ಮದುವೆಯಾಗದೇ ಗರ್ಭಿಣಿಯಾದ ಭಾವನಾ, 40ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಲಿರುವ ಚಂದ್ರಮುಖಿ ಪ್ರಾಣಸಖಿ

ಮೂವತ್ತರ ಆಸು ಪಾಸಿನಲ್ಲಿ ಮದುವೆಯಾಗಿ, ಮೂವತ್ತೈದರ ಒಳಗೆ ಮಗುವಾದರೆ ಒಳ್ಳೆಯದು ಎನ್ನುವುದು ಹಿರಿಯರ ಮಾತು. ಆದರೆ ಈಗ ಕಾಲ ಬದಲಾಗಿದೆ. ಬದಲಾದ ಈ ಕಾಲದಲ್ಲಿ ಮದುವೆ ಬೇಡ ಮಕ್ಕಳೂ ಬೇಡ ಎನ್ನುವ ಟ್ರೆಂಡ್ ಶುರುವಾಗಿದೆ. ಲಿವ್ ಇನ್ ಸಂಬಂಧ ಸಾಮಾನ್ಯವಾಗಿದೆ. ಇನ್ನು.. ಮದುವೆ-ಸಂಸಾರವೇ ಬದುಕಿನ ಅಂತಿಮ ಗುರಿಯಲ್ಲ. ಬದುಕಿನ ಖುಷಿ.. ನೆಮ್ಮದಿ.. ಯಾವುದರಲ್ಲಿದೆ ಎನ್ನುವುದನ್ನು ನಾವೇ ಹುಡುಕಿಕೊಳ್ಳಬೇಕು..

ನಮ್ಮ ಆಯ್ಕೆಗಳಿಗೆ ನಾವೇ ಜವಾಬ್ದಾರಿ.. ಎಂಬ ಮಾತುಗಳನ್ನಾಡುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದರ ನಡುವೆ ಎಷ್ಟೇ ದೃಢ ನಿರ್ಧಾರ ಮಾಡಿದರು.. ಜೀವನ ಸಂಗಾತಿಯೇ ಬೇಡ ಎಂದು ಅಂದುಕೊಂಡರು.. ಕೆಲ ಮಹಿಳೆಯರಲ್ಲಿ ತಾಯ್ತನದ ಹಂಬಲ ಮಾತ್ರ ಇದ್ದೇ ಇರುತ್ತೆ. ಹೀಗಾಗಿಯೇ ಐವಿಎಫ್‌ ಅಂದರೆ ಇನ್ ವಿಟ್ರೊ ಫರ್ಟಿಲೈಸೇಶನ್ ಸಹಾಯದಿಂದ ಅನೇಕರು ತಾಯಿಯಾಗುತ್ತಿದ್ದಾರೆ. ಉದಾಹರಣೆಗೆ ಭಾವನಾ ರಾಮಣ್ಣ.

Single amp amp 40 Bhavana Ramanna s IVF Journey to Motherhood Defies Expectations

ಹೌದು.. ಕನ್ನಡ ಚಿತ್ರರಂಗದ ಚಂದ್ರಮುಖಿ ಪ್ರಾಣಸಖಿ.. ಇಂತಿ ನಿನ್ನ ಪ್ರೀತಿಯ ಚಿತ್ರದ ಪರಿಮಳಾ.. ಭಾವನಾ ರಾಮಣ್ಣ ಮದುವೆಯಾಗದೇ ಅಮ್ಮನಾಗುತ್ತಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾ ಮೂಲಕ ಈ ಖುಷಿಯ ವಿಚಾರವನ್ನು ಹಂಚಿಕೊಂಡಿದ್ದಾರೆ.

ಸದ್ಯ ಭಾವನಾ 07 ತಿಂಗಳ ಗರ್ಭಿಣಿಯಾಗಿದ್ದು ಅವಳಿ ಮಕ್ಕಳಿಗೆ ಭಾವನಾ ಜನ್ಮ ನೀಡಲಿದ್ದಾರೆ. ಐವಿಎಫ್ ಸಹಾಯದ ಮೂಲಕ ಭಾವನಾ ಗರ್ಭಿಣಿಯಾಗಿದ್ದು ತಮ್ಮ ಈ ಅನುಭವ ಮತ್ತು ತಮ್ಮ ಈ ನಿರ್ಧಾರದ ಕುರಿತು ''ಟೈಮ್ಸ್ ಆಫ್ ಇಂಡಿಯಾ''ಗೆ ಜೊತೆ ಮಾತನಾಡಿದ್ದಾರೆ. ಮದುವೆಯಾಗದೇ ಅಮ್ಮನಾಗಲು ಕಾರಣವನ್ನು ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ಭಾವನಾ, ತುಂಬಿದ ಮನೆಯಲ್ಲಿ ಬೆಳೆದವಳು ನಾನು, ತಾಯಿ-ತಂದೆ.. ಮೂವರು ಸಹೋದರರು, ಇನ್ನು ಮನೆಯಲ್ಲಿ ಸಂಬಂಧಿಕರು ಮತ್ತು ಸ್ನೇಹಿತರು ನಿರಂತರವಾಗಿ ಬರುತ್ತಲೇ ಇದ್ದರು ಎಂದಿರುವ ಭಾವನಾ, ನನಗೆ ಮಕ್ಕಳ ಜೊತೆ ಕಾಲ ಕಳೆಯುವುದು ಎಂದರೆ ತುಂಬಾ ಇಷ್ಟ ಎಂದು ಹೇಳಿದ್ದಾರೆ.

ನನಗೆ 20 ಮತ್ತು 30 ವರ್ಷವಾದಾಗ ನಾನು ಮಕ್ಕಳ ಬಗ್ಗೆ ಆಲೋಚನೆಯನ್ನು ಮಾಡಿರಲಿಲ್ಲ ಆದರೆ 30ನೇ ವಯಸ್ಸಿನಲ್ಲಿ ನಾನು ಪ್ರೀತಿಯನ್ನು ಎದುರು ನೋಡುತ್ತಿದ್ದೆ ಎಂದಿರುವ ಭಾವನಾ ನಾನು 40ನೇ ವಯಸ್ಸಿಗೆ ಕಾಲಿಟ್ಟಾಗ ತಾಯ್ತನದ ಹಂಬಲ ನನಗೆ ತುಂಬಾ ಕಾಡಲು ಶುರುವಾಯ್ತು, ನನ್ನ ಈ ಆಸೆಯನ್ನು ನಾನೀಗ ಪೂರೈಸಿಕೊಂಡಿದ್ದೇನೆ, ನಾನು ಈಗ ಆರು ತಿಂಗಳ ಗರ್ಭಿಣಿಯಾಗಿದ್ದೇನೆ ಎಂದು ಹೇಳಿದ್ದಾರೆ.

Single amp amp 40 Bhavana Ramanna s IVF Journey to Motherhood Defies Expectations

ಮುಂದುವರೆದು ನಾನು ಎಲ್ಲರಂತೆ ಸಹಜವಾಗಿ ತಾಯ್ತನದ ಸುಖ ಅನುಭವಿಸಲು ಬಯಸಿದ್ದೇ, ಆದರೆ ನನಗೆ ಕಂಕಣ ಭಾಗ್ಯ ಯಾವತ್ತು ಕೂಡಿ ಬರಲೇ ಇಲ್ಲ ಹೀಗಾಗಿಯೇ ಬೇರೆ ಮಾರ್ಗ ಹುಡುಕಬೇಕಾಯ್ತು ಎಂದಿರುವ ಭಾವನಾ ತಾಯಿಯಾಗುವ ಉದ್ದೇಶದಿಂದ ನಾನು ಹಲವಾರು ಐವಿಎಫ್‌ ಕ್ಲಿನಿಕ್‌ಗಳನ್ನು ಹುಡುಕಿದೆ ಆದರೆ ಅವರೆಲ್ಲ ನನಗೆ ಇನ್ನು ಮದುವೆಯಾಗಿಲ್ಲ, ನಾನು ಒಬ್ಬಂಟಿ ಎನ್ನುವ ವಿಚಾರ ಗೊತ್ತಾದ ತಕ್ಷಣ ಫೋನ್ ಕಟ್ ಮಾಡುತ್ತಿದ್ದರು ಎಂದು ಹೇಳಿದ್ದಾರೆ.

ಹೀಗೆ ಒಂದು ದಿನ ನಮ್ಮ ಮನೆಯ ಬಳಿ ಒಂದು ಕ್ಲಿನಿಕ್ ನನ್ನ ಕಣ್ಣಿಗೆ ಬಿತ್ತು ಎಂದು ಹೇಳಿರುವ ಭಾವನಾ, ಅಲ್ಲಿ ನಾನು ಚಿಕಿತ್ಸೆ ಪಡೆಯಲು ಶುರು ಮಾಡಿದೆ, ಅದೃಷ್ಟವಶಾತ್ ಮೊದಲ ಪ್ರಯತ್ನವೇ ಯಶಸ್ವಿಯಾಯ್ತು ಎಂದು ಭಾವನಾ ಹೇಳಿದ್ದಾರೆ. ಇನ್ನು ಮನೆಯಲ್ಲಿ ನಾನು ನನ್ನ ತಂದೆಗೆ ಈ ವಿಚಾರವನ್ನು ಹೇಳಿದ ನಂತರ ಅವರು ತುಂಬಾ ಸಂತೋಷ ಪಟ್ಟರು ಎಂದಿರುವ ಭಾವನಾ ನೀನು ಕೂಡ ಹೆಣ್ಣು, ನಿನಗೂ ಕೂಡ ತಾಯಿಯಾಗುವ ಹಕ್ಕಿದೆ ಎಂದು ಅವರು ಹೇಳಿದರು ಎಂದು ಹೇಳಿದ್ದಾರೆ. ನನ್ನ ಸಹೋದರರು ಕೂಡ ನನ್ನ ಈ ನಿರ್ಧಾರವನ್ನು ಬೆಂಬಲಿಸಿದರು ಎಂದು ಭಾವನಾ '' ಟೈಮ್ಸ್ ಆಫ್ ಇಂಡಿಯಾ''ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

More from Filmibeat

English summary
Discover Bhavana Ramanna's heartwarming story: embracing single motherhood at 40 through IVF, leading to the joyous arrival of her twins. A testament to modern fertility
Read more about: pregnant pregnancy bhavana
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X