ನೇರಳೆ ಬಣ್ಣದ ಸೀರೆಯಲ್ಲಿ ಮಿಂಚಿದ ನೀರೆ,ಮೇಘಾ ಶೆಟ್ಟಿ ಹೊಸ ಫೋಟೊಗಳಿಗೆ ಫ್ಯಾನ್ಸ್ ಕ್ಲೀನ್ ಬೋಲ್ಡ್..!
ಮೇಘಾ ಶೆಟ್ಟಿ ಚಿತ್ರರಂಗದಲ್ಲಿ ಬೆಳೆಯುತ್ತಿರುವ ನಟಿ. ಆಗಾಗ ತಮ್ಮ ಸ್ಟೈಲಿಷ್ ಲುಕ್ ನಿಂದ ಅಭಿಮಾನಿಗಳ ಮನಸನ್ನು ಕದಿಯುವ ಈ ಚೋರಿ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಅಪ್ಲೋಡ್ ಮಾಡುತ್ತಾ ಅಭಿಮಾನಿಗಳಿಗೆ ಬಹಳ ಖುಷಿಯನ್ನು ನೀಡುತ್ತಿರುತ್ತಾರೆ. ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ. ಮೊದಲಿಗೆ ಜೊತೆ ಜೊತೆಯಲಿ ಧಾರಾವಾಹಿಯ ಮೂಲಕ ಬಣ್ಣ ಹಚ್ಚಿದ ಮೇಘಾ ಶೆಟ್ಟಿ ಅನು ಸಿರಿಮನೆ ಎಂದೇ ಖ್ಯಾತಿ ಗಳಿಸಿದ್ದರು.
ಇದಾದ ಬಳಿಕ ಸಾಕಷ್ಟು ಸಿನಿಮಾದಲ್ಲಿ ಮೇಘಾ ಶೆಟ್ಟಿ ಗೆ ಆಫರ್ ಗಳು ಬಂತು. ಇದೀಗ ಮೇಘಾ ಶೆಟ್ಟಿ ಸೀರೆಯುಟ್ಟ ಫೋಟೋ ವೈರಲ್ ಆಗಿದ್ದು ನೋಡುಗರಲ್ಲಿ ಬಹಳ ಖುಷಿಯನ್ನು ನೀಡುತ್ತಿದೆ. ಮೊದಲೇ ಮೇಘಾ ಶೆಟ್ಟಿ ನೋಡಲು ಮುದ್ದಾಗಿದ್ದಾರೆ. ಅದರಲ್ಲೂ ಸೀರೆಯುಟ್ಟರೆ ಕೇಳಬೇಕೆ ಮತ್ತಷ್ಟು ಕ್ಯೂಟ್ ಆಗಿ ಕಾಣಿಸಿಕೊಳ್ಳುವುದು ಮಾತ್ರ ನಿಜ. ತಿಳಿ ನೇರಳೆ ಬಣ್ಣದ ಸೀರೆಯುಟ್ಟ ನಟಿಯ ನೋಟಕ್ಕೆ ಫಿದಾ ಅಗದವರೆ ಇಲ್ಲ. ಕಿವಿ ಗೆ ಒಲೆಯನ್ನು ಧರಿಸಿ, ಹಣೆಗೆ ಬಿಂದಿಯನ್ನಿಟ್ಟು, ಕೂದಲು ಲೂಸ್ ಬಿಟ್ಟು ಫೋಟೋ ಗೆ ಪೋಸ್ ನೀಡಿದ್ದಾರೆ. ಮೇಘಾ ಶೆಟ್ಟಿಯ ನ್ಯೂ ಲುಕ್ ಗೆ ಅಭಿಮಾನಿಗಳು ಮಾತು ಹೋಗಿದ್ದಾರೆ. ತಿಳಿ ನೇರಳೆ ಬಣ್ಣದ ಬಟ್ಟೆ ಮೇಘಾ ಶೆಟ್ಟಿ ಗೆ ಬಹಳ ಚೆನ್ನಾಗಿಯೇ ಕಾಣಿಸುತ್ತಿದ್ದು ನೋಡುಗರಿಗೆ ಇನ್ನಷ್ಟು ಖುಷಿಯನ್ನು ನೀಡುತ್ತಿದೆ.

ಮೇಘಾ ಶೆಟ್ಟಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಪೋಸ್ಟ್ ಮಾಡಿ ಅದರ ಕೆಳಗೆ ಬಟರ್ ಫ್ಲೈ ಚಿತ್ರವನ್ನು ಹಾಕಿದ್ದಾರೆ. ಸಾಕಷ್ಟು ಅಭಿಮಾನಿಗಳು ಫೋಟೋ ಗೆ ಲೈಕ್ ಹಾಗೆಯೇ ಕಾಮೆಂಟ್ ಮಾಡಿದ್ದಾರೆ. ಸಿಂಪಲ್ , ಬ್ಯೂಟಿಫುಲ್ ಮೇಘಾ ಎಂದೆಲ್ಲ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಬಹಳ ಸಿಂಪಲ್ ಸಿಟಿಯಿಂದ ಎಲ್ಲರ ಮನಸನ್ನು ಗೆದ್ದ ಚೋರಿ ಮೇಘಾ ಶೆಟ್ಟಿ. ಮೇಘಾ ಶೆಟ್ಟಿ ಮೂಲತಃ ಮಂಗಳೂರಿನವರು ಆಗಿದ್ದು ಆಗಾಗ ಬೀಚ್ ಗಳಲ್ಲಿ ಕಾಣಿಸುತ್ತಿರುತ್ತಾರೆ. ಹಾಗೆಯೇ ಸಾಕಷ್ಟು ಬಾರಿ ರಿಲ್ಯಾಕ್ಸ್ ಮೂಡ್ ಗಾಗಿ ಬೀಚ್ ಕಡೆ ಹೆಚ್ಚು ಒಲವು ಇವರಿಗೆ.
ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ನಟಿ
ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಆಕ್ಟಿವ್ ಆಗಿರುವ ನಟಿಯ ನಟನೆಗೆ ಫಿದಾ ಆಗದವರೆ ಇಲ್ಲ. ಕನ್ನಡ ಚಿತ್ರರಂಗದ ಬಹು ಬೇಡಿಕೆಯ ನಟಿ ಮೇಘಾ ಶೆಟ್ಟಿ ಎಂದರೆ ತಪ್ಪಾಗದು. ದೇಹ ಸೌಂದರ್ಯ ಕಾಪಾಡಿಕೊಳ್ಳಲು ಜಿಮ್ ಗೆ ಹೋಗುತ್ತಿದ್ದು ಅಲ್ಲಿನ ಸಾಕಷ್ಟು ಫೋಟೋ ಗಳು ವೈರಲ್ ಆಗುತ್ತಿರುತ್ತದೆ. ಇದೀಗ ಮೇಘಾ ಶೆಟ್ಟಿ ನಟಿ ಮೇಘಾ ಶೆಟ್ಟಿ ಈಗಾಗಲೇ ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಹಾಗೂ ಕೈವ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾಳೆ. ಸಿನಿಮಾಗಳಲ್ಲಿ ಬಹಳಷ್ಟು ಆಫರ್ ಗಳು ಬರುತ್ತಿದ್ದು ಮತ್ತಷ್ಟು ಸಿನಿಮಾದಲ್ಲಿ ನಟನೆ ಮೇಘಾ ಶೆಟ್ಟಿ ನಟನೆ ಮಾಡುತ್ತಿದ್ದಾರೆ.
ಹೊಸ ಸಿನಿಮಾದಲ್ಲಿ ನಟಿಸುತ್ತಿರುವ ನಟಿ
ಹೊಸ ಪ್ಯಾನ್ ಇಂಡಿಯಾ ಸಿನಿಮಾ 'ಆಫ್ಟರ್ ಆಪರೇಷನ್ ಲಂಡನ್ ಕೆಫೆ' ಶೂಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಜ್ವಲ್ ದೇವರಾಜ್ ಅಭಿನಯದ 'ಚೀತಾ' ಸಿನಿಮಾಗೂ ಮೇಘಾ ಶೆಟ್ಟಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ಗ್ರಾಮಾಯಣ ಸಿನಿಮಾ ಕೂಡ ಒಪ್ಪಿಕೊಂಡಿದ್ದಾಳೆ. ಹಾಗೆಯೇ ಮೇಘಾ ಶೆಟ್ಟಿಗೆ ವಿವಿಧ ಭಾಷೆಯಿಂದ ನಟನೆ ಮಾಡಲು ಅವಕಾಶ ಸಿಕ್ಕರೆ ನಟಿಸುವ ಬಗ್ಗೆ ಹೇಳಿಕೊಂಡಿದ್ದಾರೆ. ಒಟ್ಟಿನಲ್ಲಿ ಮೇಘಾ ಶೆಟ್ಟಿ ಕಿರುತೆರೆಯಿಂದ ಹಿರಿತೆರೆಗೆ ಲಗ್ಗೆ ಇಟ್ಟು ಸಿನಿಮಾದಲ್ಲಿ ಹೆಚ್ಚಿನ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವುದು ಅಷ್ಟೇ ನಿಜ.


Click it and Unblock the Notifications











