ಬೋಲ್ಡ್ ಫೋಟೋಸ್ ಹಂಚಿಕೊಂಡ ನಟಿ ಚೈತ್ರಾ ಜೆ ಆಚಾರ್, ಕನ್ನಡದ ಆಲಿಯಾ ಭಟ್ ಎಂದ ಫ್ಯಾನ್ಸ್
ಸ್ಯಾಂಡಲ್‌ವುಡ್ ಭರವಸೆಯ ನಟಿ ಚೈತ್ರಾ ಜೆ ಆಚಾರ್. ಈ ವರ್ಷ ಬಿಡುಗಡೆಯಾಗಿರುವ ಟೋಬಿ ಮತ್ತು ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಬಿ ಎರಡು ಸಿನಿಮಾಗಳ ಮೂಲಕ ಗಮನ ಸೆಳೆದ ಚೈತ್ರಾ ಜೆ ಆಚಾರ್, ಗಾಯಕಿಯೂ ಹೌದು. ಜೊತೆಗೆ ತಮ್ಮ ಬೋಲ್ಡ್ ಲುಕ್‌ಗಳಿಂದ ಅಭಿಮಾನಿಗಳನ್ನು ಆಗಾಗ್ಗೆ ಶಾಕ್‌ಗೂ ನೂಕುತ್ತಾರೆ.
ಸ್ಯಾಂಡಲ್‌ವುಡ್ ಬ್ಯೂಟಿ ಚೈತ್ರಾ ಜೆ ಆಚಾರ್ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ಆಕ್ಟಿವ್ ಆಗಿರುತ್ತಾರೆ. ಒಂದಲ್ಲಾ ಒಂದು ಫೋಟೋಶೂಟ್ ಮೂಲಕ ತಮ್ಮ ಅಭಿಮಾನಿಗಳ ಜೊತೆಗೆ ಸಂಪರ್ಕ ಇಟ್ಟುಕೊಂಡಿರುತ್ತಾರೆ. ಇತ್ತೀಚೆಗೆ ನಟಿ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಲವು ಮುದ್ದಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ.

ಟೋಬಿ ಬೆಡಗಿಯ ಹೊಸ ಫೋಟೋಶೂಟ್
ಹೊಸ ಫೋಟೋಗಳಲ್ಲಿ ಕಪ್ಪು ಬಣ್ಣದ ಶಾರ್ಟ್ ಟಾಪ್ ಮತ್ತು ನೀಲಿ ಬಣ್ಣದ ಜೀನ್ಸ್ ತೊಟ್ಟು, ಮೇಲೊಂದು ಜಾಕೆಟ್ ಧರಿಸಿ, ರಸ್ತೆಯಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿವಿಧ ಭಂಗಿಯಲ್ಲಿ ಚೈತ್ರಾ ಕ್ಯಾಮೆರಾ ಕಣ್ಣಿಗೆ ಸೆರೆಯಾಗಿದ್ದು, ಸಕತ್ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
ಈ ಫೋಟೋಗಳಿಗೆ ನಟಿ 'Shutter- speed ಎಷ್ಟು..?' ಎಂದು ಶೀರ್ಷಿಕೆ ಕೊಟ್ಟಿದ್ದಾರೆ. 'ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಬಿ' ಬೆಡಗಿಯ ಫೋಟೋಗಳಿಗೆ ನೆಟ್ಟಿಗರು ಲೈಕ್ ಕಾಮೆಂಟ್‌ಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಕೆಲವರು ಹಾಟ್, ಸೆಕ್ಸಿ ಎಂದರೇ, ಮತ್ತೆ ಕೆಲವರು ನಿಮಗೆ ಸೀರೆನೆ ಚೆಂದ ಎಂದು ಹೇಳಿದ್ದಾರೆ.
ಕರ್ನಾಟಕದ ಆಲಿಯಾ ಭಟ್ ಅಂತೆ ನಮ್ಮ ಟೋಬಿ ಬೆಡಗಿ
ಈ ಫೋಟೋಗಳಿಗೆ ಅನೇಕ ಮಂದಿ ನೀವು ಕನ್ನಡದ ಆಲಿಯಾ ಭಟ್ ಎಂದು ಕಾಮೆಂಟ್ ಮಾಡಿದ್ದಾರೆ. ನಟಿ ಚೈತ್ರಾ ಜೆ ಆಚಾರ್ ಅವರನ್ನು ಈ ಹಿಂದೆಯೂ ನೆಟ್ಟಿಗರು ಬಾಲಿವುಡ್ ನಟಿ ಆಲಿಯಾ ಭಟ್‌ಗೆ ಹೋಲಿಸಿದ್ದಾರೆ. ಕೆಲವೊಂದು ಆಂಗಲ್‌ಗಳಿಂದ ಚೈತ್ರಾ ಅವರು ಆಲಿಯಾ ತರಹ ಕಾಣಿಸುತ್ತಾರೆ ಎಂಬುದು ನೆಟ್ಟಿಗರ ಅಭಿಪ್ರಾಯ.
ನೆಗೆಟಿವ್ ಕಾಮೆಂಟ್ ಮಾಡಿದವರಿಗೆ ಕ್ಲಾಸ್!
ಈ ಹಿಂದೆ ನಟಿ ಚೈತ್ರಾ ಜೆ ಆಚಾರ್ ಅವರ ಫೋಟೋಗೆ ತುಂಬಾ ನೆಗೆಟಿವ್ ಕಾಮೆಂಟ್‌ಗಳು ಬಂದಿದ್ದವು. 'ಗರುಡ ಗಮನ ವೃಷಭ ವಾಹನ' ಸಿನಿಮಾ 'ಸೋಜುಗದ ಸೂಜುಮಲ್ಲಿಗೆ' ಹಾಡಿಗೆ 2021ರಲ್ಲಿ ಸೈಮಾ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ದೊರೆತಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಗಾಯಕಿ ಚೈತ್ರಾ ಹಾಕಿದ್ದ ಬಟ್ಟೆಯ ಬಗ್ಗೆಯೂ ಕೀಳು ಮಟ್ಟದ ಕಾಮೆಂಟ್ ಮಾಡಲಾಗಿತ್ತು.

ಆದರೆ, ಇಂತಹ ಕಾಮೆಂಟ್‌ಗಳಿಗೆ ನಟಿ ತಲೆ ಕೆಡಿಸಿಕೊಂಡಿಲ್ಲ. ನೆಗೆಟಿವ್ ಆಗಿ ಕಾಮೆಂಟ್ ಮಾಡುತ್ತಾ ಟ್ರೋಲ್ ಮಾಡುವವರಿಗೆ ಸಕತ್ ಆಗಿಯೇ ತಿರುಗೇಟು ನೀಡಿದ್ದರು. ತಾವು ಇಂತಹ ಕಾಮೆಂಟ್‌ಗಳಿಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಎಲ್ಲಿ ಯಾವ ತರಹ ಇರಬೇಕು ಅನ್ನೋದು ನನಗೆ ಚೆನ್ನಾಗಿ ಗೊತ್ತು. ಇದೆಲ್ಲಾ ನನ್ನ ಪೋಷಕರು ಮತ್ತು ಶಿಕ್ಷಕರು ನನಗೆ ಕಲಿಸಿದ್ದಾರೆ ಎಂದಿದ್ದಾರೆ.
ನಟಿ ಚೈತ್ರಾ ಜೆ ಆಚಾರ್ 2023ರಲ್ಲಿ ತೆರೆ ಕಂಡ 'ಟೋಬಿ' ಮತ್ತು ಇತ್ತೀಚೆಗೆ ತೆರೆ ಕಂಡ 'ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಬಿ' ಚಿತ್ರದಲ್ಲಿ ನಟಿಸಿದ್ದಾರೆ. ಟೋಬಿಯ ಜೆನ್ನಿ ಪಾತ್ರ ಅವರಿಗೆ ಹೆಸರು ತಂದುಕೊಟ್ಟಿತು. ಇದಾದ ನಂತರ ನಟಿ ದೀಕ್ಷಿತ್ ಶೆಟ್ಟಿ ಜೊತೆಗೆ 'ಬ್ಲಿಂಕ್' ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕನ್ನಡ ಸಿನಿರಂಗದ ಬ್ಯುಸಿ ನಟಿಯಾಗಿದ್ದಾರೆ.


Click it and Unblock the Notifications











