ವಿಕ್ರಮ್ ರವಿಚಂದ್ರನ್ ಸಿನಿಮಾಗೆ ಎಂಟ್ರಿ ಕೊಟ್ಟ 'ಪಂಚತಂತ್ರ'ದ ಬೋಲ್ಡ್ ನಟಿ
ಕ್ರೇಜ್ ಸ್ಟಾರ್ ರವಿಚಂದ್ರನ್ ಎರಡನೆ ಪುತ್ರ ವಿಕ್ರಮ್ ರವಿಚಂದ್ರನ್ ಅಭಿನಯದ ಚೊಚ್ಚಲ ಚಿತ್ರ 'ತ್ರಿವಿಕ್ರಮ' ಗಾಗಿ ಭರ್ಜರಿ ತಯಾರಿ ನಡೆಯುತ್ತಿದೆ. ಈಗಾಗಲೆ ಪ್ರಿಪ್ರೊಡಕ್ಷನ್ ಕೆಲಸ ಮುಗಿಸಿ ಚಿತ್ರೀಕರಣಕ್ಕೆ ಸಜ್ಜಾಗಿದೆ ಚಿತ್ರತಂಡ. ಅಂದ್ಹಾಗೆ ಚಿತ್ರಕ್ಕೆ ಈಗಾಗಲೆ ನಾಯಕಿಯ ಆಗಮನ ಕೂಡ ಆಗಿದೆ. ವಿಕ್ರಮ್ ಜೊತೆ ನಾಯಕಿಯಾಗಿ ಮುಂಬೈ ಮೂಲದ ಬೆಡಗಿ ಆಕಾಂಕ್ಷ ಶರ್ಮಾ ಕಾಣಿಸಿಕೊಳ್ಳಲಿದ್ದಾರೆ.
ಆದ್ರೀಗ ಚಿತ್ರತಂಡದಿಂದ ಮತ್ತೊಂದು ಸುದ್ದಿ ಹೊರಬಿದ್ದಿದೆ. ಅಂದ್ರೆ ಚಿತ್ರಕ್ಕೆ ಮತ್ತೋರ್ವ ನಾಯಕಿಯ ಎಂಟ್ರಿಯಾಗಿದೆ. ಹೌದು, ಚಿತ್ರದ ಎರಡನೆ ನಾಯಕಿಯಾಗಿ 'ಪಂಚತಂತ್ರ' ಸಿನಿಮಾದ ಬೆಡಗಿ ಅಕ್ಷರ ಗೌಡ ಎರಡನೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಅಕ್ಷರಾ, ವಿಕ್ರಮ್ ಜೊತೆ ಡ್ಯುಯೆಟ್ ಹಾಡಲು ಸಜ್ಜಾಗಿದ್ದಾರೆ.
ಯೋಗರಾಜ್ ಭಟ್ ನಿರ್ದೇಶನದ 'ಪಂಚತಂತ್ರ' ಸಿನಿಮಾದ ಮೂಲಕ ಕನ್ನಡ ಚಿತ್ರಪ್ರಿಯ ಮನಗೆದ್ದಿರುವ ಅಕ್ಷರಾ, ಈಗ ತ್ರಿವಿಕ್ರಮ ಸಿನಿಮಾ ಮೂಲಕ ಎರಡನೆ ಚಿತ್ರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಚಿತ್ರದಲ್ಲಿ ಅಕ್ಷರಾ ಈಗಿನ ಕಾಲದ ಹುಡುಗಿಯರ ಪ್ರತಿನಿಧಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ನಾಯಕನ ಸುತ್ತನೆ ಸುತ್ತುವ ಪಾತ್ರ ಇದಾಗಿದಿದ್ದು, ಪಕ್ಕ ಮಧ್ಯಮವರ್ಗದ ಹೆಣ್ಣುಮಗಳಾಗಿ ತ್ರಿವಿಕ್ರಮ ಚಿತ್ರದಲ್ಲಿ ಮಿಂಚಲಿದ್ದಾರೆ ಅಕ್ಷರಾ.

ಅಂದ್ಹಾಗೆ 'ಪಂಚತಂತ್ರ' ಚಿತ್ರದ ನಂತರ ಮತ್ತೊಂದು ಉತ್ತಮ ಪಾತ್ರ ಅಕ್ಷರಾ ಅವರನ್ನು ಹುಡುಕಿಕೊಂಡು ಬಂದಿರುವ ಬಗ್ಗೆ ಸಂತಸಗೊಂಡಿದ್ದಾರೆ. ವಿಕ್ರಮ್ ಸ್ವಲ್ಪ ಎತ್ತರ ಇರುವ ಕಾರಣ ಅವರ ಹೈಟ್ ಗೆ ಹೊಂದಿಕೆಯಾಗುವಂತಹ ಹುಡುಗಿಯನ್ನು ಹುಡುತ್ತಿದ್ದ ಚಿತ್ರತಂಡಕ್ಕೆ ಅಕ್ಷರಾ ಕಣ್ಣಿಗೆ ಬಿದ್ದಿದ್ದಾರಂತೆ. ಹಾಗಾಗಿ ವಿಕ್ರಮ್ ಜೊತೆ ಕಾಂಬಿನೇಷನ್ ವರ್ಕೌಟ್ ಆಗಬಹುದು ಎನ್ನುವುದು ಅಕ್ಷರಾ ನಂಬಿಕೆ.
ಇನ್ನು ಚಿತ್ರಕ್ಕೆ ಸಹನಾ ಮೂರ್ತಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಚಿತ್ರಕ್ಕೆ ಹೈ ವೋಲ್ಟೇಜ್ ಲವ್ ಸ್ಟೋರಿ ಎನ್ನುವ ಟ್ಯಾಗ್ ಲೈನ್ ಕೂಡ ಇದೆ. ಈ ಹೆಸರೆ ಹೇಳುವ ಹಾಗೆ ಇದೊಂದು ಪಕ್ಕ ಲವ್ ಸ್ಟೋರಿಯ ಸಿನಿಮಾ. ಈಗಾಗಲೆ ಕುತೂಹಲ ಮೂಡಿಸಿರುವ ತ್ರಿವಿಕ್ರಮ ಸಿನಿಮಾ ವರಮಹಾಲಕ್ಷ್ಮಿ ಹಬ್ಬಕ್ಕೆ ಸೆಟ್ಟೇರಲಿದೆ.


Click it and Unblock the Notifications











