ಸಾಕಷ್ಟು ಬ್ರೇಕಪ್ಸ್ ಆಗಿದೆ, ನನ್ನ ಬೆಲೆ ಏನು ಅಂತ ಹೇಳೋಕೆ ಒಬ್ಬ ಗಂಡಸು ಬೇಕಿಲ್ಲ; ಅಮೃತಾ

ನಟಿ ಅಮೃತಾ ಅಯ್ಯಂಗಾರ್ ತಮ್ಮ ಪಾತ್ರಗಳ ಮೂಲಕ ಪ್ರೇಕ್ಷಕರ ಮನಗೆದ್ದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಖತ್ ಆಕ್ಟೀವ್ ಆಗಿದ್ದಾರೆ. ಡಾಲಿ ಧಂಜಯ್ ಹಾಗೂ ಅಮೃತಾ 4 ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇಬ್ಬರ ನಡುವೆ ಸಂಥಿಂಗ್ ಸಂಥಿಂಗ್ ನಡೀತಿದೆ. ಇಬ್ಬರೂ ಮದುವೆ ಆಗುತ್ತಾರೆ ಎಂದು ಕೆಲವರು ಭಾವಿಸಿದ್ದರು. ಅದು ಸುಳ್ಳಾಗಿದೆ.

ಮೈಸೂರಿನಲ್ಲಿ ಅದ್ಧೂರಿಯಾಗಿ ಎರಡು ದಿನಗಳ ಕಾಲ ಧನಂಜಯ್ ಹಾಗೂ ಧನ್ಯತಾ ಮದುವೆ ನಡೆಯಿತು. ಸಾಕಷ್ಟು ಸಿನಿಮಾ ತಾರೆಯರು ಭಾಗಿ ಆಗಿ ಶುಭ ಕೋರಿದರು. ಆದರೆ ಧನಂಜಯ್ ಆಪ್ತ ಸ್ನೇಹಿತೆ ಅಮೃತಾ ಮಾತ್ರ ಕಾಣಿಸಿಕೊಳ್ಳಲೇ ಇಲ್ಲ. ಆಕೆಗೆ ಬೇಸರ ಅದಕ್ಕೆ ಹೋಗಿಲ್ಲ, ಕೊನೆ ಪಕ್ಷ ಒಂದು ಫೋಟೊ ಹಾಕಿ ಜೋಡಿ ಶುಭ ಕೋರಬಹುದಿತ್ತು, ಅದು ಮಾಡಿಲ್ಲ, ನಿಜಕ್ಕೂ ಬೇಸರದಲ್ಲಿದ್ದಾರೆ ಎಂದು ಕೆಲವರು ಕಾಮೆಂಟ್ ಮಾಡುತ್ತಿದ್ದಾರೆ.

Kannada Actress Amrutha iyengar Opened Up About Her Love Breakups

ನಾವಿಬ್ಬರು ಒಳ್ಳೆ ಸ್ನೇಹಿತರು ಎಂದು ಇಬ್ಬರೂ ಹೇಳಿಕೊಂಡು ಬಂದಿದ್ದಾರೆ. ಆದರೂ ಅಭಿಮಾನಿಗಳು ಮಾತ್ರ ಅದನ್ನು ಒಪ್ಪಲು ಸಿದ್ಧರಿರಲಿಲ್ಲ. ಧನ್ಯತಾ ಜೊತೆ ಧನಂಜಯ್ ಮದುವೆ ಘೋಷಣೆ ಆಗುತ್ತಿದ್ದಂತೆ ಕೆಲವರಿಗೆ ಶಾಕ್ ಆಗಿತ್ತು. ಅರೇ ಧನಂಜಯ್- ಅಮೃತಾ ಮದುವೆ ಆಗಲ್ವಾ? ಇಬ್ಬರೂ ಪ್ರೀತಿಸುತ್ತಿರಲಿಲ್ವಾ? ಅಂತೆಲ್ಲಾ ಅಂದುಕೊಂಡಿದ್ದರು. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ನೇರವಾಗಿ ಈ ಬಗ್ಗೆ ಅಮೃತಾ ಅಯ್ಯಂಗಾರ್ ಬಳಿ ಪ್ರಶ್ನೆ ಕೇಳಿದ್ದರು.

ಇತ್ತೀಚೆಗೆ ಗೋಲ್ಡ್ ಕ್ಲಾಸ್ ವಿತ್ ಮಯೂರ ಯೂಟ್ಯೂಬ್ ಸಂದರ್ಶನ ಕಾರ್ಯಕ್ರಮದಲ್ಲಿ ಅಮೃತಾ ಬಹಿರಂಗವಾಗಿಯೇ ಈ ಬಗ್ಗೆ ಮಾತನಾಡಿದ್ದಾರೆ. ನಾವಿಬ್ಬರು ಒಳ್ಳೆ ಸ್ನೇಹಿತರು. ಹುಡುಗ- ಹುಡುಗಿ ಕ್ಯಾಷುವಲ್ ಸ್ನೇಹಿತರಾಗಿ ಇರುವುದು ತಪ್ಪಾ? ದಕ್ಷಿಣದಲ್ಲಿ ಮಾತ್ರ ಹೀಗೆ. ಬಾಲಿವುಡ್‌ನಲ್ಲಿ ಹೀಗೆ ಇಲ್ಲ, ಒಟ್ಟಿಗೆ ನಟಿಸಿ ಹಿಟ್ ಪೇರ್ ಎನಿಸಿಕೊಳ್ಳುವುದು ಇಷ್ಟ. ಒಟ್ಟಿಗೆ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿದರೆ ಜನ ಹೀಗೆ ಅಂದುಕೊಳ್ಳುವುದು ಸಹಜ ಎಂದಿದ್ದರು.

Kannada Actress Amrutha iyengar Opened Up About Her Love Breakups

ಇದೇ ಸಂದರ್ಶನದಲ್ಲಿ ಅಮೃತಾ ಅಯ್ಯಂಗಾರ್ ತಮ್ಮ ಲವ್ ಬ್ರೇಕಪ್‌ ಬಗ್ಗೆ ಮಾತನಾಡಿದ್ದಾರೆ. ಒಂದಲ್ಲ ಸಾಕಷ್ಟು ಲವ್ ಬ್ರೇಕಪ್ಸ್ ಆಗಿದೆ ಎಂದು ಹೇಳಿದ್ದಾರೆ. "ನಾನು ಮನುಷ್ಯಳು. ನನಗೂ ಲವ್ ಬ್ರೇಕಪ್ ಆಗಿದೆ. ಇದರಿಂದ ಬಹಳ ಕಲಿತ್ತಿದ್ದೀನಿ. ಬ್ರೇಕಪ್‌ಗಳು ನನಗೆ ಸಾಕಷ್ಟು ಕಲಿಸಿದೆ. ಕಾಲೇಜು ದಿನಗಳಲ್ಲಿ ಬಹಳ ಕೆಟ್ಟ ಲವ್ ಬ್ರೇಕಪ್‌ ಆಗಿತ್ತು. ಅದರಿಂದ ಹೊರ ಬರಲು ಬಹಳ ಕಷ್ಟ ಆಯ್ತು" ಎಂದು ಅಮೃತಾ ಹೇಳಿದ್ದಾರೆ.

"ಆ ಲವ್ ಬ್ರೇಕಪ್ ಆದಾಗ ನಾನು ಬಹಳ ಡಿಪ್ರೆಸ್ ಕೂಡ ಆಗಿದ್ದೆ. ನನ್ನ ಬೆಲೆ ಏನು ಅಂತ ಹೇಳೋಕೆ ಗಂಡಸು ಬೇಕಿಲ್ಲ ಎನ್ನುವುದು ಈಗ ನನಗೆ ಗೊತ್ತಾಗಿದೆ. ನನ್ನ ಬೆಲೆ ಏನು ಎಂದು ನನಗೆ ಗೊತ್ತಾಗಿದೆ. ಪ್ರೀತಿ ಮಾಡುವುದು ಚೆಂದ. ದೂರ ಆಗುವುದು ಅಷ್ಟೇ ಚೆಂದ. ಅದನ್ನು ಜನ ಸೆಲೆಬ್ರೇಟ್ ಮಾಡಬೇಕು. ಅದರಿಂದ ನೀವು ಸಾಕಷ್ಟು ಕಲಿಯುತ್ತೀರ" ಎಂದು ಅಮೃತಾ ವಿವರಿಸಿದ್ದಾರೆ.

ಈಗಿನ ಕಾಲದವರು ಬಹಳ ಬೇಗ ಎಲ್ಲಾ ಮರೆತು ಮುಂದೆ ಹೋಗುತ್ತಾರೆ. Zenzi ಕಿಡ್ಸ್ ಬ್ರೇಕಪ್‌ ಬಗ್ಗೆ ಬಹಳ ತಲೆ ಕೆಡಿಸಿಕೊಳ್ಳಲ್ಲ. ನಾವೆಲ್ಲಾ ಪ್ರೀತಿಯ ಪಾರಿವಾಳ ಹಾರಿಹೋಯ್ತೊ ಗೆಳೆಯಾ ಅಂತ ಹಾಡಿಕೊಂಡು ಇರ್ತಿದ್ವಿ. ಬಹಳ ಅಳುತ್ತಿದ್ವಿ. ನಾನು ಬ್ರೇಕಪ್ ಆದಾಗ ಬಹಳ ಅತ್ತಿದ್ದೀನಿ. ಈಗಲೂ ಕೆಲವೊಮ್ಮೆ ಅಳ್ತೀನಿ ಎಂದು ಹೇಳಿ ನಕ್ಕಿದ್ದಾರೆ.

More from Filmibeat

English summary
I Have Many Love Breakups, says kannada actress Amrutha Iyengar
Read more about: sandalwood dhananjay
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X