ಪ್ಯಾರಿಸ್ ನಲ್ಲಿ ನಟಿ ಅಮೂಲ್ಯ ಏನ್ ಮಾಡ್ತಿದ್ದಾರೆ?
Recommended Video

ಪ್ಯಾರಿಸ್‌ನಲ್ಲಿ ಅಮ್ಮು-ಜಗ್ಗು...!! | Filmibeat Kannada
ನಟಿ ಅಮೂಲ್ಯ ಈಗ ಪ್ಯಾರಿಸ್ ನಲ್ಲಿ ಇದ್ದಾರೆ. ಪ್ಯಾರಿಸ್ ನ ಸುಂದರ ತಾಣಗಳನ್ನು ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಅವರಿಗೆ ಪತಿ ಜಗದೀಶ್ ಸಾಥ್ ನೀಡಿದ್ದಾರೆ. ಮದುವೆಯ ನಂತರ ಮತ್ತೆ ಈ ಜೋಡಿ ಹನಿಮೂನ್ ಗೆ ಹೋಗಿದೆ.
ಪ್ಯಾರಿಸ್ ಪ್ರಯಾಣ ಮಾಡಿರುವ ಅಮೂಲ್ಯ ಅಲ್ಲಿನ ಐಫೆಲ್ ಟವರ್ ಗೆ ಮುತ್ತಿಟ್ಟಿದ್ದಾರೆ. ವಿದೇಶದಲ್ಲಿ ಕಳೆದ ಮಧುರ ಕ್ಷಣಗಳ ಪೋಟೋಗಳನ್ನು ತಮ್ಮ ಇನ್ಟಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಮೂಲ್ಯ ಅವರ ಫೋಟೋಗಳನ್ನು ಅವರ ಫ್ಯಾನ್ಸ್ ಸೇರಿದಂತೆ ಚಿತ್ರರಂಗದ ಅವರ ಸ್ನೇಹಿತರು ಮೆಚ್ಚಿದ್ದಾರೆ.

ಮದುವೆಯ ನಂತರ ತಮ್ಮ ಮಾವನ ರಾಜಕೀಯ ಪ್ರಚಾರದಲ್ಲಿ ತೊಡಗಿದ್ದ ಅಮೂಲ್ಯ ಈಗ ಆರಾಮಾಗಿ 20 ದಿನ ಪ್ರವಾಸ ಹೋಗಿದ್ದಾರೆ. ಅಮೂಲ್ಯ ವಿವಾಹ ಬಳಿಕ ಸಿನಿಮಾದಿಂದ ದೂರ ಆಗಿದ್ದರು. ಆದರೆ, ಈಗ ಮತ್ತೆ ಅವರು ಸಿನಿಮಾ ಕೆಲಸ ಶುರು ಮಾಡಿದ್ದಾರೆ. ದರ್ಶನ್ ಅವರ ತಂಗಿಯಾಗಿ ಅಮೂಲ್ಯ ಕಾಣಿಸಿಕೊಳ್ಳುತ್ತಿದ್ದಾರೆ.

More from Filmibeat
English summary
Kannada actress Amulya flys to paris with her husband jagadish.


Click it and Unblock the Notifications











