ಸ್ಯಾಂಡಲ್‌ವುಡ್ ನಟಿ ಮೇಲೆ ಹಲ್ಲೆ: ಸಾಗರದ ಗ್ರಾ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಕನ್ನಡ ಹಾಗೂ ತಮಿಳು ತಮಿಳು ಸಿನಿಮಾಗಳಲ್ಲಿ ಗುರುತಿಸಿಕೊಂಡಿರೋ ನಟಿ ಅನುಗೌಡ ಮೇಲೆ ಹಲ್ಲೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ನಟಿಯ ಮೇಲೆ ಸ್ಥಳೀಯ ನಿವಾಸಿಗಳು ಮಾರಣಾಂತಿಕ ಹಲ್ಲೆ ನಡೆದಿದ್ದಾರೆ.
ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಅನುಗೌಡ ಹಾಗೂ ಸ್ಥಳೀಯ ನಿವಾಸಿಗಳಾದ ನೀಲಮ್ಮ ಹಾಗೂ ಮೋಹನ್ ಎಂಬುವವರ ಮಧ್ಯೆ ಗಲಾಟೆ ನಡೆದಿತ್ತು. ಈ ವೇಳೆ ಅನು ಗೌಡ ಮೇಲೆ ಇಬ್ಬರೂ ಹಲ್ಲೆ ಮಾಡಿದ್ದು ತಲೆಗೆ ಏಟು ಬಿದ್ದಿದೆ. ಈ ಸಂಬಂಧ ಸಾಗರದ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿನಿಮಾ ಹಾಗೂ ಕಿರುತೆರೆ ನಟಿ ಅನುಗೌಡ ಸಾಗರದ ತಾಲೂಕಿನ ಕಾಸ್ಪಾಡಿ ಗ್ರಾಮದ ಸ.ನಂ 43ರಲ್ಲಿ ಜಮೀನು ಹೊಂದಿದ್ದರು. ಈ ಜಮೀನನ್ನು ಅವರ ಅಪ್ಪ-ಅಮ್ಮ ನೋಡಿಕೊಳ್ಳುತ್ತಿದ್ದರು. ಅನುಗೌಡ ಬೆಂಗಳೂರಿನಲ್ಲಿ ಇದ್ದರೂ, ಆಗಾಗ ಬಂದು ನೋಡಿಕೊಂಡು ಹೋಗುತ್ತಿದ್ದರು.
ಜಮೀನಿನ ವಿಚಾರವಾಗಿ ನಟಿ ಅನುಗೌಡಗೆ ಹಾಗೂ ಸ್ಥಳೀಯ ನಿವಾಸಿಗಳಾ ನೀಲಮ್ಮ ಹಾಗೂ ಮೋಹನ್ ಎಂಬುವವರ ಮಧ್ಯೆ ಜಟಾಪಟಿ ನಡೆದು ಹಲ್ಲೆ ನಡೆದಿದೆ. ಅನುಗೌಡ ತಮ್ಮ ಜಮೀನಿಗೆ ತೆರಳಿದಾಗ, ನೀಲಮ್ಮ ಹಾಗೂ ಮೋಹನ್ ಅವ್ಯಾಚ ಶಬ್ಧಗಳಿಂದ ನಿಂದಿಸಿದ್ದರು ಎನ್ನಲಾಗಿದೆ. ಈ ಸಂಬಂಧ ಗಲಾಟೆ ನಡೆದಿದೆ. ಸದ್ಯ ನಟಿ ಅನುಗೌಡ ಸಾಗರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.
ಅನುಗೌಡ ಕನ್ನಡದ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸೂಪರ್‌ಸ್ಟಾರ್ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಕಿರುತೆರೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಶಿವರಾಜ್‌ಕುಮಾರ್, ವಿಷ್ಣುವರ್ಧನ್, ಪುನೀತ್ ರಾಜ್‌ಕುಮಾರ್, ಸುದೀಪ್ ಸೇರಿದಂತೆ ಸ್ಟಾರ್ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಹುಡುಗರು', 'ದಂಡಂ ದಶಗುಣಂ', 'ಸವಿಸವಿ ನೆನಪು','ಸ್ಕೂಲ್ ಮಾಸ್ಟರ್','ಕೆಂಪೇಗೌಡ' ಅಂತಹ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಕನ್ನಡ ಅಷ್ಟೇ ಅಲ್ಲದೆ, ತಮಿಳು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಕಾಲಿವುಡ್‌ನಲ್ಲೂ ಅನುಗೌಡ ತಕ್ಕ ಮಟ್ಟಿಗೆ ಚಿರಪರಿಚಿತರೇ. ಸದ್ಯ ಜಮೀನು ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


Click it and Unblock the Notifications











