ರಕ್ಷಾ ಬಂಧನ ವಿಶೇಷ : ಕನ್ನಡ ನಟಿಯರ ಪ್ರೀತಿಯ ಸಹೋದರರಿವರು
Recommended Video

ಇಂದು ರಕ್ಷಾ ಬಂಧನ. ಅಣ್ಣ ತಂಗಿಯ ಪವಿತ್ರ ಸಂಬಂದದ ಈ ಹಬ್ಬವನ್ನು ಇಡೀ ದೇಶವೇ ಆಚರಣೆ ಮಾಡುತ್ತಿದೆ. ಚಿತ್ರರಂಗದ ನಟಿಯರು ಕೂಡ ತಮ್ಮ ಸಹೋದರರೊಂದಿಗೆ ಖುಷಿಯಿಂದ ಹಬ್ಬ ಆಚರಿಸುತ್ತಿದ್ದಾರೆ.
ಚಿಕ್ಕ ವಯಸ್ಸಿನಿಂದ ಒಟ್ಟಿಗೆ ಬೆಳೆದ ಅಣ್ಣನಿಗೆ ನಟಿಯರು ಪ್ರತಿ ವರ್ಷ ರಾಕಿ ಕಟ್ಟಿ ಶುಭ ಹಾರೈಸುತ್ತಿದ್ದಾರೆ. ಅಣ್ಣನ ಜೊತೆಗಿನ ಈ ಸಂತಸ ಕ್ಷಣವನ್ನು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜೊತೆಗೆ ಅವರು ಹಂಚಿಕೊಂಡಿದ್ದಾರೆ.
ಸಿನಿಮಾದಲ್ಲಿ ಬರೀ ನಟಿಯರನ್ನು ನೋಡಿರುವ ಅವರ ಅಭಿಮಾನಿಗಳಿಗೆ ಅವರ ಕುಟುಂಬದವರ ಪರಿಚಯ ಇರುವುದಿಲ್ಲ. ಆದರೆ, ರಕ್ಷಾ ಬಂಧನದ ದಿನ ನಟಿಯರು ತಮ್ಮ ಅಣ್ಣಂದಿರ ಪರಿಚಯವನ್ನು ಮಾಡಿಕೊಟ್ಟಿದ್ದಾರೆ. ಮುಂದೆ ಓದಿ...

ಅಣ್ಣನ ರೀತಿ ಇದ್ದಾರೆ ಶ್ವೇತಾ ತಮ್ಮ
ನಟಿ, ನಿರೂಪಕಿ ಶ್ವೇತಾ ಚೆಂಗಪ್ಪ ಅವರಿಗೆ ಒಬ್ಬ ತಮ್ಮ ಇದ್ದಾರೆ. ವಯಸ್ಸಿನಲ್ಲಿ ತಮ್ಮ ಆಗಿದ್ದರೂ ಅವರು ಶ್ವೇತಾಗೆ ಅಣ್ಣನ ರೀತಿಯಂತೆ. ರಕ್ಷಾಬಂದನದ ಈ ದಿನ ತಮ್ಮನ ಬಗ್ಗೆ ಈ ರೀತಿ ಶ್ವೇತಾ ಹೇಳಿಕೊಂಡಿದ್ದಾರೆ. ಚಿಕ್ಕ ಮಕ್ಕಳ ರೀತಿ ಈಗಲೂ ಅವರ ಸಹೋದರನ ಜೊತೆಗೆ ಶ್ವೇತಾ ಜಗಳ ಮಾಡುತ್ತಾರಂತೆ.

ಸಹೋದರನ ಜೊತೆ ಸಂಭ್ರಮಿಸುತ್ತಿದ್ದಾರೆ ಶೀತಲ್
ನಿರೂಪಕಿಯಿಂದ ಈಗ ನಟಿಯಾಗಿರುವ ಶೀತಲ್ ಶೆಟ್ಟಿ ಇಂದು ರಕ್ಷಾ ಬಂಧನ ಆಚರಿಸಿದ್ದಾರೆ. ತಮ್ಮ ಸಹೋದರನ ಜೊತೆಗೆ ಇರುವ ಫೋಟೋವನ್ನು ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು ಎಲ್ಲರಿಗೂ ಶುಭಾಶಯ ತಿಳಿಸಿದ್ದಾರೆ. ಸದ್ಯ ಶೀತಲ್ 'ಪತಿ ಬೇಕು.ಕಾಂ' ಸಿನಿಮಾದಲ್ಲಿ ನಟಿಸಿದ್ದು, ಈ ಚಿತ್ರ ಬಿಡುಗಡೆಯ ಹಂತದಲ್ಲಿ ಇದೆ.

ಧೀರೇನ್ ಹಾಗೂ ಧನ್ಯಾ
ದೊಡ್ಮನೆ ಕುಟುಂಬದ ಮೊಮ್ಮಕ್ಕಳು ಕೂಡ ರಕ್ಷಾ ಬಂಧನ ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ನಟ ರಾಮ್ ಕುಮಾರ್ ಅವರ ಮಗಳಾದ ಧನ್ಯಾ ರಾಮ್ ಕುಮಾರ್ ಅವರ ಪ್ರೀತಿಯ ಅಣ್ಣ ಧೀರೇನ್ ರಾಮ್ ಕುಮಾರ್ ರಿಗೆ ಶುಭ ಕೋರಿದ್ದಾರೆ. ''ನನ್ನ ಅಣ್ಣ ಅತ್ಯುತ್ತಮ ತಂಗಿಯನ್ನು ಹೊಂದಿದ್ದಾರೆ'' ಎಂದು ಚಮಕ್ ನೀಡಿದ್ದಾರೆ.

ದರ್ಶನ್ ಪ್ರೀತಿಯ ತಂಗಿ ಸ್ಫೂರ್ತಿ
ನಟ ಚಾಲೆಂಜಿಂಗ್ ಸ್ಟಾರ್ ಅವರನ್ನು ನಟಿ ಸ್ಫೂರ್ತಿ ಸ್ವಂತ ಅಣ್ಣನ ರೀತಿ ನೋಡುತ್ತಿದ್ದಾರೆ. ಈ ದಿನ ದರ್ಶನ್ ಗೆ ಶುಭ ಹಾರೈಸಿರುವ ಅವರು ದರ್ಶನ್ ರೊಂದಿಗೆ ಇರುವ ಅನೇಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ''ನೀವು ತುಂಬ ವಿಶೇಷ, ಯಾವಾಗಲೂ ನಮ್ಮ ಜೊತೆಗೆ ಇರಿ ಅಣ್ಣ'' ಎಂದು ಪ್ರೀತಿಯ ಅಣ್ಣನಿಗೆ ಸಂದೇಶ ಕೊಟ್ಟಿದ್ದಾರೆ.

ಅಮ್ಮನಂತೆ ಇದ್ದಾರೆ ಜಗ್ಗೇಶ್ ಅಕ್ಕಂದಿರು
ರಕ್ಷಾ ಬಂಧನದ ದಿನ ಟ್ವೀಟ್ ಮಾಡಿರುವ ಜಗ್ಗೇಶ್ ''ಅಮ್ಮ ಹೋದರು, ತನ್ನ ಪ್ರತಿನಿಧಿಯನ್ನು ಅಕ್ಕಂದಿರ ರೂಪದಲ್ಲಿ ನೀಡಿಹೋದಳು. ಅಮ್ಮನ ನೆನಪಾದರೆ ಇವರ ಕಂಡು ಸಮಾಧಾನಪಡುವೆ. ಇವರಿಬ್ಬರು ತೋರುವ ಪ್ರೀತಿ ಅಮ್ಮನ ಪ್ರೀತಿಗೆ ಸಮ. ನಾಡಿನ ಎಲ್ಲಾ ನನ್ನ ಸಹೋದರಿಯರಿಗೆ ರಕ್ಷಾ ಬಂಧನ ಶುಭಾಷಯಗಳು.'' ಎಂದು ಪ್ರೀತಿಯ ಅಕ್ಕಂದಿರ ಬಗ್ಗೆ ಹೇಳಿಕೊಂಡಿದ್ದಾರೆ.

ಯಶ್ ಮುದ್ದಿನ ತಂಗಿ ನಂದಿನಿ
ನಟ ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಪ್ರತಿ ವರ್ಷ ರಕ್ಷಾ ಬಂಧನವನ್ನು ತುಂಬ ಚೆನ್ನಾಗಿ ಆಚರಣೆ ಮಾಡುತ್ತಾರೆ. ಈ ವರ್ಷ ಕೂಡ ರಾಕಿಂಗ್ ಸ್ಟಾರ್ ಅವರ ಜೊತೆಗೆ ಅವರ ತಂಗಿ ನಂದಿನಿ ಹಬ್ಬ ಆಚರಿಸಿದ್ದಾರೆ. ತಮ್ಮ ಫೇಸ್ ಬುಕ್ ಖಾತೆಯಲ್ಲಿ ಯಶ್ ಜೊತೆಗೆ ಇರುವ ಫೋಟೋ ಹಾಕಿರುವ ಅವರು ಅಣ್ಣನ ಮುಂದಿನ ಜೀವನಕ್ಕೆ ಶುಭ ಹಾರೈಸಿದ್ದಾರೆ.


Click it and Unblock the Notifications











