For Quick Alerts
  ALLOW NOTIFICATIONS  
  For Daily Alerts

  ದೀಪಾ ಸನ್ನಿಧಿ ಜಾಗಕ್ಕೆ ಬಂದ 'ಐಂದ್ರಿತಾ ರೇ'

  By Bharath Kumar
  |

  ಸಿದ್ಧಾರ್ಥ್ ಮಹೇಶ್ ನಟಿಸುತ್ತಿರುವ 'ಗರುಡ' ಚಿತ್ರಕ್ಕೆ ನಾಯಕಿ ಬದಲಾಗಿದ್ದಾರೆ. ಮಾರ್ಚ್ ತಿಂಗಳಲ್ಲಿ ಮುಹೂರ್ತ ಮಾಡಿಕೊಂಡಿದ್ದ 'ಗರುಡ' ಈ ವಾರ ಚಿತ್ರೀಕರಣ ಶುರು ಮಾಡುತ್ತಿದೆ. ಆದ್ರೆ, ಅಂತಿಮ ಕ್ಷಣದಲ್ಲಿ ಚಿತ್ರದ ನಾಯಕಿಯಾದ ದೀಪಾ ಸನ್ನಿಧಿ ಜಾಗಕ್ಕೆ ಮತ್ತೊರ್ವ ಸ್ಯಾಂಡಲ್ ವುಡ್ ನಟಿಯನ್ನ ಕರೆತರಲಾಗಿದೆ.

  ಮೂಲಗಳ ಪ್ರಕಾರ ದೀಪಾ ಸನ್ನಿಧಿ ಖಾಸಗಿ ಕಾರಣಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲವಂತೆ. ಹೀಗಾಗಿ, ದೀಪಾ ಜಾಗಕ್ಕೆ ಸ್ಟಾರ್ ನಟಿಯ ಅವಶ್ಯಕತೆ ಇದ್ದ ಕಾರಣ ಐಂದ್ರಿತಾ ರೇ ಅವರನ್ನ ಹೀರೋಯಿನ್ ಆಗಿ ಫಿಕ್ಸ್ ಮಾಡಲಾಗಿದೆ.

  ಸದ್ಯ, ಬೆಂಗಾಳಿ ಚಿತ್ರಗಳಲ್ಲಿ ಬ್ಯುಸಿಯಾಗಿರುವ ಐಂದ್ರಿತಾ ರೇ ಅವರು ಇತ್ತೀಚೆಗೆ 'ಚೌಕ' ಚಿತ್ರದಲ್ಲಿ ಅಭಿನಯಿಸಿದ್ದರು. ಗೋವಾದಲ್ಲಿ 15 ದಿನಗಳ ಕಾಲ 'ಗರುಡ' ಚಿತ್ರದ ಶೂಟಿಂಗ್ ನಡೆಯಲಿದ್ದು, ಮತ್ತೊಬ್ಬ ನಟಿ ಆಶಿಕಾ ರಂಗನಾಥ ಕೂಡ ನಟಿಸುತ್ತಿದ್ದಾರೆ.

  ಇನ್ನು 'ಸಿಪಾಯಿ' ಚಿತ್ರದ ನಂತರ ಸಿದ್ಧಾರ್ಥ ಮಹೇಶ್ ನಾಯಕನಾಗಿ ಅಭಿನಯಿಸುತ್ತಿರುವ ಎರಡನೇ ಚಿತ್ರ ಇದಾಗಿದ್ದು, ನೃತ್ಯನಿರ್ದೇಶಕ ಧನಕುಮಾರ್ ಚೊಚ್ಚಲ ಬಾರಿಗೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರಸಾದ್ ರೆಡ್ಡಿ ಈ ಚಿತ್ರವನ್ನ ನಿರ್ಮಿಸುತ್ತಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಲಿದ್ದು, ಜೈ ಆನಂದ್ ಅವರ ಛಾಯಗ್ರಹಣ ಚಿತ್ರಕ್ಕಿದೆ.

  English summary
  Siddharth Mahesh-starrer Garuda, Team Had to Change Their Heroine. Deepa Sanniddhi Has Opted Out of the Project, and She will be Replaced by Aindrita Ray.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X