ನನ್ನ ಮಕ್ಕಳಿಗೆ ನಿಮ್ಮಪ್ಪ ಯಾರು ಅಂತ ಕೇಳ್ತಾರೆ - ಭಾವನಾ ರಾಮಣ್ಣ !

ಸಮಾಜದಲ್ಲಿ ಬದುಕಬೇಕೆಂದರೆ ಸುತ್ತ ಮುತ್ತ ಇರುವ ಜನರನ್ನು ಪ್ರೀತಿ ಮತ್ತು ಗೌರವದಿಂದ ಕಾಣಬೇಕು. ಕರುಣೆ ಮತ್ತು ಕಾಳಜಿಯನ್ನು ಕೂಡ ಹೊಂದಬೇಕು. ಆದರೆ ಈಗ ಕಾಲ ಮೊದಲಿನಂತೆ ಇಲ್ಲ. ಈ 5G ಯುಗದಲ್ಲಿ ಪ್ರೀತಿ.. ನಂಬಿಕೆ.. ಕರುಣೆ .. ವಿಶ್ವಾಸಕ್ಕೆ ಬೆಲೆ ಇಲ್ಲ. ಮಾನವೀಯತೆಯನ್ನು ಮರೆತು ಅನೇಕರು ಸ್ವಾರ್ಥ ಜೀವನ ನಡೆಸುತ್ತಿದ್ದಾರೆ. ಇನ್ನೂ.. ಸೋಶಿಯಲ್ ಮೀಡಿಯಾಗೆ ಇಂದು ಅನೇಕರು ಶರಣಾಗಿದ್ದಾರೆ.

ಇಲ್ಲಿ ಫೇಸ್ ಬುಕ್.. ಇನ್ಸ್ಟಾಗ್ರಾಮ್.. ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಕಳೆದು ಹೋಗಿದ್ದಾರೆ. ಇದೇ ಹೊತ್ತಿನಲ್ಲಿ ಇಲ್ಲಿ ವಿಕೃತಿಗಳೂ ಹೆಚ್ಚಿಕೊಂಡಿವೆ. ಇಂಥವುಗಳಿಂದ ಮಾನಸಿಕ ನೆಮ್ಮದಿ ಕಳೆದುಕೊಂಡಿದ್ದು ಮಾತ್ರ ಹೆಣ್ಣುಮಕ್ಕಳು, ಮಹಿಳೆಯರು. ಸಾಮಾನ್ಯ ಮಹಿಳೆಯರು ಸೇರಿದಂತೆ ಸಾರ್ವಜನಿಕ ಜೀವನದಲ್ಲಿ ಮುಂಚೂಣಿಯಲ್ಲಿರುವ ಅನೇಕ ಮಹಿಳೆಯರೂ ಟ್ರೋಲಿಂಗ್‌ಗೆ ಒಳಗಾಗಿದ್ದಾರೆ. ಸದ್ಯ ಭಾವನಾ ರಾಮಣ್ಣ ಅವರ ವಿಚಾರದಲ್ಲಿ ಕೂಡ ಅನೇಕರು ಇದೇ ಕೆಲಸವನ್ನು ಮಾಡುತ್ತಿದ್ದಾರೆ.

kannada-actress-bhavana-ramanna-on-ivf-twins-father-question-my-kids-will-face-it

ಹೌದು. ಇಂದಿನ ಕಾಲದಲ್ಲಿ ತಂದೆ-ತಾಯಿ ಇಬ್ಬರು ಇದ್ದರೂ ಕೂಡ ಮಕ್ಕಳನ್ನು ಸಾಕಿ ಸಲುಹುದು ಕಷ್ಟದ ಕೆಲಸ. ಅದರಲ್ಲಿಯೂ ತಾಯಿಯೊಬ್ಬಳೇ ಮಕ್ಕಳನ್ನು ಸಾಕಿ ಉನ್ನತ ಸ್ಥಾನಕ್ಕೆ ಕರೆದೊಯ್ಯುವುದು ಸುಲಭದ ಕೆಲಸ ಅಲ್ಲ. ಈ ಅಸಾಧ್ಯ ಕೆಲಸವನ್ನು ಸದ್ಯ ಭಾವನಾ ಮಾಡಲು ಮುಂದಾಗಿದ್ದಾರೆ. ತಮ್ಮ ಖುಷಿ.. ತಮ್ಮ ಸಂತೃಪ್ತಿಗೋಸ್ಕರ ಮದುವೆಯಾಗದೇ ಐವಿಎಫ್‌ ಅಂದರೆ ಇನ್ ವಿಟ್ರೊ ಫರ್ಟಿಲೈಸೇಶನ್ ಸಹಾಯದಿಂದ ಅನೇಕರು ತಾಯಿಯಾಗುತ್ತಿದ್ದಾರೆ.

ಆದರೆ ಈ ವಿಚಾರ ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿಯೇ ಟ್ರೋಲ್.. ಮೀಮ್ಸ್ ಹೆಸರಿನಲ್ಲಿ ಹಲವರು ಭಾವನಾ ಅವರ ಹಿಂದೆ ಬಿದ್ದಿದ್ದಾರೆ. ತೀರಾ ಅಸಹ್ಯ.. ಅಶ್ಲೀಲ.. ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇನ್ನು ಕೆಲವರು ಇದೆಲ್ಲ ಮಾಡುವ ಬದಲು ಮದ್ವೆನೇ ಆಗಬಹುದಿತ್ತಲ್ಲ ಎಂದು ಕೇಳುತ್ತಿದ್ದಾರೆ. ಮುಂದೆ ನಿಮ್ಮ ಮಕ್ಕಳಿಗೆ ಅಪ್ಪ ಯಾರು ಎಂದು ಕೇಳಿದರೆ ನೀವೇನು ಹೇಳ್ತೀರಾ ಎಂದೆಲ್ಲ ಪ್ರಶ್ನೆ ಮಾಡುತ್ತಿದ್ದಾರೆ. ಈ ಕುರಿತು ಭಾವನಾ ಈಗ ಮಾತನಾಡಿದ್ಧಾರೆ.

''TV9 ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ಭಾವನಾ ಮದುವೆ ಅಂದರೆ ಒಂದು ಜವಾಬ್ಧಾರಿ ಅದಕ್ಕೆ ಅದರದ್ದೇ ಆದ ಚೌಕಟ್ಟಿದೆ ಎಂದು ಹೇಳಿದ್ದಾರೆ. ಪ್ರಪಂಚ ಎಷ್ಟೇ ಆಧುನಿಕವಾಗಲಿ ಹೆಣ್ಣಿಲ್ಲದೇ ಸಂಸಾರ ನಡೆಸಲು ಸಾಧ್ಯ ಇಲ್ಲ ಎಂದು ಹೇಳಿದ್ದಾರೆ. ಇವತ್ತಿನ ಕಾಲಮಾನದಲ್ಲಿ ಸಂಗಾತಿ ಸಿಗುವುದು ಸುಲಭ ಅಲ್ಲ , ಮದ್ವೆಯ ಚೌಕಟ್ಟಿನಲ್ಲಿ ಇರುವ ಪರಿಸ್ಥಿತಿ ಮತ್ತು ಮನಸ್ಥಿತಿ ನನಗೆ ಈಗ ಇಲ್ಲ ಯಾಕೆಂದರೆ ನನಗೆ ಆದ ಜವಾಬ್ಧಾರಿಗಳಿವೆ ಎಂದು ಹೇಳಿರುವ ಭಾವನಾ ನನ್ನ ಪುಟ್ಟ ಪ್ರಪಂಚ ಬಿಟ್ಟು ಬೇರೆಯವರ ಮನೆಯಲ್ಲಿ ಇರುವುದು ನನಗೆ ಕಷ್ಟ ಹೀಗಾಗಿ ಮದುವೆಯಾಗುವುದಕ್ಕಿಂತ ಈ ಮಾರ್ಗ ಉತ್ತಮ ಎಂದು ಹೇಳಿದ್ಧಾರೆ.

kannada-actress-bhavana-ramanna-on-ivf-twins-father-question-my-kids-will-face-it

ಇನ್ನು ಮಕ್ಕಳ ತಂದೆ ಯಾರು ಎನ್ನುವ ಪ್ರಶ್ನೆ ಹೇಗೆ ಎದುರಿಸುತ್ತೀರಾ ಎನ್ನುವ ಪ್ರಶ್ನೆಗೆ ಉತ್ತರ ನೀಡಿರುವ ಭಾವನಾ ನನಗಿಂತ ಹೆಚ್ಚು ನನ್ನ ಮಕ್ಕಳು ಈ ಪ್ರಶ್ನೆಯನ್ನು ಎದುರಿಸಬೇಕಾಗುತ್ತೆ ಎಂದು ಹೇಳಿದ್ದಾರೆ. ಮುಂದೆ ಮಕ್ಕಳು ಮಕ್ಕಳ ಜೊತೆ ಮಾತನಾಡುವಾಗ ಇದೆಲ್ಲ ಬಂದೇ ಬರುತ್ತೆ ಎಂದಿರುವ ಭಾವನಾ ನಾನು ನನ್ನ ಮಕ್ಕಳನ್ನು ಯಾವುದೋ ಹಾಸ್ಟೇಲ್‌ಗೆ ಸೇರಿಸಿ ಅವರನ್ನು ಕತ್ತಲೆಯಲ್ಲಿಡಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾರೆ.

ಸಮಾಜ ಅಂದಮೇಲೆ ಅಪ್ಪಿಕೊಳ್ಳೋರು ಇರುತ್ತಾರೆ.. ಒಪ್ಪಿಕೊಳ್ಳದೇ ಇರೋರು ಇರುತ್ತಾರೆ.. ಈ ಎರಡು ವರ್ಗ ನಮ್ಮ ಸಮಾಜದಲ್ಲಿದೆ ಎನ್ನುವುದು ನನ್ನ ಮಕ್ಕಳಿಗೆ ಗೊತ್ತಾಗಬೇಕು ಎಂದು ಹೇಳಿರುವ ಭಾವನಾ ಎಲ್ಲಿಯವರೆಗೆ ಅವರಲ್ಲಿ ಸಂಸ್ಕಾರ ಸಂಸ್ಕ್ರತಿ ಇರುತ್ತೋ ಅಲ್ಲಿಯವರೆಗೆ ಸಾಧ್ಯ ಎಂದು ಅನ್ಸುತ್ತೆ ಎಂದು ಹೇಳಿದ್ದಾರೆ.

More from Filmibeat

English summary
Bhavana Ramanna on becoming a single mom via IVF: "My kids will face questions about their father." Read her powerful statement
Read more about: pregnant pregnancy bhavana
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X