'ಯಜಮಾನ'ನ ಹುಟ್ಟುಹಬ್ಬಕ್ಕೆ ಸ್ಟಾರ್ ಗಳ ಶುಭಾಶಯ, ಯಾರ್ಯಾರ ವಿಶ್ ಹೇಗಿತ್ತು?

ಬಾಕ್ಸ್ ಆಫೀಸ್ ಸುಲ್ತಾನ, ಡಿ ಬಾಸ್ ದರ್ಶನ್ ಅಭಿಮಾನಿಗಳು ಇಂದು ಬಹಳ ಖುಷಿಯಲ್ಲಿ ಇದ್ದಾರೆ. ಆ ಖುಷಿಗೆ ಕಾರಣ ಆಗಿರುವುದು ಅವರ ಪ್ರೀತಿಯ ಬಾಸ್ ಬರ್ತ್ ಡೇ.

ದರ್ಶನ್ ಎನ್ನುವ ಹೆಸರಿನಲ್ಲಿಯೇ ಲೆಕ್ಕವಿಲ್ಲದ ಅಭಿಮಾನವಿದೆ. ದರ್ಶನ್ ಅಭಿಮಾನಿಗಳ ಪ್ರೀತಿ ಬಗ್ಗೆ ಎಷ್ಟು ಹೇಳಿದರು ಕಡಿಮೆಯೇ. ಅಭಿಮಾನಿಗಳ ಜೊತೆಗೆ ಕನ್ನಡ ಚಿತ್ರರಂಗದ ನಟ, ನಟಿ, ನಿರ್ದೇಶಕರ ಶುಭಾಶಯಗಳು ದರ್ಶನ್ ಗಾಗಿ ಬಂದಿದೆ.

ನಟಿ ಸುಮಲತಾ, ರಕ್ಷಿತಾ ಪ್ರೇಮ್, ನಟ ಜಗ್ಗೇಶ್, ನೆನಪಿರಲಿ ಪ್ರೇಮ್, ಧುವ ಸರ್ಜಾ, ಆದಿತ್ಯ, ನಿರ್ದೇಶಕರಾದ ಪವನ್ ಒಡೆಯರ್, ಸಂತೋಷ್ ಆನಂದ್ ರಾಮ್, ಎ ಪಿ ಅರ್ಜುನ್ ಸೇರಿದಂತೆ ಸಾಕಷ್ಟು ಚಿತ್ರರಂಗದ ಗಣ್ಯರು ದರ್ಶನ್ ಗೆ ಟ್ವೀಟ್ ಮಾಡುವ ಮೂಲಕ ಶುಭಾಶಯವನ್ನು ತಿಳಿಸಿದ್ದಾರೆ. ಮುಂದೆ ಓದಿ...

ಸಂತೋಷದಿಂದ ಇರಲಿ - ಸುಮಲತಾ

''ದರ್ಶನ್ ನಿಮಗೆ ನನ್ನ ಆಶೀರ್ವಾದ ಮತ್ತು ಪ್ರೀತಿ. ನೀನು ಪ್ರತಿಯೊಂದು ಮೆಟ್ಟಿಲು ಹತ್ತಿಕೊಂಡು ಇಂತಹ ದೊಡ್ಡ ಸ್ಥಾನಕ್ಕೆ ಬಂದಿದ್ದೀಯಾ. ಇದನ್ನು ನಾನು ಹೆಮ್ಮೆಯಿಂದ, ಖುಷಿಯಿಂದ ನೋಡಿಕೊಂಡು ಬಂದಿದ್ದೇನೆ. ಇಂದು ಮತ್ತು ಎಂದೆಂದಿಗೂ ನೀನು ಸಂತೋಷದಿಂದ ಇರಲಿ ಎಂದು ಆಶಿಸುತ್ತಾನೆ. ಹುಟ್ಟುಹಬ್ಬದ ಶುಭಾಶಯ ಚಾಲೆಂಜಿಂಗ್ ಸ್ಟಾರ್ ದರ್ಶನ್'' - ಸುಮಲತಾ, ನಟಿ

ಖುಷಿಯಾಗಿರಿ. ಚೆನ್ನಾಗಿರಿ.. - ರಕ್ಷಿತಾ

ನಟಿ ರಕ್ಷಿತಾ ಟ್ವಿಟ್ಟರ್ ನಲ್ಲಿ ದರ್ಶನ್ ಗೆ ವಿಶ್ ಮಾಡಿದ್ದಾರೆ. ಹ್ಯಾಪಿ ಬರ್ತ್ ಡೇ ದರ್ಶನ್. ಖುಷಿಯಾಗಿರಿ.. ಚೆನ್ನಾಗಿರಿ.. ದೇವರು ಒಳ್ಳೆಯದು ಮಾಡಲಿ'' ಎಂದಿದ್ದಾರೆ. ದರ್ಶನ್ ಹಾಗೂ ರಕ್ಷಿತಾ ಒಟ್ಟು ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದು, ಬೆಸ್ಟ್ ಫೇರ್ ಅಂತ ಕರೆದುಕೊಂಡಿದೆ.

ನೂರ್ಕಾಲ ಸುಖವಾಗಿ ಬಾಳಿ - ಧ್ರುವ ಸರ್ಜಾ

''ಹುಟ್ಟು ಹಬ್ಬದ ಶುಭಾಶಯಗಳು ಚಾಲೆಂಜಿಂಗ್ ಸ್ಟಾರ್ "ಡಿ" ಬಾಸ್... ನೂರ್ಕಾಲ ಸುಖವಾಗಿ ಬಾಳಿ ...ಜೈ ಆಂಜನೇಯ.'', ಧ್ರುವ ಸರ್ಜಾ, ನಟ

ಹುಟ್ಟುಹಬ್ಬ ಶುಭಾಶಗಳು - ಜಗ್ಗೇಶ್

ದರ್ಶನ್ ಹುಟ್ಟುಹಬ್ಬಕ್ಕೆ ನಟ ಜಗ್ಗೇಶ್ ಸಹ ಶುಭಾಶಯ ತಿಳಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ದರ್ಶನ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿರುವ ಅವರು ಒಂದೇ ಸಾಲಿನಲ್ಲಿ ಬರ್ತ್ ಡೇ ಶುಭಾಶಯ ಹೇಳಿದ್ದಾರೆ. ಜಗ್ಗೇಶ್ ನಟನೆಯ 'ಅಗ್ರಜ' ಚಿತ್ರದಲ್ಲಿ ದರ್ಶನ್ ವಿಶೇಷ ಪಾತ್ರ ಮಾಡಿದ್ದರು.

ಹ್ಯಾಪಿ ಬರ್ತ್ ಡೇ ಭಾಯಿ ಜಾನ್ - ನೆನಪಿರಲಿ ಪ್ರೇಮ್

ನಟ ನೆನಪಿರಲಿ ಪ್ರೇಮ್ ತೂಗುದೀಪ ಪ್ರೊಡಕ್ಷನ್ಸ್ ನಲ್ಲಿ ಬಂದ ಮೊದಲ ಸಿನಿಮಾ 'ಜೊತೆ ಜೊತೆಯಲಿ' ಚಿತ್ರದಲ್ಲಿ ನಾಯಕನಾಗಿದ್ದರು. ಇತ್ತೀಚಿಗಷ್ಟೆ ಪ್ರೇಮ್ ನಟನೆಯ 'ಚೌಕ'ದಲ್ಲಿ ಸಹ ದರ್ಶನ್ ಒಂದು ಪಾತ್ರ ಮಾಡಿದ್ದರು. ಇದೀಗ ದರ್ಶನ್ ಬರ್ತ್ ಡೇ ಪ್ರೇಮ್ ಟ್ವಿಟ್ಟರ್ ನಲ್ಲಿ ಶುಭಾಶಯ ತಿಳಿಸಿದ್ದಾರೆ.

ಬಾಕ್ಸ್ ಆಫೀಸ್ ಸುಲ್ತಾನ್ - ಪವನ್ ಒಡೆಯರ್

''ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್, ಈ ಜಮಾನದ ಯಜಮಾನ ದರ್ಶನ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು.'' - ಪವನ್ ಒಡೆಯರ್.

ದೇವರು ಯಶಸ್ಸು ನೀಡಲಿ - ಆದಿತ್ಯ

ನಟ ಆದಿತ್ಯ ದರ್ಶನ್ ಅವರ ಆಪ್ತ ಗೆಳೆಯರಲ್ಲಿ ಒಬ್ಬರು. ಈ ಇಬ್ಬರು ನಟರು 'ಸ್ನೇಹನಾ ಪ್ರೀತಿನಾ' ಹಾಗೂ 'ಚಕ್ರವರ್ತಿ' ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ದರ್ಶನ್ ಬರ್ತ್ ಡೇ ಗೆ ಆದಿತ್ಯ ಹ್ಯಾಪಿ ಬರ್ತ್ ಡೇ ಬ್ರದರ್. ನಿನಗೆ ಆ ದೇವರು ಯಶಸ್ಸು ನೀಡಲಿ ಎಂದು ವಿಶ್ ಮಾಡಿದ್ದಾರೆ.

ಮ್ಯಾನ್ ಆಫ್ ಮಾಸ್ - ಸಂತೋಷ್ ಆನಂದ್ ರಾಮ್

ನಿರ್ದೇಶಕ ಸಂತೋಷ್ ಆನಂದ್ ರಾಮ್ ಮ್ಯಾನ್ ಆಫ್ ಮಾಸ್ ಎಂದು ದರ್ಶನ್ ಗೆ ಹೊಸ ಟೈಟಲ್ ನೀಡಿದ್ದಾರೆ. ಎಪಿ ಅರ್ಜುನ್ ''ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಅಣ್ಣ. ನಿಮ್ಮ ಆನೆ ನಡಿಗೆ ಹೀಗೆಯೇ ಮುಂದುವರಿಯಲಿ. ಸದಾ ಯಶಸ್ಸು ನಿಮ್ಮದಾಗಲಿ. ನೂರ್ಕಾಲ ನಗುತಾ ಸುಖವಾಗಿರಿ.'' ಎಂದು ಶುಭ ಹಾರೈಸಿದ್ದಾರೆ.

More from Filmibeat

English summary
Kannada actors wishes for Darshan birthday. Darshan celebrated his 42th birthday with his fans in RR Nagara Bengaluru.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X