'ಅನುಭವ' ಅಭಿನಯ ಮತ್ತೆ ಚಿತ್ರರಂಗಕ್ಕೆ ಕಮ್ ಬ್ಯಾಕ್
ಒಂದು ಕಾಲದ ಬಹು ಬೇಡಿಕೆಯ ನಟಿ ಇತ್ತೀಚಿಗೆ ಚಿತ್ರರಂಗದಿಂದ ಹಿಂದೆ ಸರಿದಿದ್ದರು. ಹೆಸರಿನಲ್ಲಿ ಅಭಿನಯ ಇವರು ಅವರು ಮತ್ತೆ ಬೆಳ್ಳಿ ಪರದೆ ಮೇಲೆ ಅಭಿನಯಿಸಲು ಬಂದಿದ್ದಾರೆ.
ಕನ್ನಡದ ಖ್ಯಾತ ನಟಿ ಅಭಿನಯ ಈಗ ಮತ್ತೆ ಸಿನಿಮಾ ಮಾಡುತ್ತಿದ್ದಾರೆ. 'ಕ್ರಷ್' ಎಂಬ ಹೊಸ ಸಿನಿಮಾದಲ್ಲಿ ಅವರು ನಾಯಕಿಯ ತಾಯಿಯ ಪಾತ್ರ ಮಾಡುತ್ತಿದ್ದಾರೆ. ಅವರ ಪಾತ್ರಕ್ಕೆ ಎರಡು ಶೇಡ್ ಇದೆಯಂತೆ. 25 ವರ್ಷದ ಯುವತಿ ಹಾಗೂ 75 ವರ್ಷದ ವೃದ್ಧೆ ಎರಡೂ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಅವರ ಪಾತ್ರ ಚಾಲೆಂಜಿಂಗ್ ಆಗಿ ಇರಲಿದೆ.
'ರಂಗ್ ಬಿರಂಗಿ' ಚಿತ್ರದ ನಟ ಆರ್ಯ ಈ ಸಿನಿಮಾದ ನಾಯಕನಾಗಿದ್ದಾರೆ. ಪ್ರತಿಭಾ ಚಿತ್ರದ ನಾಯಕಿ. ಅಭಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ. 'ಕ್ರಷ್' ಒಂದು ಲವ್ ಸ್ಟೋರಿ ಸಿನಿಮಾವಾಗಿದೆ.

ಚಂದ್ರಮೋಹನ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ರಾಜ್ ಮೆನನ್ ಸಿನಿಮಾಗೆ ಸಂಗೀತ ನೀಡಿದ್ದಾರೆ. ಚಿತ್ರದ 50% ರಷ್ಟು ಭಾಗ ಚಿತ್ರೀಕರಣ ಮುಗಿದಿದೆ. ಸತೀಶ್ ಛಾಯಾಗ್ರಹಣ, ಪವನ್ ಸಂಕಲನ ಕೆಲಸ ಮಾಡಿದ್ದಾರೆ.
English summary
Kannada actress Abhinaya playing mother role in 'Crush' movie.


Click it and Unblock the Notifications