ಸ್ಟೈಲಿಷ್ ಫೋಟೋ ಶೂಟ್ ಮಾಡಿಸಿದ ಅದಿತಿ ಪ್ರಭುದೇವ
ನಟಿ ಅದಿತಿ ಪ್ರಭುದೇವ ಇಲ್ಲಿಯವರೆಗೆ ಹೆಚ್ಚು ಹೋಮ್ಲಿ ಗರ್ಲ್ ಪಾತ್ರಗಳಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಹೊಸ ಫೋಟೋ ಶೂಟ್ ಮೂಲಕ ಸ್ಟೈಷಲ್ ಆಗಿ ಎಂಟ್ರಿ ನೀಡಿದ್ದಾರೆ.
ಮೂರ್ನಾಲ್ಕು ಲುಕ್ ಗಳಲ್ಲಿ ಅದಿತಿ ಕಾಣಿಸಿಕೊಂಡಿದ್ದಾರೆ. ಮೂರು ಸ್ಟೈಲಿಷ್ ಕಾಸ್ಟೂಮ್ ಗಳನ್ನು ಅದಿತಿ ಧರಿಸಿದ್ದಾರೆ. ತಮ್ಮ ಹೊಸ ಫೋಟೋ ಶೂಟ್ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.
ಬೇರೆ ಬೇರೆ ಕಾಸ್ಟೂಮ್ ಹಾಗೂ ಮೇಕಪ್ ಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ಅದಿತಿ ಕಾಣಿಸಿಕೊಂಡಿದ್ದಾರೆ. ಈವರೆಗೆ ಸಿನಿಮಾದಲ್ಲಿ ಅವರು ಕಾಣಿಸಿಕೊಂಡಿದ್ದ ಲುಕ್ ಗಿಂತ ಇದು, ವಿಭಿನ್ನವಾಗಿದೆ. ವಿನು ಗೌಡ ಅದಿತಿ ಕಾಸ್ಟೂಮ್ ಗಳಲ್ಲಿ ಡಿಸೈನ್ ಮಾಡಿದ್ದಾರೆ. ಪುನೀತ್ ಗೌಡ ತಮ್ಮ ಕ್ಯಾಮರಾದಲ್ಲಿ ಅದಿತಿಯನ್ನು ಸೆರೆ ಹಿಡಿದಿದ್ದಾರೆ.

ಸದ್ಯ, ಅದಿತಿ ಕನ್ನಡದಲ್ಲಿ ಅತಿ ಹೆಚ್ಚು ಬ್ಯುಸಿ ಇರುವ ನಟಿಯಾಗಿದ್ದಾರೆ. 'ರಂಗನಾಯಕಿ', 'ಒಂಬತ್ತನೇ ದಿಕ್ಕು', 'ಗಾಳಿಪಟ', 'ತೋತಾಪುರಿ', 'ಬ್ರಹ್ಮವಾರಿ', 'ಕುಸ್ತಿ' ಚಿತ್ರಗಳಲ್ಲಿ ಅದಿತಿ ನಟಿಸುತ್ತಿದ್ದಾರೆ.

ಅದಿತಿ ಚಿತ್ರರಂಗಕ್ಕೆ ಬಂದು ಕೇವಲ ಎರಡು ವರ್ಷ ಆಗಿದ್ದು, ಸಾಲು ಸಾಲು ಆಫರ್ ಗಳು ಅವರ ಕೈ ನಲ್ಲಿ ಇದೆ. ದಿನದಿಂದ ದಿನಕ್ಕೆ ಅದಿತಿ ಬೆಳೆಯುತ್ತಿದ್ದಾರೆ.


Click it and Unblock the Notifications











