Anu Prabhakar: ನಟಿ ಅನು ಪ್ರಭಾಕರ್ ಈ ಹೊಸ ಅವತಾರ ನೋಡಿದ್ದೀರಾ?
ಕನ್ನಡ ಚಿತ್ರರಂಗದ ಹಲವು ನಟಿಯರು ಒಂದು ಕಾಲದಲ್ಲಿ ಸ್ಟಾರ್‌ಗಳಂತೆ ಮಿಂಚಿ ಕೆಲ ಸಮಯದ ನಂತರ ಮರೆಯಾಗಿ ಬಿಡುತ್ತಾರೆ. ಆದರೆ ಇನ್ನೂ ಕೆಲವರು ತಮಗೆ ಒಪ್ಪುವ ಪಾತ್ರಗಳನ್ನು ಆಯ್ಕೆ ಮಾಡಿಕೊಂಡು ನಿರಂತರವಾಗಿ ನಟಿಸುತ್ತಾ ಬರುತ್ತಾರೆ. ಹಾಗೆ ನಟಿ ಅನು ಪ್ರಭಾಕರ್ ಕೊಂಚ ಗ್ಯಾಪ್ ತೆಗೆದುಕೊಂಡು ಈಗ ಮತ್ತೆ ಕಿರುತೆರೆ-ಹಿರಿತೆಯಲ್ಲಿ ಮಿಂಚುತ್ತಾ ಇದ್ದಾರೆ.
ಸ್ಯಾಂಡಲ್‌ವುಡ್‌ನ ಮೋಸ್ಟ್ ಬ್ಯೂಟಿಫುಲ್ ನಟಿಯರ ಸಾಲಿನಲ್ಲಿ ಅನು ಪ್ರಭಾಕರ್ ಕೂಡ ಒಬ್ಬರು. ಇತ್ತೀಚೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ಜೇಮ್ಸ್' ಚಿತ್ರದಲ್ಲಿ ವಿಲನ್ ಪಾತ್ರಧಾರಿ ನಟ ಶ್ರೀಕಾಂತ್ ಮಡದಿಯ ಪಾತ್ರದಲ್ಲಿ ಅಭಿನಯ ಮಾಡಿದ್ದರು. ಅನು ಪ್ರಭಾಕರ್ ಅವರ ಪಾತ್ರ ಮತ್ತು ಅಭಿನಯದ ಎಲ್ಲರಿಗೂ ಇಷ್ಟವಾಗಿದೆ.
ಇದರ ಜೊತೆಗೆ ಅನು ಪ್ರಭಾಕರ್ ಕಿರುತೆಯಲ್ಲೂ ಸಕ್ರಿಯವಾಗಿದ್ದಾರೆ. ಕಿರುತೆರೆಯ ರಿಯಾಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಾ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಹತ್ತು ಹಲವು ವಿಚಾರಗಳ ಬಗ್ಗೆ, ಮನೆ ಮಗು ಕುಟುಂಬದ ಬಗ್ಗೆ ಅನು ಪ್ರಭಾಕರ್ ಮಾತನಾಡುತ್ತಾ ಇರುತ್ತಾರೆ. ಆದರೆ ಈಗ ಅನು ಪ್ರಭಾಕರ್ ತಮ್ಮ ಹೊಸ ಲುಕ್ ಮೂಲಕ ಹೆಚ್ಚಾಗಿ ಗಮನ ಸೆಳೆದಿದ್ದಾರೆ.
ಹಲವು ದಿನಗಳ ಬಳಿಕ ಮೊದಲ ಬಾರಿಗೆ ಅನು ಪ್ರಭಾಕರ್ ಈ ರೀತಿಯ ಫೊಟೋ ಶೂಟ್ ಮಾಡಿಸಿದ್ದಾರೆ. ಅನು ಪ್ರಭಾಕರ್ ಕಲರ್ ಫುಲ್ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿವೆ. ರಾಧೆಯ ಅವತಾರದಲ್ಲಿ ಫೊಟೋ ಶೂಟ್ ಮಾಡಿಸಿದ್ದಾರೆ. ಗುಲಾಬಿ ಮತ್ತು ತಿಳಿ ನೀಲಿ ಬಣ್ಣದ ಲೆಹೆಂಗಾದಲ್ಲಿ ನಟಿ ಅನು ಪ್ರಭಾಕರ್ ಮಿಂಚಿದ್ದಾರೆ.

ನಟ ಶಿವಣ್ಣ ಅವರ ಜೊತೆ ನಟನೆ ಆರಂಭಿಸಿದ ಅನು ಪ್ರಭಾಕರ್ 'ಹೃದಯ ಹೃದಯ' ಸಿನಿಮಾದ ಮೂಲಕ ಹೆಚ್ಚು ಖ್ಯಾತಿ ಪಡೆದರು. ನಂತರ ಹಲವು ವರ್ಷಗಳ ಕಾಲ ಸಿನಿಮಾರಂಗದಲ್ಲಿ ಹೆಚ್ಚು ಹಿಟ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಕೆಲಕಾಲ ಚಿತ್ರರಂಗದಿಂದ ಬ್ರೇಕ್ ತೆಗೆದುಕೊಂಡ ಬಳಿಕ ಈಗ ಮತ್ತೆ ಕಮ್ ಬ್ಯಾಕ್ ಮಾಡಿದ್ದಾರೆ.


Click it and Unblock the Notifications











