For Quick Alerts
  ALLOW NOTIFICATIONS  
  For Daily Alerts

  ಡಿ ಬಾಸ್ ಹುಟ್ಟುಹಬ್ಬಕ್ಕೆ ಸ್ಟಾರ್ ಗಳ ಶುಭಾಶಯ: ಯಾರ್ಯಾರ ವಿಶ್ ಹೇಗಿದೆ?

  |
  ಕಾರ್ಪೊರೇಷನ್ ಸ್ಕೂಲ್ ಅಲ್ಲಿ ಓದಿದ್ದು ನಂಗೆ ಇಂಗ್ಲೀಷ್ ಬರಲ್ಲ

  ಬಾಕ್ಸ್ ಆಫೀಸ್ ಸುಲ್ತಾನ್, ಡಿ ಬಾಸ್ ದರ್ಶನ್ ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 43ನೇ ವಸಂತಕ್ಕೆ ಕಾಲಿಟ್ಟ ದರ್ಶನ್ ಗೆ ಶುಭಾಶಯಗಳ ಮಹಾಪೂರವೆ ಹರಿದು ಬರುತ್ತಿದೆ. ಅಭಿಮಾನಿಗಳು ನೆಚ್ಚಿನ ನಟನ ದರ್ಶನಕ್ಕೆ ರತ್ರಿಯಿಂದಲೆ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ದರ್ಶನ್ ಮನೆ ಮುಂದೆ ಕಾದುಕೂತಿದ್ದಾರೆ. ಶುಭಾಶಯ ತಿಳಿಸಲು ಕಾತರರಾಗಿದ್ದಾರೆ.

  ಕೇಕ್ ಕತ್ತರಿಸದೆ ದರ್ಶನ್ ಅಭಿಮಾನಿಗಳ ಜೊತೆ ರಾತ್ರಿ ಹುಟ್ಟುಹಬ್ಬ ಆಚಸಿಕೊಂಡಿದ್ದಾರೆ. ಅಭಿಮಾಮನಿಗಳ ಜೊತೆ ಶೇಕ್ ಹ್ಯಾಂಡ್ ಮಾಡಿ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ದರ್ಶನ್ ಗೆ ಅಭಿಮಾನಿಗಳ ಜೊತೆಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಕೂಡ ಶುಭಾಶಯ ತಿಳಿಸಿದ್ದಾರೆ.

  ಡಿ ಬಾಸ್ ಜನ್ಮದಿನ: ಕೇಕ್ ಕಟ್ ಮಾಡದೆ ಹುಟ್ಟುಹಬ್ಬ ಆಚರಿಸಿಕೊಂಡ ದರ್ಶನ್.!ಡಿ ಬಾಸ್ ಜನ್ಮದಿನ: ಕೇಕ್ ಕಟ್ ಮಾಡದೆ ಹುಟ್ಟುಹಬ್ಬ ಆಚರಿಸಿಕೊಂಡ ದರ್ಶನ್.!

  ನಟಿ ಸುಮಲತಾ, ರಕ್ಷಿತಾ ಪ್ರೇಮ್, ರಚಿತಾ ರಾಮ್, ನೆನಪಿರಲಿ ಪ್ರೇಮ್, ಜೋಗಿ ಪ್ರೇಮ್ ಸೇರಿದಂತೆ ಚಿತ್ರರಂಗದ ಸಾಕಷ್ಟು ಗಣ್ಯರು ದರ್ಶನ್ ಗೆ ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ. ಮುಂದೆ ಓದಿ...

  ಸುಮಲತಾ ಅಂಬರೀಶ್

  "ನನ್ನ ಪ್ರೀತಿಯ ಹಿರಿಯ ಮಗ ದರ್ಶನ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. ನೀನು ಇರುವ ಸ್ಥಳವನ್ನು ತಲುಪಲು ನೀನು ತುಂಬ ಶ್ರಮಿಸಿದ್ದೀಯಾ. ದೇವರು ನಿನಿಗೆ ಅದ್ಭುತ ಯಶಸ್ಸು ಖ್ಯಾತಿ, ಸಮೃದ್ಧಿಯನ್ನು ನೀಡಲಿ ಎಂದು ಆಶೀರ್ವಾದ ಮಾಡುತ್ತೇನೆ. ನೀನು ಯಾವಾಗಲು ಸಂತೋಷದಿಂದ, ಆರೋಗ್ಯದಿಂದ ಇರು ಎಂದು ಬಯಸುತ್ತೇನೆ. ಅಭಿ ಮತ್ತು ನಿನ್ನ ಮದರ್ ಇಂಡಿಯಾ ಕಡೆಯಿಂದ ಪ್ರೀತಿಯ ಶುಭಾಶಯ" ಎಂದಿದ್ದಾರೆ.

  ರಚಿತಾ ರಾಮ್

  "ಹುಟ್ಟುಹಬ್ಬದ ಆರ್ದಿಕ ಶುಭಾಶಯಗಳು ದರ್ಶನ್ ಸರ್. ಪ್ರಪಂಚದ ಎಲ್ಲಾ ಸಂತೋಷ, ಆರೋಗ್ಯ ಮತ್ತು ಯಶಸ್ಸು ಸಿಗಲಿ ಎಂದು ನಾನು ಬಯಸುತ್ತೇನೆ" ಎಂದು ನಟಿ ರಚಿತಾ ರಾಮ್ ವಿಶ್ ಮಾಡಿದ್ದಾರೆ.

  ವಿಡಿಯೋ: ಈ 'ರಾಬರ್ಟ್' ರಾಮನೂ ಹೌದು.. ರಾವಣನೂ ಹೌದು..ವಿಡಿಯೋ: ಈ 'ರಾಬರ್ಟ್' ರಾಮನೂ ಹೌದು.. ರಾವಣನೂ ಹೌದು..

  ನೀವು ನನ್ನ ಅತ್ಯಂತ ನೆಚ್ಚಿನ ವ್ಯಕ್ತಿ

  ಹುಟ್ಟುಹಬ್ಬದ ಶುಭಾಶಯಗಳು ಬೆಸ್ಟಿ ದರ್ಶನ್. ನೀನು ನನ್ನ ಅತ್ಯಂತ ನೆಚ್ಚಿನ ವ್ಯಕ್ತಿ. ಪ್ರಾಮಾಣಿಕ, ನೇರ ನುಡಿಯ ಪ್ರೀತಿಯ ವ್ಯಕ್ತಿ. ದೇವರು ನಿಮಗೆ ಒಳ್ಳೆಯದು ಮಾಡಲಿ" ಎಂದು ನಟಿ ರಕ್ಷಿತಾ ಶುಭಕೋರಿದ್ದಾರೆ.

  ದರ್ಶನ್ ಭಾಯಿ ಜಾನ್

  "ದರ್ಶನ್ ಭಾಯಿ ಜಾನ್ ಹುಟ್ಟುಹಬ್ಬದ ಶುಭಾಶಯಗಳು. ದೇವರು ನಿಮಗೆ ಆಯಸ್ಸು, ಆರೋಗ್ಯ ಕೊಟ್ಟು ಸದಾ ಕಾಪಾಚಡಲಿ ಎಂದು ಹಾರೈಸುತ್ತೇನೆ. ಲವ್ ಯು ಭಾಯ್ ಜಾನ್" ಎಂದು ನಟ ನೆನಪಿರಲಿ ಪ್ರೇಮ್ ಶುಭಕೋರಿದ್ದಾರೆ.

  ಡಿ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ನಿರೀಕ್ಷೆ ಏನು? ಸರ್ಪ್ರೈಸ್ ಏನು?ಡಿ ಬಾಸ್ ಹುಟ್ಟುಹಬ್ಬದ ಪ್ರಯುಕ್ತ ನಿರೀಕ್ಷೆ ಏನು? ಸರ್ಪ್ರೈಸ್ ಏನು?

  ಸದಾ ಕಾಲ ಹೀಗೆ ನಗ್ನಗ್ತಾ ಬಿಂದಾಸ್ಸಾಗಿರಿ

  "ಸದಾ ಕಾಲ ಹೀಗೆ ನಗ್ನಗ್ತಾ ಬಿಂದಾಸ್ಸಾಗಿರಿ, ಅಭಿಮಾನಿಗಳನ್ನ ರಂಜಿಸ್ತಾಯಿರಿ ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು" ಎಂದು ಜೋಗಿ ಪ್ರೇಮ್ ವಿಶ್ ಮಾಡಿದ್ದಾರೆ.

  English summary
  Kannada actors wishes for Darshan birthday. Darshan celebrated his 43 birthday with his fans in RR Nagara Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X