ್ದಾರೆ.
ಅಷ್ಟಕ್ಕೂ, ದಾಸನ ಮನೆಗೆ ಕನ್ನಡ ನಟರು ಭೇಟಿ ಕೊಟ್ಟಿದ್ದೇಕೆ? ಯಾವ ಸ್ಟಾರ್ ನಟರು ದಚ್ಚು ಮನೆಗೆ ಬಂದಿದ್ದರು ಎಂದು ತಿಳಿಯಲು ಮುಂದೆ ಓದಿ.....

ದಚ್ಚು ಮನೆಗೆ ಅರ್ಜುನ್ ಸರ್ಜಾ
ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ 'ಕುರುಕ್ಷೇತ್ರ' ಸಿನಿಮಾ ಮಾಡಿದಾಗನಿಂದಲೂ ದಾಸನ ಜೊತೆ ತುಂಬ ಆತ್ಮೀಯರಾಗಿದ್ದಾರೆ. ದರ್ಶನ್ ಫಾರ್ಮ್ ಹೌಸ್, ದರ್ಶನ್ ಮನೆ ಸೇರಿದಂತೆ ದರ್ಶನ್ ಜೊತೆ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತಿಚೇಗಷ್ಟೇ ದರ್ಶನ್ ಖರೀದಿಸಿರುವ ಲಂಬೋರ್ಗಿನಿ ಕಾರು ನೋಡಲು ದಾಸನ ಮನೆಗೆ ಸರ್ಜಾ ಭೇಟಿ ನೀಡಿದ್ದಾರೆ.

ಪ್ರಜ್ವಲ್ ಮತ್ತು ಚಿರು ಸರ್ಜಾ
ಅರ್ಜುನ್ ಸರ್ಜಾ ಜೊತೆಯಲ್ಲಿ ಚಿರಂಜೀವಿ ಸರ್ಜಾ ಮತ್ತು ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಕೂಡ ಚಾಲೆಂಜಿಂಗ್ ಸ್ಟಾರ್ ಮನೆಗೆ ಭೇಟಿ ಕೊಟ್ಟು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

'ಮೆಜೆಸ್ಟಿಕ್' ನಿರ್ಮಾಪಕ
ದರ್ಶನ್ ಗೆ 'ಮೆಜೆಸ್ಟಿಕ್' ಚಿತ್ರದಲ್ಲಿ ಅವಕಾಶ ನೀಡಿದ್ದ ನಿರ್ಮಾಪಕ ಎಂ.ಜಿ ರಾಮಮೂರ್ತಿ ಅವರು ಕೂಡ ದರ್ಶನ್ ಮನೆಗೆ ಆಗಮಿಸಿ ದುರ್ಯೋಧನನ ಹೊಸ ಕಾರು ನೋಡಿ ಖುಷಿ ಪಟ್ಟಿದ್ದಾರೆ.

ದಾಸನ ಯಶಸ್ಸಿನ ಬಗ್ಗೆ ತರುಣ್ ಸುಧೀರ್ ಶ್ಲಾಘನೆ
ನಿರ್ದೇಶಕ, ನಟ ತರುಣ್ ಸುಧೀರ್ ಕೂಡ ದರ್ಶನ್ ಮನೆಗೆ ಹೋಗಿದ್ದು, ದಾಸನ ಯಶಸ್ಸಿನ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಲೂನಾ ವಾಹನದಿಂದ ಲಂಬೋರ್ಗಿನಿ ಕಾರಿನ ವರೆಗೂ ದರ್ಶನ್ ಸಿಕ್ಕಾಪಟ್ಟೆ ಕಷ್ಟಪಟ್ಟಿದ್ದಾರೆ. ಅವರ ಕೆಲಸ, ಅವರನ್ನ ಈ ಮಟ್ಟಕ್ಕೆ ಕರೆದುಕೊಂಡು ಬಂದಿದೆ ತರುಣ್ ಸಂತಸ ಸೂಚಿಸಿದ್ದಾರೆ.

ಯಶಸ್ ಸೂರ್ಯ
ಯುವ ನಟ ಯಶಸ್ ಸೂರ್ಯ ಕೂಡ ದರ್ಶನ್ ಮನೆಯಲ್ಲಿ ಕಾಣಿಸಿಕೊಂಡರು. ದರ್ಶನ್ ಸಿನಿಮಾಗಲಲ್ಲಿ ಖಾಯಂ ನಟನಾಗಿ ಅಭಿನಯಿಸುತ್ತಿರುವ ಯಶಸ್ ಸೂರ್ಯ, 'ಕುರುಕ್ಷೇತ್ರ' ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ.


Click it and Unblock the Notifications











