ಸೀರೆಯಲ್ಲಿ ನಿವೇದಿತಾ ಗೌಡ ವಯ್ಯಾರ, ಮುದ್ದು ಗೊಂಬೆಯ ಹೊಸ ಅವತಾರಕ್ಕೂ ಫ್ಯಾನ್ಸ್ ಸಿಡಿಮಿಡಿ..!

By ಪೂರ್ವ

ಬೋಲ್ಡ್ ಲುಕ್ ನಲ್ಲಿ ಕಾಣಿಸಿಕೊಳ್ಳುವ ನಟಿಯ ನೋಟಕ್ಕೆ ಅಭಿಮಾನಿಗಳು ಫಿದಾ ಆಗದವರೇ ಇಲ್ಲ. ಇತ್ತೀಚಿನ ದಿನಗಳಲ್ಲಿ ನಟಿಯರು ಹಾಟ್ ಅವತಾರದಲ್ಲಿ ಕಾಣಿಸಿಕೊಳ್ಳುವುದು ಹೊಸತೇನಲ್ಲ ಬಿಡಿ. ಇದೀಗ ನಿವೇದಿತಾ ಗೌಡ ಅವರು ಕೂಡ ಸಖತ್ ಬೋಲ್ಡ್ ಆಗಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ನಿವೇದಿತಾ ಸ್ಟೈಲ್ ಗೆ ಅಭಿಮಾನಿಗಳು ಮಾತ್ರ ಕ್ಲೀನ್ ಬೌಲ್ಡ್ ಆಗಿದ್ದಾರೆ. ಇನ್ನೂ ಕೆಲವರು ನಿವೇದಿತಾ ಗೌಡ ಇತ್ತೀಚಿನ ದಿನಗಳಲ್ಲಿ ಸಖತ್ ಬೋಲ್ಡ್ ಆಗಿ ಕಾಣಿಸಿಕೊಳ್ಳುತ್ತಾರೆ ಎಂದು ಬೇಸರ ಮಾಡಿಕೊಂಡಿದ್ಧಾರೆ. ಯಾಕೆ ಈ ರೀತಿಯ ಬಟ್ಟೆ ಧರಿಸುತ್ತಿದ್ದಾರೆ ಎಂದು ಪ್ರಶ್ನೆ ಕೇಳುತ್ತಿದ್ದಾರೆ.

ನಿವೇದಿತಾ ಗೌಡ ಮುದ್ದು ಮೊಗದ ಚೆಲುವೆ. ಬಹಳ ಬಬ್ಲಿಯಾಗಿ ಕಾಣಿಸುವ ಹುಡುಗಿಯ ನಟನೆಗೆ ಫಿದಾ ಆಗದವರೆ ಇಲ್ಲ. ಇವರ ಮಾತಿನ ದಾಟಿಗೆ ಮನಸೋಲದವರೇ ಇಲ್ಲ. ಸಿನಿಮಾಗಳಿಗೆ ಸಖತ್ ಆಫರ್ ಕೂಡ ಈ ಬೆಡಗಿಗೆ ಬರುತ್ತಿದೆ. ಇಂತಹ ನಿವೇದಿತಾ ಗೌಡ ಹೊಸದೊಂದು ಲುಕ್ ಮೂಲಕ ಎಲ್ಲರ ಮನಸನ್ನು ಗೆಲ್ಲಲು ಹೊರಟಿದ್ದಾರೆ. ಪಿಸ್ತಾ ಗ್ರೀನ್ ಕಲರ್ ಡ್ರೆಸ್ ನಲ್ಲಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅನೇಕರು ನಿವೇದಿತಾ ಗೌಡ ಅವರನ್ನು ಈ ಬಟ್ಟೆಯಲ್ಲಿ ನೋಡಿ ಬೇಸರ ಪಟ್ಟುಕೊಂಡಿದ್ದಾರೆ. ಯಾವತ್ತೂ ಒಂದೇ ರೀತಿಯ ಬಟ್ಟೆ ಹಾಕಿಕೊಂಡರೆ ಯಾರಿಗೆ ತಾನೇ ಇಷ್ಟ ಆಗುತ್ತೆ ಎಂದು ಬೈದುಕೊಂಡಿದ್ದಾರೆ. ಸೀರೆಯಲ್ಲಿ ಕಾಣಿಸಿಕೊಂಡ ಬೆಡಗಿ ನಿವೇದಿತಾ ಗೌಡ ಸೀರೆಲಿ ಹುಡುಗೀರ ಮೊದಲೇ ಬಾರದು ನಿಲ್ಲಲ್ಲ ಟೆಂಪರೇಚರ್ ಸಾಂಗ್ ಗೆ ಸಖತ್ ಬೋಲ್ಡ್ ಆಗಿ ಸ್ಟೆಪ್ ಹಾಕಿದ್ದಾರೆ.

kannada actres Nivedita gowda reels viral

ಯಾರೇ ಏನೇ ಹೇಳಿದರೂ ನಾನು ಇರೋದೇ ಹೀಗೆ ಎನ್ನುವುದನ್ನು ಅವರು ಪದೇ ಪದೇ ಪ್ರೂವ್ ಮಾಡುತ್ತಿದ್ದಾರೆ. ನಿವೇದಿತಾ ಗೌಡ ಬಿಗ್ ಬಾಸ್ ಮೂಲಕ ಎಲ್ಲರ ಮನಸನ್ನು ಗೆದ್ದಿದ್ದರು. ಆ ಬಳಿಕ ಚಂದನ್ ಶೆಟ್ಟಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಬಹಳ ಅದ್ದೂರಿಯಾಗಿ ನಡೆದರು ಮದುವೆ ಆದ ಕೆಲವೇ ವರುಷಗಳಲ್ಲಿ ದಾಂಪತ್ಯ ಜೀವನದಲ್ಲಿ ಬಿರುಕು ಕಾಣಿಸಿಕೊಂಡಿತು.ಇಬ್ಬರು ಒಮ್ಮತದಿಂದ ಸೇರಿಕೊಂಡು ವಿಚ್ಛೇದನ ಪಡೆದರು

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ನಟಿ

ಈ ವೇಳೆ ಸಾಕಷ್ಟು ಅಭಿಮಾನಿಗಳ ಹಾರ್ಟ್ ಬ್ರೇಕ್ ಆಗಿದೆ ಎಂದು ಹೇಳಿದರೆ ತಪ್ಪಾಗದು. ಆ ಬಳಿಕ ನಿವೇದಿತಾ ಗೌಡ ಅವರು ತನ್ನದೇ ಆದ ಹೊಸದೊಂದು ಜೀವನದ ಅಧ್ಯಾಯವನ್ನು ಕ್ರಿಯೇಟ್ ಮಾಡಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ನಟಿ ನಿವೇದಿತಾ ಗೌಡ ಎಂದು ಹೇಳಿದರೆ ತಪ್ಪಾಗದು ಆಗಾಗ ಹೊಸ ರೀಲ್ ಗಳನ್ನು ಮಾಡುತ್ತಾ ಎಲ್ಲರ ಮನಸನ್ನು ಗೆಲ್ಲುತ್ತಿದ್ದಾರೆ. ಇನ್ನುಳಿದಂತೆ ನಿವೇದಿತಾ ಗೌಡ ಸದ್ಯ ತೆಲುಗು ಹಾಡೊಂದಕ್ಕೆ ಹೆಜ್ಕೆ ಹಾಕಿದ್ದು ಚಿತ್ರರಂಗದಲ್ಲಿ ತಮ್ಮ ಅದೃಷ್ಟ ಪರೀಕ್ಷೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಬಿಡುಗಡೆಯಾದ ಹಾಡು ಸಿನಿ ರಸಿಕರ ಗಮನ ಸೆಳೆಯುವಲ್ಲಿ ಕೂಡ ಯಶಸ್ವಿಯಾಗಿದೆ. ಇನ್ನೂ ಕನ್ನಡದಲ್ಲಿ ತಮ್ಮ ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ಮುದ್ದು ರಾಕ್ಷಸಿ ಎಂಬ ಚಿತ್ರದಲ್ಲಿ ಕೂಡ ನಿವೇದಿತಾ ಗೌಡ ನಟಿಸಿದ್ಧಾರೆ

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X