ಮುಲಾಜೇ ಇಲ್ಲ ನಾನು ದರ್ಶನ್ ಪರ, ಅವರ ಕೈಬಿಟ್ಟು ಹೋಗುವ ಹೇಡಿ ನಾನಲ್ಲ - ಭಾವನಾ...!

ದರ್ಶನ್ ಆ ಕಡೆ ಜೈಲು ಪಾಲಾದರೆ ಈ ಕಡೆ ದರ್ಶನ್ ಮಾಡಿದ್ದು ಸರೀನಾ, ತಪ್ಪಾ ಅನ್ನುವ ಚರ್ಚೆ ನಡೆಯುತ್ತಿದೆ. ರೇಣುಕಾ ಸ್ವಾಮಿ ಮಾಡಿದ ಕೃತ್ಯದ ಕಥೆ ಬಗ್ಗೆ ಯಾಕೆ ಯಾರು ಮಾತನಾಡುತ್ತಿಲ್ಲ ಎನ್ನುವ ಚರ್ಚೆ ಕೂಡ ನಡೆಯುತ್ತಿದೆ. ಇನ್ನೂ.. ದರ್ಶನ್‌ ವಿಚಾರದಲ್ಲಿ ಕನ್ನಡ ಚಿತ್ರರಂಗದಲ್ಲಿ ಅನೇಕರು ಸದ್ಯಕ್ಕೆ ಮಾತನಾಡುವುದು ಸೂಕ್ತವಲ್ಲ ಎಂದು ನಿರ್ಧರಿಸಿ ಮೌನಕ್ಕೆ ಶರಣಾಗಿದ್ದಾರೆ. ರಮ್ಯಾ, ಸುದೀಪ್, ಸೇರಿ ಕೆಲವೇ ಕೆಲವರಷ್ಟೇ ತಮ್ಮ ಅಭಿಪ್ರಾಯಗಳನ್ನ ಹಂಚಿಕೊಂಡಿದ್ದಾರೆ. ಈ ನಡುವೆ ಭಾವನಾ ರಾಮಣ್ಣ ದರ್ಶನ್ ಪರ ಮಾತನಾಡಿದ್ದಾರೆ. ಮುಲಾಜೇ ಇಲ್ಲ ನಾನು ದರ್ಶನ್ ಪರ ಎಂದಿದ್ದಾರೆ.

ಹೌದು, ಚಂದ್ರಮುಖಿ ಪ್ರಾಣಸಖಿ.. ಇಂತಿ ನಿನ್ನ ಪ್ರೀತಿಯ ಸೇರಿ ಹಲವಾರು ಸಿನಿಮಾಗಳ ಮೂಲಕ ಅನೇಕರ ಹೃದಯ ಗೆದ್ದ ಭಾವನಾ, ದರ್ಶನ್ ಅಭಿನಯದ ಭಗವಾನ್ ಚಿತ್ರದಲ್ಲಿ ಕೂಡ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇಂಥ ಭಾವನಾ ಈಗ ದರ್ಶನ್ ಪರ ಧ್ವನಿ ಎತ್ತಿದ್ದಾರೆ. ಯಾರದ್ದೋ ಮನೆ ಹೆಣ್ಮಕ್ಕಳಿಗೆ ನೀವ್ಯಾಕೆ ಮೆಸೇಜ್ ಮಾಡ್ತೀರಾ.. ? ಯಾವ ತರದ ಮೆಸೆಜ್ ಬಂದಿದೆ ..? ಕೆಲ ಸೋಷಿಯಲ್ ಮಿಡಿಯಾ ಮೆಸೇಜ್ ನೋಡಿದ್ರೆ ಕೆಲ ಹೆಣ್ಣು ಮಕ್ಕಳು ಆತ್ಮಹತ್ಯೆ ಮಾಡಿಕೊಳ್ತಾರೆ. ಕೆಟ್ಟ ಮೆಸೇಜ್ ಬಂದಿದ್ದನ್ನ ಇಗ್ನೋರ್ ಮಾಡೋಕೆ ಆಗಲ್ಲ. ಕೆಟ್ಟ ಮೆಸೇಜ್ ಮಾಡೋಕೆ ಅವರು ಯಾರು..? ಎಂದು ಭಾವನಾ ಕಿಡಿ ಕಾರಿದ್ದಾರೆ. ಹಾಗಂತ ಇದು ಸರಿ, ತಪ್ಪು ಅಂತ ನಾನು ಹೇಳ್ತಿಲ್ಲ. ಇನ್ನೊಂದು ಸೈಡ್‌ ಸ್ಟೋರಿಯನ್ನೂ ನೀವು ತೋರಿಸಬೇಕು ಅಲ್ಲವಾ ಎಂದು ಹೇಳಿದ್ದಾರೆ.

Kannada actress Bhavana Ramanna came out in support of Darshan in the Renukaswamy case

ಇನ್ನೂ ನಾನು ವೈಯಕ್ತಿಕವಾಗಿ ಕಲೆ ಹಾಗೂ ಕಲಾವಿದರ ಪರವಾಗಿ ನಿಂತಿದ್ದೇನೆ ಎಂದು ಕೂಡ ಹೇಳಿರುವ ಭಾವನಾ, ಕೃತ್ಯದ ಬಗ್ಗೆ ತನಿಖೆ ನಡೆಯುತ್ತಿದೆ. ಈಗ ಒಬ್ಬರು ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ ಅಂದ್ರೆ, ಅವರ ಕೈಬಿಟ್ಟು ಹೋಗುವ ಹೇಡಿತನ ನನ್ನಲ್ಲಿ ಇಲ್ಲ ಅಂದಿದ್ದಾರೆ.

ದರ್ಶನ್ ಅವರನ್ನ ನಾನು ಕಲಾವಿದರಾಗಿ ಒಪ್ಪಿಕೊಂಡಿದ್ದೇನೆ ಅಂದ್ರೆ ಮುಂದೆಯೂ ಒಪ್ಪಿಕೊಳ್ತೀನಿ ಎಂದು ಹೇಳಿರುವ ಭಾವನಾ, ಅವರು ಹೀರೋ ಆಗೋಕ್ಕಿಂತ ಮುಂಚೆನೆ ನನಗೆ ಗೊತ್ತು ಎಂದಿದ್ದಾರೆ. ನಾನು ದರ್ಶನ್ ಪರವಾಗಿ ನಿಂತಿದ್ದೇನೆ. ಇದನ್ನ ಹೇಳೋಕೆ ನನಗೆ ಯಾವುದೇ ಹಿಂಜರಿಕೆ ಇಲ್ಲ ಎಂದಿದ್ದಾರೆ. ಇನ್ನೂ.. ರೇಣುಕಾಸ್ವಾಮಿ ಕುಟುಂಬಕ್ಕೆ ನಾನು ಸಾಂತ್ವನ ಹೇಳುತ್ತೇನೆ ಎಂದು ಕೂಡ ಹೇಳಿದ್ದಾರೆ ಭಾವನಾ ರಾಮಣ್ಣ.

kannada-actress-bhavana-ramanna-came-out-in-support-of-darshan-in-the-renukaswamy-case

ಮುಂದುವರೆದು ಮಾತನಾಡಿರುವ ಭಾವನಾ, ಕಾನೂನಿನ ಅಡಿಯಲ್ಲಿ ಏನಾಗುತ್ತೋ ಅದನ್ನ ಒಪ್ಪಿಕೊಳ್ತಿವಿ ಎಂದು ಹೇಳಿದ್ದಾರೆ. ಇನ್ನೂ ಸೋಶಿಯಲ್ ಮೀಡಿಯಾದಲ್ಲಿ ಹೆಣ್ಮಕ್ಕಳಿಗೆ ಆಗ್ತಿರೋ ಸಮಸ್ಯೆ ಅನ್ಯಾಯ ತುಂಬಾ ಇದೆ ಎಂದ ಭಾವನಾ, ಕೆಲವು ಪ್ರಕರಣ ಮಾತ್ರ ಹೊರಗೆ ಬರ್ತಾ ಇದೆ. ತುಂಬಾ ಹೆಣ್ಮಕ್ಜಳಿಗೆ ಕೆಟ್ಟ ಸಂದೇಶ ರವಾನೆ ಆಗಿ ಸಮಸ್ಯೆ ಆಗುತ್ತೆ. ಈ ಘಟನೆ ನಡೆದಿದ್ದು ತುಂಬಾ ನೋವಾಗಿದೆ ಎಂದಿದ್ದಾರೆ. ಕೃತ್ಯ ನಡೆದಿದೆ ನಿಜ ಅದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಹೇಗಾಗಿದೆ ಯಾಕಾಗಿದೆ ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X