For Quick Alerts
  ALLOW NOTIFICATIONS  
  For Daily Alerts

  'ರಾಮಾಚಾರಿ' ಚಿತ್ರದ ಅವಳಿ ಸಹೋದರಿಯರಿಗೆ ಸಿಕ್ಕಿದೆ ಹೊಸ ಸಿನಿಮಾ ಅವಕಾಶ

  By Naveen
  |

  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕ ಪಂಡಿತ್ ಅವರ ಸೂಪರ್ ಹಿಟ್ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ನೋಡಿದವರಿಗೆ ಇಬ್ಬರು ಅವಳಿ ಸಹೋದರಿಯರು ಗಮನ ಸೆಳೆಯುತ್ತಾರೆ. ಸಿನಿಮಾದಲ್ಲಿ ಅವರ ಪಾತ್ರ ಚಿಕ್ಕದಾಗಿದ್ದರೂ, ಈ ಸಹೋದರಿಯರು ನೆನಪಿನಲ್ಲಿ ಉಳಿಯುತ್ತಾರೆ.

  ಸ್ಯಾಂಡಲ್ ವುಡ್ ಸಿನಿಮಾರಂಗದ ಸುಂದರ ಸಹೋದರಿಯರು ಇವರೇ ನೋಡಿ ಸ್ಯಾಂಡಲ್ ವುಡ್ ಸಿನಿಮಾರಂಗದ ಸುಂದರ ಸಹೋದರಿಯರು ಇವರೇ ನೋಡಿ

  ಚಿತ್ರರಂಗದಲ್ಲಿ ಅನೇಕ ಅಕ್ಕ - ತಂಗಿಯರು ಇದ್ದಾರೆ. ಆದರೆ ಅವಳಿ ಸಹೋದರಿಯರು ಇರುವುದು ತೀರಾ ಅಪರೂಪ. ಇನ್ನೂ ಕನ್ನಡದಲ್ಲಿ 'ರಾಮಾಚಾರಿ'ಯ ಅವಳಿ ಸಹೋದರಿಯರು ಎಂದೇ ಫೇಮಸ್ ಆಗಿರುವ ನಟಿಯರು ಅದ್ವಿತಿ ಶೆಟ್ಟಿ ಮತ್ತು ಅಶ್ವಿತಿ ಶೆಟ್ಟಿ. ಮೊದಲು ಸಿನಿಮಾ ಮಾಡಿದ್ದ ಇವರು ನಂತರ ಒಟ್ಟಿಗೆ ಒಂದು ಧಾರಾವಾಹಿಯಲ್ಲಿ ಕೂಡ ಅಭಿನಯಿಸಿದ್ದರು. ಈಗ ಅದ್ವಿತಿ ಶೆಟ್ಟಿ ಮತ್ತೊಂದು ಹೊಸ ಸಿನಿಮಾ ಮಾಡುತ್ತಿದ್ದಾರೆ.

  ಮಂಗಳೂರಿನಲ್ಲಿ ಹುಟ್ಟಿ ಬೆಳೆದ ಅದ್ವಿತಿ ಶೆಟ್ಟಿ ಅವರ ಮಾತೃ ಭಾಷೆ ತುಳು. ಈಗ ಅದ್ವಿತಿ ತುಳು ಭಾಷೆಯಲ್ಲಿ ನಟಿಸುವ ಅವಕಾಶ ಪಡೆದಿದ್ದಾರೆ. ತುಳು ನಟರಾದ ನವೀನ್ ಪಡೀಲ್ ಹಾಗೂ ಭೋಜರಾಜ್ ವಾಮಂಜೂರ್ ಜೊತೆಗೆ ಅದ್ವಿತಿ ಶೆಟ್ಟಿ ನಟಿಸುತ್ತಿದ್ದಾರೆ. ಅದ್ವಿತಿ 'ರಾಮಾಚಾರಿ' ನಂತರ 'ದೊಡ್ಮನೆ ಹುಡ್ಗ' ಮತ್ತು ಪಿ.ಹೆಚ್.ವಿಶ್ವನಾಥ್ ನಿರ್ದೇಶನ 'ಸುಳಿ' ಸಿನಿಮಾದಲ್ಲಿ ನಟಿಸಿದ್ದರು. ಆದರೆ ಈಗ ತುಳು ಚಿತ್ರರಂಗಕ್ಕೆ ಇವರು ಎಂಟ್ರಿ ಕೊಟ್ಟಿದ್ದಾರೆ.

  English summary
  Rocking Star Yash's 'Mr and Mrs Rramachari' movie fame Advithi Shetty makes her debut in Tulu movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X