#Metoo ಅಭಿಯಾನ: ತನುಶ್ರೀ ದತ್ತಾ ಪರ ನಿಂತ ಕನ್ನಡದ ಐಂದ್ರಿತಾ ರೇ

#metoo ಅಭಿಯಾನ ಬಾಲಿವುಡ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಸುಮಾರು 10 ವರ್ಷದ ನಂತರ ಲೈಂಗಿಕ ಕಿರುಕುಳ ಆರೋಪ ಮಾಡಿರುವುದು ಈಗ ಎಲ್ಲೆಡೆ ಚರ್ಚೆಯಾಗಿದೆ.

ತನುಶ್ರೀ ದತ್ತಾ ಹೇಳಿಕೆ ನೀಡಿದ ನಂತರ ಇನ್ನು ಹಲವು ನಟಿಯರು ತಮಗಾದ ಕಿರುಕುಳವನ್ನ #metoo ಅಭಿಯಾನದ ಮೂಲಕ ಹೊರಹಾಕುತ್ತಿದ್ದಾರೆ. ನಾನಾ ಪಾಟೇಕರ್, ಕೈಲಾಶ್ ಖೇರ್, ನಟ ಅಲೋಕ್ ನಾಥ್, ನಿರ್ದೇಶಕ ವಿಕಾಸ್ ಭಾಲ್, ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಹಲವರ ಮೇಲೆ ಈಗ ಕಿರುಕುಳದ ಆರೋಪ ಬಂದಿದೆ.

ಈ #metoo ಅಭಿಯಾನ ಸೌತ್ ಕಡೆ ಯಾವಾಗ ಮುಖ ಮಾಡುತ್ತೋ ಎಂಬ ಆತಂಕ ಕಾಡುತ್ತಿರುವಾಗಲೇ ಕನ್ನಡ ನಟಿ ಐಂದ್ರಿತಾ ರೇ ಪ್ರತಿಕ್ರಿಯೆ ನೀಡಿದ್ದಾರೆ.

Kannada actress aindrita ray support thanushree dutta

ನಟಿ ತನುಶ್ರೀ ದತ್ತಾ ಅವರ ಹೋರಾಟಕ್ಕೆ ಮತ್ತು ಅವರು ಮಾಡಿರುವ ಆರೋಪಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾತನಾಡಿದ್ದು, ''ಲೈಂಗಿಕ ದೌರ್ಜನ್ಯದ ವಿರುದ್ಧ ಮಹಿಳೆಯರು ತುಂಬಾ ಸಮಯದ ನಂತರ ಧ್ವನಿ ಎತ್ತುತ್ತಿದ್ದಾರೆ. ಶೋಷಣೆಗೊಳಗಾದವರ ಬಾಯಿ ಮುಚ್ಚಿಸುವ ಪ್ರಯತ್ನ ಸಷ್ಟಿಸಲಾಗುತ್ತಿದೆ. ಹೀಗಾಗಿ, ಅವರ ವಿರುದ್ಧ ಧ್ವನಿ ಎತ್ತದಂತೆ ಮಾಡಲಾಗ್ತಿದೆ'' ಎಂದು ಹೇಳಿದ್ದಾರೆ.

ಜೊತೆಗೆ #istandwithtanushree ಎಂದು ಹ್ಯಾಷ್ ಟ್ಯಾಗ್ ಬಳಸಿ ತನುಶ್ರೀ ದತ್ತಾ ಅವರಿಗೆ ಸಾಥ್ ನೀಡಿದ್ದಾರೆ.

ಬಾಲಿವುಡ್ ನ ಘಟಾನುಘಟಿಗಳ ಹೆಸರು ಬಹಿರಂಗವಾಗಿದ್ದು, ತನುಶ್ರೀ ದತ್ತಾ, ಗಾಯಕಿ ಚಿನ್ಮಯಿ, ಅಧಿರಿ ರಾವ್ ಹೈದರಿ, ಪತ್ರಕರ್ತೆಯರು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

More from Filmibeat

English summary
#metoo movement: Kannada actress aindrita ray support tanushree dutta.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X