ನೀರು ಉಳಿಸಲು ನಾಲ್ಕು ದಿನವಾದರೂ ಸ್ನಾನ ಮಾಡಲ್ವಂತೆ ಕನ್ನಡದ ಈ ನಾಯಕಿ...!
ನೀರಿನ ಉಳಿತಾಯ ಭವಿಷ್ಯಕ್ಕೆ ತಳಪಾಯ. ನೀರು ಉಳಿಸುವ ಕೆಲಸ ಮನೆಯಿಂದಲೇ ಪ್ರಾರಂಭವಾಗಬೇಕು. ದಿನನಿತ್ಯ ನೀರಿನ ಮಿತಬಳಕೆ ಮಾಡುವುದು ಇಂದಿನ ಅಗತ್ಯವೂ ಹೌದು. ಹೀಗಾಗಿಯೇ ನೀರು ಉಳಿಸಿ ನೆಮ್ಮದಿ ಗಳಿಸಿ ಎಂದು ಅನೇಕರು ಬುದ್ದಿವಾದವನ್ನು ಹೇಳುತ್ತಾರೆ. ಈ ಮಾತನ್ನು ಚಾಚು ತಪ್ಪದೇ ಪಾಲಿಸುವ ಈ ಚೆಲುವೆ ನಾಲ್ಕು ದಿನಕ್ಕೊಮ್ಮೆ ಸ್ನಾನ ಮಾಡುವ ಅಭ್ಯಾಸವನ್ನು ಬೆಳೆಸಿಕೊಂಡಿದ್ದಾರೆ. ಖುದ್ದು ಈ ಮಾತನ್ನು ಖುದ್ದು ನಟಿಯೇ ಒಪ್ಪಿಕೊಂಡಿದ್ದಾರೆ.
ಹೌದು, ಪ್ರೇರಣಾ ಕಂಬಂ ನಿಮಗೆ ಗೊತ್ತಿರಬೇಕು. ಕನ್ನಡದ ಹರಹರ ಮಹಾದೇವ ಧಾರಾವಾಹಿಯಲ್ಲಿ ಚಂದ್ರನ ಪತ್ನಿ ರೇವತಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದವರು ಇವರು. ಆ ನಂತರ ರಂಗನಾಯಕಿ ಧಾರಾವಾಹಿಯ ಮೂಲಕ ಕಳ್ಳಿ ಬಂಗಾರಿ ಎಂದೇ ಜನಜನಿತರಾದ ಪ್ರೇರಣಾ ನಕ್ಷತ್ರ ಧಾರಾವಾಹಿಯಲ್ಲಿ ಕೂಡ ಕಾಣಿಸಿಕೊಂಡರು. ಕಾಲ ಉರುಳಿದಂತೆ ಕಿರುತೆರೆಯಿಂದ ಹಿರಿತೆರೆಗೆ ಬಂದ ಪ್ರೇರಣಾ ಚೂರಿ ಕಟ್ಟೆ ಚಿತ್ರದಲ್ಲಿ ನಾಯಕಿಯ ಪಾತ್ರವನ್ನು ನಿರ್ವಹಿಸಿದ್ದರು.

ಬಳಿಕ ಪೆಂಟಗನ್, ಒಂದಂಕೆ ಕಾಡು, ಆನ, ಫಿಸಿಕ್ಸ್ ಟೀಚರ್ ಚಿತ್ರದಲ್ಲಿ ಅಭಿನಯಿಸಿದ ಪ್ರೇರಣಾ ಆ ನಂತರ ತೆಲುಗು ಕಿರುತೆರೆಗೆ ವಲಸೆ ಹೋದರು. ಕೃಷ್ಣ ಮುಕುಂದ ಮುರಾರಿ ಧಾರಾವಾಹಿಯ ಮೂಲಕ ಅಪಾರ ಜನಪ್ರಿಯತೆಯನ್ನು ಗಳಿಸಿದರು. ಬಿಗ್ ಬಾಸ್ ತೆಲುಗು 08ರಲ್ಲಿ ಕೂಡ ಭಾಗವಹಿಸಿ ನಾಲ್ಕನೇ ಸ್ಥಾನವನ್ನು ಪಡೆದರು.
ಇಂಥಾ ಪ್ರೇರಣಾ ಕಂಬಂ ಮೊನ್ನೆ ತಮ್ಮ ಪತಿ ಶ್ರೀಪಾದ್ ದೇಶಪಾಂಡೆ ಅವರ ಜೊತೆ ತೆಲುಗು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ಈ ಸಮಯದಲ್ಲಿ ತಮ್ಮ ದಾಂಪತ್ಯ ಜೀವನದ ಕುರಿತು ಮಾತನಾಡುತ್ತಿದ್ದ ಶ್ರೀಪಾದ್ ತಮ್ಮ ಪತ್ನಿ ಪ್ರೇರಣಾ ಅವರ ಬಗ್ಗೆ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ನಾಲ್ಕು ದಿನವಾದರೂ ಕೂಡ ನನ್ನ ಹೆಂಡ್ತಿ ಸ್ನಾನನೇ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಮಾತನಾಡಿರುವ ಶ್ರೀಪಾದ್ ಎಲ್ಲರೂ ಬೆಳಗ್ಗೆ ಎದ್ದ ನಂತರ ಸ್ನಾನ ಮಾಡುತ್ತಾರೆ ಆದರೆ ಇವಳು ಎರಡು ಮೂರು ದಿನವಾದರೂ ಕೂಡ ಸ್ನಾನ ಮಾಡುವುದಿಲ್ಲ ಒಮ್ಮೊಮ್ಮೆ ನಾಲ್ಕು ದಿನವಾದರೂ ಕೂಡ ಸ್ನಾನ ಮಾಡದೇ ಇರುತ್ತಾಳೆ ಎಂದಿದ್ದಾರೆ.
ಶ್ರೀಪಾದ್ ಅವರ ಈ ಮಾತು ಕೇಳಿ ನಿಬ್ಬೇರಗಾಗುವ ನಿರೂಪಕಿ ಆ ನಂತರ ದೂರ ಹೋಗಿ ಇವತ್ತಾದರೂ ಸ್ನಾನ ಮಾಡಿದೀರಾ ಇಲ್ವಾ ಎಂದು ಕೇಳಿದ್ದಾರೆ. ಇದಕ್ಕೆ ಪ್ರೇರಣಾ ಇಲ್ಲಿ ಬರುವುದಕ್ಕೆ ಮುನ್ನ ಸ್ನಾನ ಮಾಡಿದೆ ಎಂದು ಹೇಳಿದ್ದಾರೆ. ಶ್ರೀಪಾದ್ ಕೂಡ ಸ್ನಾನ ಮಾಡಿದ್ದಕ್ಕೆ ನಾನು ಆಕೆಯ ಜೊತೆ ಇಲ್ಲಿ ಬಂದಿರುವುದು ಎಂದು ಹೇಳಿದ್ಧಾರೆ. ಮುಂದುವರೆದು ನಾನು ಕೆಲಸಕ್ಕೆ ಹೋಗದಿದ್ದರೆ ಮನೆಯಲ್ಲಿಯೇ ಇರುತ್ತೇನೆ, ಮನೆಯಲ್ಲಿ ಇರುವುದು ಅಂದ್ರೇನು ರಿಲ್ಯಾಕ್ಸ್ ಆಗಿರುವುದು ಎಂದರ್ಥ. ವಿಶ್ರಾಂತಿ ಪಡೆಯುವುದಕ್ಕೆ ಸ್ನಾನ ಯಾಕೆ ಮಾಡಬೇಕು. ನೀರನ್ನು ಉಳಿಸಬೇಕು ನಮ್ಮ ಫ್ಯಾಮಿಲಿಗಾಗಿ ನಾನು ನೀರನ್ನು ಉಳಿಸುತ್ತಿದ್ದೇನೆ ಎಂದು ಪ್ರೇರಣಾ ಕಂಬಂ ಹೇಳಿದ್ಧಾರೆ.
ಆ ನಂತರ ನಾನು ನಿನ್ನ ಹತ್ತಿರ ಬರಬೇಕು ಅಂದರೆ ನೀನು ಸ್ನಾನ ಮಾಡಬೇಕು ಎಂದು ಹೇಳಿದ್ದಾರೆ. ಇದಕ್ಕೆ ನಾನು ಸ್ನಾನ ಮಾಡದೇ ಇದ್ದರೂ ಕೂಡ ನೀನು ಹತ್ತಿರ ಬರ್ತಿಯಲ್ವಾ ಶ್ರೀಪಾದ್ ಎಂದು ಪ್ರೇರಣಾ ತುಂಟ ನಗೆ ಬೀರಿದ್ದಾರೆ. ಆ ನಂತರ ಮದ್ವೆ ಆಗಿದೆ ಅಲ್ವಾ, ಇನ್ನೇನು ಮಾಡಲು ಸಾಧ್ಯ ಎಂದು ಪ್ರೇರಣಾ ಅವರನ್ನು ತಬ್ಬಿಕೊಂಡು ಶ್ರೀಪಾದ್ ತಮಾಷೆ ಮಾಡಿದ್ದಾರೆ. ಸದ್ಯ ಕಾರ್ಯಕ್ರಮದ ಈ ತುಣುಕು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ತರ ತರಹದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ


Click it and Unblock the Notifications











