twitter
    For Quick Alerts
    ALLOW NOTIFICATIONS  
    For Daily Alerts

    ಅಭಿಮಾನಿಗಳ ಮುಂದೆ ನಟಿ ಭವ್ಯಾ ದಿವ್ಯಾನುಭವಗಳು

    By Rajendra
    |

    Actress Bhavya
    ಎಂಬತ್ತು ಮತ್ತು ತೊಂಬತ್ತರ ದಶಕದಲ್ಲಿ ಕನ್ನಡ ಬೆಳ್ಳಿಪರದೆ ಮೇಲೆ ತಮ್ಮದೇ ಆದಂತಹ ಭಾವುಕ ಪಾತ್ರಗಳಲ್ಲಿ ಛಾವು ಮೂಡಿಸಿದ್ದ ತಾರೆ ಭವ್ಯಾ. ಇವರ ಮೂಲ ಹೆಸರು ಭಾರತಿ. ಕನ್ನಡ, ತೆಲುಗು ಹಾಗೂ ತಮಿಳಿನ ಸುಮಾರು 100ಕ್ಕೂ ಅಧಿಕ ಚಿತ್ರಗಳಲ್ಲಿ ಅಭಿನಯಿಸಿದ ತಾರೆ.

    ಈಗವರು ಕರ್ನಾಟಕ ಚಲನಚಿತ್ರ ಅಕಾಡೆಮಿ ನಡೆಸಿಕೊಂಡು ಬರುತ್ತಿರುವ ವಿಶಿಷ್ಟ ಕಾರ್ಯಕ್ರಮ 'ಬೆಳ್ಳಿಹೆಜ್ಜೆ'ಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಬರುತ್ತಿದ್ದಾರೆ. ಚಿತ್ರರಂಗದಲ್ಲಿನ ತಮ್ಮ ಅನುಭವ, ತಾವು ಇಟ್ಟ ಹೆಜ್ಜೆ ನೆನಪುಗಳನ್ನು ಪ್ರೇಕ್ಷಕರ ಮುಂದೆ ಬಿಚ್ಚಿಡಲಿದ್ದಾರೆ.

    ಆಗಸ್ಟ್ 31ರಂದು ಶನಿವಾರ ಸಂಜೆ 5 ಗಂಟೆಗೆ ಬಾದಾಮಿ ಹೌಸ್ ನ ಪ್ರಿಯದರ್ಶಿನಿ ಚಿತ್ರಮಂದಿರದಲ್ಲಿ ಭವ್ಯಾ ಅವರ ದಿವ್ಯಾನುಭವಗಳನ್ನು ಕಣ್ತುಂಬಿಕೊಳ್ಳಬಹುದು. ಅಂದಹಾಗೆ ಕ್ರೇಜಿಸ್ಟಾರ್ ರವಿಚಂದ್ರನ್ ಜೊತೆಗಿನ 'ಪ್ರಳಯಾಂತಕ' (1984) ಚಿತ್ರದಲ್ಲಿ ಈಜುಡುಗೆಯಲ್ಲಿ ಭವ್ಯಾ ಕಾಣಿಸಿಕೊಂಡು ಎಂಬತ್ತರ ದಶಕದಲ್ಲೇ ಚಿತ್ರರಸಿಕರನ್ನು ಬೆಚ್ಚಗೆ ಮಾಡಿದ್ದರು.

    ಸುಮಾರು 15 ವರ್ಷಗಳ ಕಾಲ ಕಲಾರಸಿಕರನ್ನು ತಮ್ಮ ಚಿತ್ರಗಳ ಮೂಲಕ ರಂಜಿಸಿದ ಭವ್ಯಾ ಅವರು 2000 ಇಸವಿ ಬಳಿಕ ಪೋಷಕ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸದ್ಯಕ್ಕೆ ಅವರು ಮುಂಬೈನಲ್ಲಿ ನೆಲೆಸಿದ್ದು ಶೂಟಿಂಗ್ ಇದ್ದಾಗ ಬೆಂಗಳೂರಿಗೆ ಬಂದು ಹೋಗುತ್ತಿರುತ್ತಾರೆ.

    ಖ್ಯಾತ ನಿರ್ದೇಶಕ ಸಿದ್ದಲಿಂಗಯ್ಯ ಅವರ 'ಪ್ರೇಮ ಪರ್ವ' (1983) ಚಿತ್ರದ ಮೂಲಕ ಭವ್ಯಾ ಅವರ ವೃತ್ತಿ ಬದುಕು ಆರಂಭವಾಯಿತು. ಬಳಿಕ ಅದೇ ವರ್ಷ ಭಾರ್ಗವ ನಿರ್ದೇಶನದಲ್ಲಿ ಬಂದ 'ಪ್ರಾಣ ಸ್ನೇಹಿತ' ಚಿತ್ರದಲ್ಲೂ ಅಭಿನಯಿಸಿದರು. ಆದರೆ ಈ ಚಿತ್ರ ಬಾಕ್ಸ್ ಆಫೀಸಲ್ಲಿ ನಿರೀಕ್ಷಿಸಿದ ಮಟ್ಟದಲ್ಲಿ ಯಶಸ್ಸು ಕಾಣಲಿಲ್ಲ.

    ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 'ಕಲ್ಲು ವೀಣೆ ನುಡಿಯಿತು' ಚಿತ್ರದಲ್ಲಿ ಅಭಿನಯಿಸಿದ್ದಾರೆ. 'ಬಡ್ಡಿ ಬಂಗಾರಮ್ಮ' ಚಿತ್ರದಲ್ಲಿನ ಕಿರುಕುಳಕ್ಕೆ ಒಳಗಾಗುವ ಸೊಸೆ ಪಾತ್ರ ಭವ್ಯಾ ಅವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿತು. ಮುರಳಿ ಜೊತೆ ಅಭಿನಯಿಸಿದ ತಮಿಳಿನ 'ಗೀತಾಂಜಲಿ' ಚಿತ್ರ ಮ್ಯೂಸಿಕಲ್ ಹಿಟ್ ಚಿತ್ರವಾಗಿದೆ.

    ಕನ್ನಡದಲ್ಲಿ ಬ್ರೇಕ್ ಕೊಟ್ಟ ಚಿತ್ರ ಎಂದರೆ ನೀ ಬರದೆ ಕಾದಂಬರಿ ಚಿತ್ರ. ಕೃಷ್ಣ ನೀ ಬೇಗನೆ ಬಾರೋ (1986), ಸಂಗ್ರಾಮ (1987), ಅವಳೇ ನನ್ನ ಹೆಂಡ್ತಿ (1988) ಹಾಗೂ ಎಸ್ ಪಿ ಸಾಂಗ್ಲಿಯಾನ ಚಿತ್ರಗಳು ಭವ್ಯಾ ಅವರಿಗೆ ಅಪಾರ ಜನಪ್ರಿಯತೆಯನ್ನು ತಂದುಕೊಟ್ಟಂತಹ ಚಿತ್ರಗಳು.

    ವಿಷ್ಣುವರ್ಧನ್, ಅಂಬರೀಶ್, ಅನಂತ್ ನಾಗ್, ಶಂಕರ್ ನಾಗ್, ವಿ ರವಿಚಂದ್ರನ್, ಕಾಶಿನಾಥ್ ಜೊತೆಗೆ ಅಭಿನಯಿಸಿದ ಖ್ಯಾತಿ ಭವ್ಯಾ ಅವರದು. ಮೊನಾಲಿಸಾ, ಸಜಿನಿ, ಮೂರ್ಖ ಚಿತ್ರಗಳಲ್ಲಿ ತಾಯಿಯಾಗಿ ಅಭಿನಯಿಸಿದ್ದಾರೆ. ದುರ್ಗಾ ಎಂಬ ಕಿರುತೆರೆ ಧಾರಾವಾಹಿಯಲ್ಲೂ ಭವ್ಯಾ ಅಭಿನಯಿಸಿದ್ದಾರೆ. (ಒನ್ಇಂಡಿಯಾ ಕನ್ನಡ)

    English summary
    Kannada films senior artist Bhavya born as Bharathi, will be the guest of honor at 'Belli Hejje' organized by Karnataka Chalanachitra Academy. She has acted in several Kannada and a few Tamil and Telugu movies, totalling over 15 years of experience in the entertainment industry. The programme organised on 31st August at 5 pm, Badami house, Priyadarshini hall, Bangalore.
    Tuesday, August 27, 2013, 10:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X