ಪ್ರೀತಿಯ ಅಭಿಮಾನಿಗಳಿಗೆ ನಟಿ ಅಮೂಲ್ಯ ಮನವಿ
'ಚೆಲುವಿನ ಚಿತ್ತಾರ'ದ ನಟಿ ಅಮೂಲ್ಯ ಈ ವರ್ಷ ತಮ್ಮ ಹುಟ್ಟುಹಬ್ಬವನ್ನು (ಸೆಪ್ಟೆಂಬರ್ 14) ಆಚರಣೆ ಮಾಡುತ್ತಿಲ್ಲ. ಈ ಬಗ್ಗೆ ಸೋಷಿಯಲ್ ಮೀಡಿಯಾ ಮೂಲಕ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
''ನಿಮಗೆಲ್ಲಾ ತಿಳಿದಿರುವ ಹಾಗೆ ನಾಳೆ ನನ್ನ ಜನ್ಮದಿನ. ಪ್ರತಿವರ್ಷ ದೂರದೂರುಗಳಿಂದ ಬಂದು ನನ್ನನ್ನು ನೀವು ಹರಸುತ್ತೀರಾ, ಶುಭಾಶಯಗಳನ್ನು ತಿಳಿಸುತ್ತೀರಾ. ನಿಮ್ಮ ಪ್ರೀತಿ, ಅಭಿಮಾನವನ್ನು ಕಂಡು ನಾನು ಮೂಕವಿಸ್ಮಿತಳಾಗಿದ್ದೇನೆ.'' ಎಂದಿರುವ ಅಮೂಲ್ಯ ಹುಟ್ಟುಹಬ್ಬ ಮಾಡಿಕೊಳ್ಳದೆ ಇರುವ ವಿಷಯ ಹಂಚಿಕೊಡಿದ್ದಾರೆ.
''ಈ ಬಾರಿ ಕಾರಣಾಂತರಗಳಿಂದ ನಾನು ಮನೆಯಲ್ಲಿ ಇರುವುದಿಲ್ಲ. ಹೀಗಾಗಿ ನೀವಿರುವ ಸ್ಥಳದಿಂದಲೇ ನನಗೆ ಶುಭ ಹಾರೈಸಿ ಎಂಬ ಕೋರಿಕೆ ನನ್ನದು.'' ಎಂದು ಫೇಸ್ ಬುಕ್ ಹಾಗೂ ಟ್ವಿಟ್ಟರ್ ಖಾತೆಗಳಲ್ಲಿ ಅಮೂಲ್ಯ ಬರೆದುಕೊಂಡಿದ್ದಾರೆ.

'ಪರ್ವ' ಚಿತ್ರದ ಮೂಲಕ ಬಾಲ ನಟಿಯಾಗಿ ಚಿತ್ರರಂಗಕ್ಕೆ ಬಂದ ಅಮೂಲ್ಯ ನಂತರ ನಾಯಕಿಯಾದರು. 'ಚೆಲುವಿನ ಚಿತ್ತಾರ' ಅವರ ಕೆರಿಯರ್ ನ ಹಿಟ್ ಸಿನಿಮಾ. ಅದರ ಬಳಿಕ 'ನಾನು ನನ್ನ ಕನಸು', 'ಶ್ರಾವಣಿ ಸುಬ್ರಹ್ಮಣ್ಯ', 'ಗಜ ಕೇಸರಿ', 'ಮಳೆ', 'ಮಾಸ್ತಿ ಗುಡಿ' 'ಮುಗುಳು ನಗೆ' ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಸದ್ಯ, ಸಿನಿಮಾದಿಂದ ದೂರ ಇರುವ ಅಮೂಲ್ಯ ಗಂಡ, ಮನೆ ಅಂತ ಆರಾಮಾಗಿ ಇದ್ದಾರೆ.


Click it and Unblock the Notifications











