ಅವಳಿ ಮಕ್ಕಳ ಬರ್ತ್‌ಡೇಯಂದು ಆದಿಚುಂಚನಗಿರಿ ಮಠ ಅಮೂಲ್ಯ–ಜಗದೀಶ್ ಭೇಟಿ

By ಫಿಲ್ಮಿಬೀಟ್ ಡೆಸ್ಕ್

ಸ್ಯಾಂಡಲ್‌ವುಡ್‌ನ ಕ್ಯೂಟ್ ಹೀರೊಯಿನ್ ಅಮೂಲ್ಯ ಈಗ ಕೌಟುಂಬಿ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಒಂದು ಕಾಲದಲ್ಲಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದ ನಟಿ, ವಿವಾಹದ ಬಳಿಕ ಪತಿ, ಮಕ್ಕಳು ಅಂತ ಸಾಂಸಾರಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಆದರೆ, ತಮ್ಮ ಅಭಿಮಾನಿಗಳೊಂದಿಗೆ ಸೋಶಿಯಲ್ ಮೀಡಿಯಾದಲ್ಲಿ ನಿರಂತರ ಸಂಪರ್ಕದಲ್ಲಿದ್ದಾರೆ. ತಮ್ಮ ಜೀವನದ ಮಹತ್ವದ ನಿರ್ಧಾರಗಳನ್ನು, ಕ್ಷಣಗಳನ್ನು ಅವರೊಂದಿಗೆ ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ.

ಸ್ಯಾಂಡಲ್‌ವುಡ್‌ನ ಗೋಲ್ಡನ್ ಕ್ವೀನ್ ಅಮೂಲ್ಯ ಸಂಭ್ರಮದಲ್ಲಿದ್ದಾರೆ. ಯಾಕಂದ್ರೆ, ಅವರ ಅವಳಿ ಮಕ್ಕಳ ಬರ್ತ್‌ಡೇ. ಈ ಸಂಬಂಧ ತಮ್ಮ ಅವಳಿ ಮಕ್ಕಳು ಹಾಗೂ ಕುಟುಂಬದೊಂದಿಗೆ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಿದ್ದಾರೆ. ಮಠದಲ್ಲಿ ನಿರ್ಮಲಾನಂದ ಸ್ವಾಮಿಗಳನ್ನು ಭೇಟಿ ಮಾಡಿ, ಅವರ ಆಶೀರ್ವಾದವನ್ನು ಪಡೆದಿದ್ದಾರೆ. ಆ ಮಧುರಕ್ಷಣಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

Kannada Actress Amulya Husband Jagadish Visited Adichunchanagiri Mutt For Twins Birthday

ನಟಿ ಅಮೂಲ್ಯ ಹಾಗೂ ಜಗದೀಶ್‌ಗೆ ಮುದ್ ಅವಳಿ ಮಕ್ಕಳಿದ್ದಾರೆ. ಅಥರ್ವ್ ಮತ್ತು ಅಧವ್ ಅಂತ ಹೆಸರಿಟ್ಟಿದ್ದು, ಅವರ ಹುಟ್ಟುಹಬ್ಬಕ್ಕೆ ಆದಿಚುಂಚನಗಿರಿ ಮಠಕ್ಕೆ ಅಮೂಲ್ಯ ಕುಟುಂಬ ಸಮೇತ ಭೇಟಿ ನೀಡಿದ್ದರು. ನಿರ್ಮಲಾನಂದ ಸ್ವಾಮಿ ಅವರ ಆಶೀರ್ವಾದದ ಜೊತೆಗೆ ಮಠದಲ್ಲಿಯೇ ವಿಶೇಷ ಪೂಜೆಯನ್ನು ಸಲ್ಲಿಸಿ ಬಂದಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದೆ.

ಸ್ಯಾಂಡಲ್‌ವುಡ್‌ನಲ್ಲಿ ಯಶಸ್ಸಿನ ಉತ್ತುಂಗದಲ್ಲಿ ಇರುವಾಗಲೇ ಅಮೂಲ್ಯ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. 2017ರಲ್ಲಿ ಜಗದೀಶ್ ಅವರೊಂದಿಗೆ ನಟಿ ಅಮೂಲ್ಯ ಸಪ್ತಪದಿ ತುಳಿದಿದ್ದರು. ಅಲ್ಲಿಂದ ಸಿನಿಮಾಗೆ ಗುಡ್‌ಬೈ ಹೇಳಿ ಕೌಟುಂಬಿಕ ಜೀವನವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಂಸಾರ, ಮಕ್ಕಳು ಅಂತ ಬ್ಯುಸಿಯಾಗಿದ್ದರೂ, ಚಿತ್ರರಂಗದ ಜೊತೆ ಸಂಪರ್ಕವನ್ನು ಮಾತ್ರ ಕಳೆದುಕೊಂಡಿಲ್ಲ. ಚಿತ್ರರಂಗದವರೊಂದಿಗೆ ಆಗಾಗ ಪಾರ್ಟಿಗಳಲ್ಲಿ ಅಮೂಲ್ಯ ದಂಪತಿ ಕಾಣಿಸಿಕೊಳ್ಳುತ್ತಾರೆ.

Kannada Actress Amulya Husband Jagadish Visited Adichunchanagiri Mutt For Twins Birthday

ಸ್ಯಾಂಡಲ್‌ವುಡ್ ನಿರ್ಮಾಪಕರ ಪಾಲಿಗೆ ಅಮೂಲ್ಯ ನಿಜವಾಗಲೂ ಗೋಲ್ಡನ್ ಗರ್ಲ್ ಆಗಿದ್ದರು. 'ಚೆಲುವಿನ ಚಿತ್ತಾರ', 'ಶ್ರಾವಣಿ ಸುಬ್ರಹ್ಮಣ್ಯ'ದಂತಹ ಸಿನಿಮಾಗಳಲ್ಲಿ ಅಮೂಲ್ಯ ನಟನೆಗೆ ಸಿನಿಪ್ರಿಯರು ಮೆಚ್ಚುಗೆ ಸೂಚಿಸಿದ್ದರು. 'ಚೈತ್ರದ ಚಂದ್ರಮ', 'ಗಜಕೇಸರಿ', 'ಖುಷಿ ಖುಷಿಯಾಗಿ', 'ಮಳೆ', 'ಕೃಷ್ಣ ರುಕ್ಕು', 'ಮಾಸ್ತಿ ಗುಡಿ' ಯೋಗರಾಜ್ ಭಟ್ ನಿರ್ದೇಶಿಸಿದ 'ಮುಗುಳು ನಗೆ' ಸಿನಿಮಾಗಳಲ್ಲಿ ಅಮೂಲ್ಯ ಮಿಂಚಿದ್ದರು. ಆದರೆ, ಮದುವೆ ಬಳಿಕ ನಟನೆಗೆ ಗುಡ್ ಬೈ ಹೇಳಿದ್ದು, ಮತ್ತೆ ಯಾವಾಗ ನಟಿಸುತ್ತಾರೋ ಅಂತ ಅವರು ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

More from Filmibeat

English summary
Kannada Actress Amulya Husband Jagadish Visited Adichunchanagiri Mutt For Twins Birthday, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X