»   » ಕಳೆದು ಹೋಗಿದ್ದ ಭಾವನಾ ರಾವ್ ತಮಿಳಿನಲ್ಲಿ ಪತ್ತೆ!

ಕಳೆದು ಹೋಗಿದ್ದ ಭಾವನಾ ರಾವ್ ತಮಿಳಿನಲ್ಲಿ ಪತ್ತೆ!

Posted By:
Subscribe to Filmibeat Kannada
ಭಾವನಾ ರಾವ್ ತಮಿಳಿನಲ್ಲಿ ಬಿಜಿಯಾಗಿದ್ದಾರೆ. ನೆನಪಾಯಿತೇ? ಯೋಗರಾಜ ಭಟ್ಟರ 'ಗಾಳಿಪಟ' ಚಿತ್ರದಲ್ಲಿ ಗಾಯಕ, ನಟ ರಾಜೇಶ್ ಕೃಷ್ಣರ ಜೋಡಿಯಾಗಿ 'ಪಾವನಿ' ಪಾತ್ರದಲ್ಲಿ ನಟಿಸಿದ್ದವರೇ ಈ ಭಾವನಾ ರಾವ್. ಚಿತ್ರದಲ್ಲಿ ರಾಜೇಶ್ ಕೃಷ್ಣ ಅವರನ್ನು ಬಹಳಷ್ಟು ಗೋಳು ಹೊಯ್ದುಕೊಂಡಿದ್ದ ಭಾವನಾ, ಕನ್ನಡ ಸಿನಿಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದರು. ಅವರು ನಟಿಸಿದ್ದ 'ನದೀಂ ಧೀಂ ತನಾ...' ಹಾಡು ಅವರನ್ನು ಮನೆಮಾತಾಗಿಸಿತ್ತು.

ಆದರೆ ಗಾಳಿಪಟ ಚಿತ್ರ ಸೂಪರ್ ಹಿಟ್ ಆದರೂ ಭಾವನಾಗೆ ಕನ್ನಡ ಚಿತ್ರರಂಗದಲ್ಲಿ ಅವರೊಪ್ಪುವಂತ ಪಾತ್ರ ಸಿಗಲೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಭಾವನಾ ನೆಲೆಕಂಡುಕೊಳ್ಳತ್ತಾರೆ ಎನ್ನಲಾಗಿತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಗಾಳಿಪಟದ ನಂತರ ನನಗೆ ಅವಕಾಶ ಬರಲಿಲ್ಲ ಎಂಬುದು ಸುಳ್ಳು, ಆಫರ್ ಸಾಕಷ್ಟು ಬಂದಿದ್ದವು. ಆದರೆ ಎಲ್ಲವೂ ಅದೇ ಪಾವನಿ ರೀತಿಯ ಪಾತ್ರಗಳೇ. ಒಂದೇ ರೀತಿಯ ಪಾತ್ರಗಳನ್ನು ಎಷ್ಟಂತ ಮಾಡುವುದು" ಎನ್ನುತ್ತಾರೆ ಭಾವನಾ.

ಕನ್ನಡದಲ್ಲಿ ಬಂದ ಅವಕಾಶಗಲ್ಲಿ ವಿಭಿನ್ನ ಎನಸಿದ 'ವಾರೆವ್ಹಾ', 'ಹಾಲಿಡೇಸ್' ಹಾಗೂ 'ಗಗನಚುಕ್ಕಿ' ಮುಂತಾದ ಚಿತ್ರಗಳನ್ನು ಭಾವನಾ ಒಪ್ಪಿಕೊಂಡರು. ಆದರೆ, ಅವೆಲ್ಲಾ ಎಲ್ಲೋ ತೇಲಿ ಹೋದವು. ಈ ಮಧ್ಯೆ ರಮೇಶ್ ನಿರ್ದೇಶನದ 'ಅಟ್ಟಹಾಸ'ದಲ್ಲಿ ನಟಿಸಿದ್ದಾಗಿದೆ. ಈ ಚಿತ್ರದ 'ಲಂಬಾಣಿ ಹುಡುಗಿ' ಪಾತ್ರ ಭಾವನಾಗೆ ಸಖತ್ ಇಷ್ಟವಾಗಿದೆಯಂತೆ. ಕನ್ನಡದಲ್ಲಿ ಕಳೆದು ಹೋಗಿದ್ದ ಭಾವನಾ ರಾವ್ ತಮಿಳಿನಲ್ಲಿ ಪತ್ತೆಯಾಗಿದ್ದಾರೆ.

"ನನಗೆ ಭಾಷೆಯ ಹಂಗಿಲ್ಲ" ಎಂದಿದ್ದ ಭಾವನಾ ತಮಿಳಿನಲ್ಲಿ 'ಪದಂ ಪರ್ತು ಕದೈ ಸೊಳ್ಳು', 'ವೆನ್ಮೀಂಗಲ್', ಚಿತ್ರಗಳಲ್ಲಿ ನಟಿಸಿ ಅಲ್ಲಿ ಮಿಚುವಲ್ಲಿ ಸಫಲವಾದರು. ಆದರೂ ಕನ್ನಡದಲ್ಲಿ ಪ್ರಸಿದ್ಧಿಗೆ ಬರಲು ಭಾವನಾಗೆ ಇನ್ನೂ ಸಾಧ್ಯವಾಗಿಲ್ಲ. "ನನಗೆ ಕನ್ನಡದಲ್ಲಿ ತೃಪ್ತಿ ಕೊಡುವಂತ ಪಾತ್ರಗಳು ಸಿಕ್ಕಿಲ್ಲ. ಆದರೆ ತಮಿಳಿನಲ್ಲಿ ವಿಭಿನ್ನ ಪಾತ್ರಗಳು ಹುಡುಕಿಕೊಂಡು ಬಂದವು. ಇಲ್ಲಿ ಸಿಗಲಿಲ್ಲವೆಂಬ ನೋವು ನನ್ನನ್ನು ಕಾಡುತ್ತಿದೆ" ಎಂದಿದ್ದಾರೆ ಭಾವನಾ. (ಒನ್ ಇಂಡಿಯಾ ಕನ್ನಡ)

English summary
Kannada Actress Bhavana Rao is now busy in Tamil Movies. Galipata fame actress, this Bhavana Rao is ready to act in all languages. But her condition is that role should be different in every movies. 
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada