'ರಾಬರ್ಟ್' ಡಬ್ಬಿಂಗ್ ನಲ್ಲಿ ಆಶಾ ಭಟ್: ಸಂತಸ ಹಂಚಿಕೊಂಡ ನಟಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಬರ್ಟ್ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಈಗಾಗಲೆ ಚಿತ್ರೀಕರಣ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿಯಾಗಿದೆ. ಹೊಸ ವರ್ಷದಿಂದ, ಅಂದರೆ ಜನವರಿ 1 ರಿಂದ ದರ್ಶನ್ ರಾಬರ್ಟ್ ಚಿತ್ರದ ಡಬ್ಬಿಂಗ್ ಪ್ರಾರಂಭಸಿದ್ದಾರೆ.

ಈಗ ನಟಿ ಆಶಾ ಭಟ್ ಕೂಡ ಮೊದಲ ಕನ್ನಡ ಚಿತ್ರದ ಡಬ್ಬಿಂಗ್ ಪ್ರಾರಂಭಸಿದ್ದಾರೆ. ಡಬ್ಬಿಂಗ್ ನಲ್ಲಿ ಭಾಗಿಯಾದ ಖುಷಿಯನ್ನು ಆಶಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಡಬ್ಬಿಂಗ್ ನಲ್ಲಿ ಭಾಗಿಯಾದ ಪೋಟೋವನ್ನು ಶೇರ್ ಮಾಡಿದ್ದಾರೆ. ಇತ್ತೀಚಿಗೆ ಸಾಕಷ್ಟು ನಟಿಯರು ಡಬ್ಬಿಂಗ್ ಮಾಡುವುದು ತೀರಾ ಕಡಿಮೆ.

ಆದರೆ ಆಶಾ ತನ್ನ ಪಾತ್ರಕ್ಕೆ ತಾನೆ ಧ್ವನಿ ನೀಡುತ್ತಿದ್ದಾರೆ. ಸದ್ಯ ಡಬ್ಬಿಂಗ್ ನಲ್ಲಿ ಇರುವ ಚಿತ್ರತಂಡ ಎರಡನೆ ಲುಕ್ ರಿಲೀಸ್ ಮಾಡಲು ತಯಾರಿ ನಡೆಸುತ್ತಿದ್ದಾರೆ. ಸಂಕ್ರಾಂತಿಗೆ ರಾಬರ್ಟ್ ಎರಡನೆ ಪೋಸ್ಟರ್ ರಿಲೀಸ್ ಆಗುತ್ತಿದೆ. ಈಗಾಗಲೆ ಚಿತ್ರದ ಮೊದಲ ಪೋಸ್ಟರ್ ರಿಲೀಸ್ ಆಗಿದ್ದು ಅಭಿಮಾನಿಗಳ ನಿರೀಕ್ಷೆಯನ್ನು ಹೆಚ್ಚಿಸಿದೆ.

Kannada actress Asha Bhatt busy in Robert kannada film dubbing

ಸ್ಯಾಂಡಲ್ ವುಡ್ ನಲ್ಲಿ ಬಾರಿ ನಿರೀಕ್ಷೆ ಮೂಡಿಸಿರುವ ರಾಬರ್ಟ್ ಬೇಸಿಗೆಯಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ. ಮೂಲಗಳ ಪ್ರಕಾರ ರಾಬರ್ಟ್ ಏಪ್ರಿಲ್ 9ಕ್ಕೆ ರಿಲೀಸ್ ಆಗಲಿದೆ ಎಂದು ಹೇಳಲಾಗುತ್ತಿದೆ. ರಾಬರ್ಟ್ ತರುಣ್ ಸುಧೀರ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಚಿತ್ರದಲ್ಲಿ ವಿಲನ್ ಆಗಿ ಜಗಪತಿ ಬಾಬು ಬಣ್ಣಹಚ್ಚಿದ್ದಾರೆ. ಇನ್ನು ನಟ ವಿನೋದ್ ಪ್ರಬಾಕರ್, ನಟಿಯರಾದ ತೇಜಸ್ವಿನಿ ಪ್ರಕಾಶ್, ಸೋನಲ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ.

More from Filmibeat

English summary
Kannada actress Asha Bhatt busy in Robert kannada film dubbing. This movie is directed by Tharun Sudhir.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X