twitter
    For Quick Alerts
    ALLOW NOTIFICATIONS  
    For Daily Alerts

    #Metoo ಅಭಿಯಾನ: ತನುಶ್ರೀ ದತ್ತಾ ಪರ ನಿಂತ ಕನ್ನಡದ ಐಂದ್ರಿತಾ ರೇ

    |

    #metoo ಅಭಿಯಾನ ಬಾಲಿವುಡ್ ನಲ್ಲಿ ದೊಡ್ಡ ಸಂಚಲನ ಸೃಷ್ಟಿಸುತ್ತಿದೆ. ಖ್ಯಾತ ನಟ ನಾನಾ ಪಾಟೇಕರ್ ವಿರುದ್ಧ ನಟಿ ತನುಶ್ರೀ ದತ್ತಾ ಸುಮಾರು 10 ವರ್ಷದ ನಂತರ ಲೈಂಗಿಕ ಕಿರುಕುಳ ಆರೋಪ ಮಾಡಿರುವುದು ಈಗ ಎಲ್ಲೆಡೆ ಚರ್ಚೆಯಾಗಿದೆ.

    ತನುಶ್ರೀ ದತ್ತಾ ಹೇಳಿಕೆ ನೀಡಿದ ನಂತರ ಇನ್ನು ಹಲವು ನಟಿಯರು ತಮಗಾದ ಕಿರುಕುಳವನ್ನ #metoo ಅಭಿಯಾನದ ಮೂಲಕ ಹೊರಹಾಕುತ್ತಿದ್ದಾರೆ. ನಾನಾ ಪಾಟೇಕರ್, ಕೈಲಾಶ್ ಖೇರ್, ನಟ ಅಲೋಕ್ ನಾಥ್, ನಿರ್ದೇಶಕ ವಿಕಾಸ್ ಭಾಲ್, ವಿವೇಕ್ ಅಗ್ನಿಹೋತ್ರಿ ಸೇರಿದಂತೆ ಹಲವರ ಮೇಲೆ ಈಗ ಕಿರುಕುಳದ ಆರೋಪ ಬಂದಿದೆ.

    'ಕೋರಿಕೆ ಈಡೇರಿಸು 3 ಸಿನಿಮಾ ಕೊಡ್ತೀನಿ' ಎಂದಿದ್ರು: ಅಧಿತಿ ಬಿಚ್ಚಿಟ್ಟ ಸಂಗತಿ'ಕೋರಿಕೆ ಈಡೇರಿಸು 3 ಸಿನಿಮಾ ಕೊಡ್ತೀನಿ' ಎಂದಿದ್ರು: ಅಧಿತಿ ಬಿಚ್ಚಿಟ್ಟ ಸಂಗತಿ

    ಈ #metoo ಅಭಿಯಾನ ಸೌತ್ ಕಡೆ ಯಾವಾಗ ಮುಖ ಮಾಡುತ್ತೋ ಎಂಬ ಆತಂಕ ಕಾಡುತ್ತಿರುವಾಗಲೇ ಕನ್ನಡ ನಟಿ ಐಂದ್ರಿತಾ ರೇ ಪ್ರತಿಕ್ರಿಯೆ ನೀಡಿದ್ದಾರೆ.

    Kannada actress aindrita ray support thanushree dutta

    ನಟಿ ತನುಶ್ರೀ ದತ್ತಾ ಅವರ ಹೋರಾಟಕ್ಕೆ ಮತ್ತು ಅವರು ಮಾಡಿರುವ ಆರೋಪಕ್ಕೆ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ ಟ್ವಿಟ್ಟರ್ ನಲ್ಲಿ ಮಾತನಾಡಿದ್ದು, ''ಲೈಂಗಿಕ ದೌರ್ಜನ್ಯದ ವಿರುದ್ಧ ಮಹಿಳೆಯರು ತುಂಬಾ ಸಮಯದ ನಂತರ ಧ್ವನಿ ಎತ್ತುತ್ತಿದ್ದಾರೆ. ಶೋಷಣೆಗೊಳಗಾದವರ ಬಾಯಿ ಮುಚ್ಚಿಸುವ ಪ್ರಯತ್ನ ಸಷ್ಟಿಸಲಾಗುತ್ತಿದೆ. ಹೀಗಾಗಿ, ಅವರ ವಿರುದ್ಧ ಧ್ವನಿ ಎತ್ತದಂತೆ ಮಾಡಲಾಗ್ತಿದೆ'' ಎಂದು ಹೇಳಿದ್ದಾರೆ.

    ನಿರ್ಮಾಪಕಿಯಿಂದ ನಟ ಅಲೋಕ್ ನಾಥ್ ಮೇಲೆ ಅತ್ಯಾಚಾರ ಆರೋಪ! ನಿರ್ಮಾಪಕಿಯಿಂದ ನಟ ಅಲೋಕ್ ನಾಥ್ ಮೇಲೆ ಅತ್ಯಾಚಾರ ಆರೋಪ!

    ಜೊತೆಗೆ #istandwithtanushree ಎಂದು ಹ್ಯಾಷ್ ಟ್ಯಾಗ್ ಬಳಸಿ ತನುಶ್ರೀ ದತ್ತಾ ಅವರಿಗೆ ಸಾಥ್ ನೀಡಿದ್ದಾರೆ.

    ತನುಶ್ರೀ ದತ್ತಾ ಬಗ್ಗೆ ಲೇವಡಿ ಮಾಡಿದ್ರಾ ನಟಿ ಪೂನಂ ಪಾಂಡೆ.? ತನುಶ್ರೀ ದತ್ತಾ ಬಗ್ಗೆ ಲೇವಡಿ ಮಾಡಿದ್ರಾ ನಟಿ ಪೂನಂ ಪಾಂಡೆ.?

    ಬಾಲಿವುಡ್ ನ ಘಟಾನುಘಟಿಗಳ ಹೆಸರು ಬಹಿರಂಗವಾಗಿದ್ದು, ತನುಶ್ರೀ ದತ್ತಾ, ಗಾಯಕಿ ಚಿನ್ಮಯಿ, ಅಧಿರಿ ರಾವ್ ಹೈದರಿ, ಪತ್ರಕರ್ತೆಯರು ತಮಗಾದ ಕೆಟ್ಟ ಅನುಭವವನ್ನು ಹಂಚಿಕೊಂಡಿದ್ದಾರೆ.

    English summary
    #metoo movement: Kannada actress aindrita ray support tanushree dutta.
    Tuesday, October 9, 2018, 18:57
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X