ಕೆಂಪು ಲೆಹೆಂಗಾ ತೊಟ್ಟು ಮಿಂಚಿದ ನಿವೇದಿತಾ ಗೌಡ,ಗ್ಲಾಮರ್ ಗೊಂಬೆಯ ಅಂದಕ್ಕೆ ಮನಸೋತ ಅಭಿಮಾನಿಗಳು..!

By ಪೂರ್ವ

ರೀಲ್ಸ್ ಮಾಡುತ್ತಿದ್ದ ಮುದ್ದು ಮೊಗದ ಚೆಲುವೆ ಇದೀಗ ಎಲ್ಲರ ಫೇವರೆಟ್ ಆಕ್ಟರ್ ಎಂದರೆ ತಪ್ಪಾಗದು. ರೀಲ್ಸ್ ಮೂಲಕ ಎಲ್ಲರ ಮನಸ್ಸನ್ನೂ ಗೆದ್ದಿರುವರು ಬೇರೆ ಯಾರು ಅಲ್ಲ ಅವರೇ ನಿವೇದಿತಾ ಗೌಡ. ನಿವೇದಿತಾ ಹೆಚ್ಚಾಗಿ ಅಭಿಮಾನಿಗಳನ್ನು ಸಂಪಾದಿಸಿದ್ದು ಬಿಗ್ ಬಾಸ್ ಮೂಲಕ ಎಂದು ಹೇಳಿದರೆ ತಪ್ಪಾಗಲಾರದು. ಬಿಗ್ ಬಾಸ್ ನಲ್ಲಿ ತನ್ನದೇ ಆದ ಛಾಪು ಮೂಡಿಸಿದವರು ನಿವೇದಿತಾ ಗೌಡ. ಚಿಕ್ಕ ಮಕ್ಕಳ ಹಾಗೆ ಇರುತ್ತಾ ಮುದ್ದು ಮುದ್ದು ಮಾತನಾಡುವ ಮುದ್ದು ಮೊಗದ ಉದ್ದ ಜಡೆ ಇರುವ ಚೆಲುವೆ ನಿವೇದಿತಾ ಗೌಡ.

ನಿವೇದಿತಾ ಗೌಡ ಎಲ್ಲರ ಜೊತೆ ಬೆರೆಯುತ್ತಿದ್ದಿದ್ದರಿಂದ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾಗಿದ್ದರು. ಆದರೆ ಇದೀಗ ಎಲ್ಲರನ್ನೂ ಮೋಡಿ ಮಾಡಿರುವ ಚೆಲುವೆ ಸಿನಿಮಾ ರಂಗಕ್ಕೂ ಕಾಲಿಟ್ಟಿದ್ದಾರೆ. ಬಿಗ್ ಬಾಸ್ ನಲ್ಲಿಯೇ ಇದ್ದ ರ್ಯಾಪರ್ ಚಂದನ್ ಶೆಟ್ಟಿ ಜೊತೆ ನಿವೇದಿತಾ ಗೌಡಗೆ ಪ್ರೇಮಾಂಕುರ ಆಗುತ್ತದೆ. ಅವರಿಬ್ಬರೂ ಮದುವೆ ಕೂಡ ಅದ್ದೂರಿಯಾಗಿ ಮಾಡಿಕೊಳ್ಳುತ್ತಾರೆ. ಆದರೆ ಕೆಲವು ವರ್ಷ ಆದ ಬಳಿಕ ಅವರಿಬ್ಬರ ದಾಂಪತ್ಯ ಜೀವನದಲ್ಲಿ ಮುರಿದು ಬಿತ್ತು.

kannada actres Nivedita gowda reels viral

ಹಾಗೆಯೇ ಅವರಿಬ್ಬರೂ ವಿಚ್ಛೇದನ ತೆಗೆದುಕೊಂಡಿರುವುದು ಅಭಿಮಾನಿಗಳಿಗೆ ಬಹಳ ಬೇಸರ ಆಗಿತ್ತು. ನಿವೇದಿತಾ ಗೌಡ ಅವರು ತೆಗೆದುಕೊಂಡ ನಿರ್ಧಾರಕ್ಕೆ ಅನೇಕ ಜನ ಅಭಿಮಾನಿಗಳು ಕಿಡಿಕಾರಿದ್ದರು. ಆದರೆ ಇನ್ನೂ ಕೆಲವರು ಸುಮ್ಮನೆ ಜೀವನ ಹಾಳು ಮಾಡಿಕೊಳ್ಳುವುದಕ್ಕಿಂತ ನನಗೆ ಸೆಟ್ ಆಗಲಿಲ್ಲ ಎಂದು ತಿಳಿದ ಬಳಿಕ ಅವರಿಂದ ದೂರ ಉಳಿಯುವುದು ಉತ್ತಮ ಎಂದು ಹೇಳುತ್ತಾರೆ. ಇನ್ನು ನಿವೇದಿತಾ ಗೌಡ ಅವರು ಇದ್ಯಾವುದನ್ನೂ ಲೆಕ್ಕಿಸದೆ ತಮ್ಮ ಗುರಿಯ ಬಗ್ಗೆ ಹೆಚ್ಚಿನ ಗಮನ ಹರಿಸಿದ್ದಾರೆ.

ಹೊಸ ಡ್ರೆಸ್ ತೊಟ್ಟು ರೀಲ್ಸ್ ಮಾಡಿದ ಬ್ಯೂಟಿ

ನಿವೇದಿತಾ ಗೌಡ ಅವರು ಲೆಹೆಂಗಾ ತೊಟ್ಟು ಎಲ್ಲರ ಮನಸನ್ನು ಗೆದ್ದಿದ್ದಾರೆ. ಇನ್ನು ಹೊಸ ಡ್ರೆಸ್ ತೊಟ್ಟು ಮಿಂಚಿದ ನಿವೇದಿತಾ ಗೌಡ ಅವರು ರೀಲ್ಸ್ ಮಾಡುತ್ತಾ ಎಲ್ಲರ ಮನಸನ್ನು ಗೆದ್ದಿದ್ದಾರೆ. ಹೊಸ ಡ್ರೆಸ್ ತೊಟ್ಟು ರೀಲ್ಸ್ ಮಾಡಿದ ಅಭಿಮಾನಿಗಳ ಮನಸ್ಸನ್ನು ಈ ಬ್ಯೂಟಿ ಗೆದ್ದಿದ್ದಾರೆ ಎಂದು ಹೇಳಿದರೆ ತಪ್ಪಾಗದು. ನಿವೇದಿತಾ ಗೌಡ ಅವರು ಸಿಲ್ವರ್ ಬಣ್ಣದ ನೆಕ್ಲೆಸ್ ತೊಟ್ಟು , ಕಿವಿಯ ಒಲೆಯನ್ನು ತೊಟ್ಟು ಅದ್ಭುತವಾಗಿಯೇ ಕಾಣಿಸುತ್ತಿದ್ದು ಅಭಿಮಾನಿಗಳು ನಿವೇದಿತಾ ಗೌಡ ಅವರನ್ನು ನೋಡಿ ಬಹಳ ಖುಷಿ ಪಟ್ಟಿದ್ದಾರೆ .

kannada actres Nivedita gowda reels viral

ಅಭಿಮಾನಿಗಳ ಕಾಮೆಂಟ್ ನೋಡಿ ನಿವಿ ಫುಲ್ ಹ್ಯಾಪಿ

ನಿವೇದಿತಾ ಡ್ಯಾನ್ಸ್ ನೋಡಿ ಫುಲ್ ಮಾರ್ಕ್ಸ್ ನೀಡಿದ್ದಾರೆ ಅನೇಕರು. ಸ್ವಪ್ನ ಸುಂದರಿ, ಮುದ್ದುಗೊಂಬೆ, ರಾಜಕುಮಾರಿ ಎಂದೆಲ್ಲ ಹೇಳಿ ಕಾಮೆಂಟ್ ಮಾಡಿದ್ದಾರೆ. ಇನ್ನು ಈಗಾಗಲೇ ನಿವೇದಿತಾ ಗೌಡ ಅವರ ನಟನೆಯ ಸಾಂಗ್ ರಿಲೀಸ್ ಆಗಲಿದೆ. ಈಗಾಗಲೇ ಅದರ ಪೋಸ್ಟರ್ ಬಿಡುಗಡೆ ಆಗಿದೆ. ವಾಲು ಕಲ್ಲತೊ (ತೆಲುಗು) ಮನಸಾರೆ ನಿನ್ನ (ಕನ್ನಡ) ಪೋಸ್ಟರ್‌ಗಳನ್ನು ನಿವೇದಿತ ಗೌಡ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಬಾರ್ಬಿ ಡಾಲ್ ಫುಲ್ ಆಕ್ಟಿವ್

ನಿವೇದಿತಾ ಗೌಡ ಅವರು ಇದೀಗ ಜಾಲಿ ಮೂಡ್ ನಲ್ಲಿ ಇದ್ದಾರೆ . ಈಗಾಗಲೇ ತನ್ನ ಗೆಳತಿಯ ಜೊತೆ ಮಜಾ ಮಾಡುತ್ತಾ ಹ್ಯಾಪಿಯಾಗಿ ಕಾಲ ಕಳೆಯುತ್ತಿರುವ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದರು. ಒಂದಲ್ಲ ಒಂದು ಸುದ್ದಿ ಮಾಡುತ್ತಾ ಎಲ್ಲರ ಮನಸನ್ನು ಗೆಲ್ಲುವ ಚೋರಿ ನಿವೇದಿತಾ ಗೌಡ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X