ಕೆಲಸಕ್ಕಾಗಿ ಬೆಂಗಳೂರಿಗೆ ಬಂದ ಹುಡುಗಿ ಈಗ 100 ಐಟಂ ಸಾಂಗ್ ಮಾಡಿದ್ದಾಳೆ

By Naveen

Recommended Video

ಸೆಂಚುರಿ ಸ್ಟಾರ್ ಆದ್ಲು ಬೆಂಗಳೂರು ಬೆಡಗಿ | Filmibeat Kannada

ಐಟಂ ಸಾಂಗ್ ಒಂದು ಸಿನಿಮಾಗೆ ಬಹಳ ಮುಖ್ಯ. ಅದರಲ್ಲಿಯೂ ಮಾಸ್ ಸಿನಿಮಾಗಳಿಗೆ ಐಟಂ ಸಾಂಗ್ ಎನ್ನುವುದು ಊಟಕ್ಕೆ ಉಪ್ಪಿನಕಾಯಿ ಇದ್ದಂತೆ. ಐಟಂ ಸಾಂಗ್ ನಲ್ಲಿ ಹಿಟ್ ಆಗಿ ಬಿಟ್ಟರೆ ಒಂದೇ ದಿನದಲ್ಲಿ ಅದರಲ್ಲಿ ಕುಣಿದ ನಟಿ ಸಹ ಫೇಮಸ್ ಆಗಿ ಬಿಡುತ್ತಾರೆ. ಆದರೆ ಇನ್ನೊಂದು ಕಡೆ ಬರೀ ಒಬ್ಬ ಐಟಂ ಸಾಂಗ್ ಡ್ಯಾನ್ಸರ್ ಆಗಿದ್ದರೆ ಚಿತ್ರರಂಗದಲ್ಲಿ ಹೆಚ್ಚು ಕಾಲ ಉಳಿಯುವುದು ಕಷ್ಟ ಎಂಬುದು ವಾಸ್ತವದ ಸಂಗತಿ.

ಐಟಂ ಸಾಂಗ್ ಎನ್ನುತ್ತಿದ್ದ ಹಾಗೆ ಮುಂಬೈನಿಂದ ಅಥವಾ ಬೇರೆ ಭಾಷೆಗಳಿಂದ ಡ್ಯಾನ್ಸರ್ಸ್ ಕರೆಸುತ್ತಾರೆ. ಜೊತೆಗೆ ಹೀಗೀಗಾ ಹೆಚ್ಚಾಗಿ ಸ್ಟಾರ್ ನಟಿಯರೇ ಐಟಂ ಸಾಂಗ್ ನಲ್ಲಿ ಹೆಜ್ಜೆ ಹಾಕುತ್ತಾರೆ. ಇಂತಹ ಪರಿಸ್ಥಿತಿ ಇದ್ದರೂ ಕನ್ನಡದ ನಟಿಯೊಬ್ಬರು ಈಗ ಐಟಂ ಸಾಂಗ್ ಮೂಲಕ ದಾಖಲೆ ಮಾಡಿದ್ದಾರೆ. ಇನ್ನು 100ರ ಗಡಿಯಲ್ಲಿ ಇರುವ ಈ ನಟಿಯ ಬಗ್ಗೆ ಕೆಲ ವಿವರ ಮುಂದಿದೆ ಓದಿ...

ಸೆಂಚುರಿ ಕ್ವೀನ್ ಆಲಿಶಾ

ಸೆಂಚುರಿ ಕ್ವೀನ್ ಆಲಿಶಾ

ಕನ್ನಡದ ನಟಿ ಆಲಿಶಾ ಈಗ 99 ಸಿನಿಮಾಗಳ ಐಟಂ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಈ ನಟಿ ಸೆಂಚುರಿ ಬಾರಿಸಲು ಒಂದೇ ಒಂದು ಸಿನಿಮಾ ಬಾಕಿ ಇದೆ. ಕಳೆದ ಆರು ವರ್ಷದಿಂದ ಚಿತ್ರರಂಗದಲ್ಲಿ ಇರುವ ಆಲಿಶಾ ವರ್ಷಕ್ಕೆ 16 ರಿಂದ 17 ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಮುಂದಿನ ತಿಂಗಳು ಬಿಡುಗಡೆಯಲಿರುವ 'ಶಿವ ಪಾರು' ಎಂಬ ಸಿನಿಮಾ ಅವರ 99 ಚಿತ್ರವಾಗಿದೆ.

ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು

ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದರು

ಮಂಗಳೂರಿನ ಹುಡುಗಿಯಾಗಿರುವ ಆಲಿಶಾ ಅಲ್ಲಿಯೇ ಓದು ಮುಗಿಸಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದರು. ನಂತರ ಅನಿರೀಕ್ಷಿತವಾಗಿ ಸಿನಿಮಾ ಅವಕಾಶ ಸಿಕ್ಕಿತ್ತು. 'ಮಾಯಾವಿ' ಎಂಬ ಸಿನಿಮಾದ ಐಟಂ ಹಾಡಿನ ಮೂಲಕ ಆಲಿಶಾ ಕನ್ನಡ ಚಿತ್ರರಂಗಕ್ಕೆ ಬಂದರು. ನಂತರ ಒಂದೊಂದೆ ಅವಕಾಶಗಳನ್ನು ಪಡೆದರು.

ಪ್ರಮುಖ ಸಿನಿಮಾಗಳು

ಪ್ರಮುಖ ಸಿನಿಮಾಗಳು

ದರ್ಶನ್ ಅವರ 'ಚಕ್ರವರ್ತಿ', 'ಬ್ಯ್ರಾಂಡ್' 'ಮದುವೆ ದಿಬ್ಬಣ' 'ಚಿನ್ನದ ಗೊಂಬೆ' 'ಶಿವು -ಪಾರು', 'ಹಾಲು ತುಪ್ಪ' ಆಲಿಶಾ ಕಾಣಿಸಿಕೊಂಡಿರುವ ಪ್ರಮುಖ ಸಿನಿಮಾಗಳಾಗಿವೆ. ಕನ್ನಡದ ಜೊತೆಗೆ ಮಲೆಯಾಳಂ, ತೆಲುಗು, ತಮಿಳಿನ ಸಿನಿಮಾದ ಹಾಡಿನಲ್ಲಿಯೂ ಅವರು ಹೆಜ್ಜೆ ಹಾಕಿದ್ದಾರೆ.

ಯಶ್ ಜೊತೆಗೆ ಸಣ್ಣ ಪಾತ್ರ

ಯಶ್ ಜೊತೆಗೆ ಸಣ್ಣ ಪಾತ್ರ

ರಾಕಿಂಗ್ ಸ್ಟಾರ್ ಯಶ್ ಅವರ ಸೂಪರ್ ಹಿಟ್ ಸಿನಿಮಾವಾದ 'ಗಜಕೇಸರಿ' ಸಿನಿಮಾದಲ್ಲಿ ಆಲಿಶಾ ನಟಿಸಿದ್ದಾರೆ. ಸಿನಿಮಾದ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿರುವ ಇವರು ಈ ಮೂಲಕ ಐಟಂ ಸಾಂಗ್ ಮಾತ್ರವಲ್ಲದೆ ಯಶ್ ಜೊತೆಗೆ ತೆರೆ ಹಂಚಿಕೊಂಡಿದ್ದಾರೆ.

ಧನ್ಯವಾದ ತಿಳಿಸಿದ ಆಲಿಶಾ

ಧನ್ಯವಾದ ತಿಳಿಸಿದ ಆಲಿಶಾ

ನೂರು ಸಿನಿಮಾಗಳ ಐಟಂ ಸಾಂಗ್ ಗಳಲ್ಲಿ ಕುಣಿದಿರುವ ಆಲಿಶಾ ಚಿತ್ರರಂಗದ ಎಲ್ಲರಿಗೆ ಈ ವೇಳೆ ಧನ್ಯವಾದ ತಿಳಿಸಿದ್ದಾರೆ. ಅವಕಾಶ ನೀಡಿದ ಎಲ್ಲರಿಗೆ ಹಾಗೂ ಹಾಡು ನೋಡಿ ಇಷ್ಟ ಪಟ್ಟ ಅಭಿಮಾನಿಗಳಿಗೆ ಥ್ಯಾಂಕ್ಯು ಹೇಳಿದ್ದಾರೆ.

More from Filmibeat

English summary
kannada actress Alisha did 99 item songs. Chakravarty, Haalu Thuppa, Maduve Dibbana movie songs are Alisha's popular item songs.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X